ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಉಪೇಂದ್ರ ವಿರುದ್ಧ ಬಿತ್ತು ಕೇಸ್

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 02: 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' (ಕೆಪಿಜೆಪಿ) ದ ಮುಖಂಡ ನಟ, ನಿರ್ದೇಶಕ ಉಪೇಂದ್ರ ಅವರ ವಿರುದ್ಧ ದೂರು ದಾಖಲಾಗಿದೆ. ಜೆಡಿಯು ಮುಖಂಡ ನಾಗೇಶ್ ಎಂಬುವರು ಉಪೇಂದ್ರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ

ಹೊಸ ಪಕ್ಷ ಘೋಷಣೆ ವೇಳೆ ಗಾಂಧಿ ಭವನದಲ್ಲಿ ಭಾಷಣ ಮಾಡಿದ ಉಪೇಂದ್ರ ಅವರು ತಮ್ಮ ಅಭಿಮಾನಿಗಳನ್ನು ಪ್ರಚೋದಿಸುವ ಭರದಲ್ಲಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

Complaint filed against KPJP leader Actor Director Upendra

ಚುನಾವಣೆಯ ಸಂದರ್ಭದಲ್ಲಿ ಯಾರಾದರೂ ಅಭ್ಯರ್ಥಿಗಳು ಹಣ ನೀಡಿದರೆ ತೆಗೆದುಕೊಳ್ಳಿ, ಆದರೆ, ನಿಮಗೆ ಇಷ್ಟ ಬಂದವರಿಗೆ ಮಾತ್ರ ಮತ ಹಾಕಿ ಎಂದು ಉಪೇಂದ್ರ ಹೇಳಿದ್ದರು.

ಕೆಪಿಜೆಪಿ ಸ್ಥಾಪನೆ ಮಾಡಿದ ಉಪೇಂದ್ರ : ಯಾರು, ಏನು ಹೇಳಿದರು?ಕೆಪಿಜೆಪಿ ಸ್ಥಾಪನೆ ಮಾಡಿದ ಉಪೇಂದ್ರ : ಯಾರು, ಏನು ಹೇಳಿದರು?

ಮತದಾರರಿಗೆ ಪ್ರಚೋದನೆ ನೀಡುವ ಮೂಲಕ ಅವರಿಗೆ ಆಮಿಷ ಒಡ್ಡಿದ್ದಾರೆ, ಭ್ರಷ್ಟಾಚಾರಕ್ಕೆ ಪ್ರೇರಿಪಿಸಿದ್ದಾರೆ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಚಾರದ ಆರೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್ ನಾಗೇಶ್ ಅವರು ಇಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

English summary
JDU leader Nagesh has filed complaint against Karnataka Prajnavantara Janatha Party Hon. President, actor director Upendra. Upendra allegedly asked his followers to accept bribe and not to vote which is against the democracy said Nagesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X