ನೀರಿಗೆ ಬರ, ಬೆಂಗಳೂರಿಗೆ ವಾರಕ್ಕೊಮ್ಮೆ ನೀರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 22 : ರಾಜ್ಯದಲ್ಲಿನ ಭೀಕರ ಬರಗಾಲದ ಪರಿಸ್ಥಿತಿ ಉದ್ಯಾನ ನಗರಿ ಬೆಂಗಳೂರಿಗೂ ತಟ್ಟಲಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ವಾರಕ್ಕೊಮ್ಮೆ ನಗರಕ್ಕೆ ನೀರು ಪೂರೈಕೆ ಮಾಡಲು ಜಲಮಂಡಳಿ ನಿರ್ಧರಿಸಿದೆ.

ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಹಲವು ಮೂಲಗಳಿವೆ. ಇವುಗಳಲ್ಲಿ ಶೇ 80ರಷ್ಟು ನೀರು ಕಾವೇರಿ ನದಿಯಿಂದ ಬರುತ್ತದೆ. ಅರ್ಕಾವತಿ ನದಿ ಮೂಲಕ ಶೇ 20ರಷ್ಟು ನೀರನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ, ಮುಂಗಾರು ಕೈಕೊಟ್ಟು ಬರ ಪರಿಸ್ಥಿತಿ ಎದುರಾದ ಕಾರಣ. ಜಲಾಶಯದಲ್ಲಿನ ನೀರಿನ ಮಟ್ಟ ಕುಸಿದಿದೆ. [KRS ನಲ್ಲಿ ಎಷ್ಟು ನೀರಿದೆ ಗೊತ್ತಾ?]

ಬೆಂಗಳೂರು ಜಲಮಂಡಳಿ ಪ್ರಸ್ತುತ ನಗರಕ್ಕೆ 900 ಮಿಲಿಯನ್ ಲೀಟರ್ (238 ಮಿಲಿಯನ್ ಗ್ಯಾಲನ್) ನೀರನ್ನು ಪೂರೈಕೆ ಮಾಡುತ್ತಿದೆ. ನಗರದ ಪ್ರತಿದಿನ ಬೇಡಿಕೆ 1.3 ಬಿಲಿಯನ್ ಲೀಟರ್. ಸದ್ಯ, ವಾರದಲ್ಲಿ ಮೂರು ದಿನ ನಗರಕ್ಕೆ ನೀರು ಪೂರೈಸಲಾಗುತ್ತಿದೆ.

bwssb

ಸೋಮವಾರ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 84.22 ಅಡಿಗೆ ಕುಸಿದಿದೆ. ಜಲಾಶಯದ ನೀರಿನ ಮಟ್ಟ 74.6 ಅಡಿ ತಲುಪುವವರೆಗೆ ನಾಲೆಗಳಿಗೆ ನೀರು ಹರಿಸಬಹುದಾಗಿದೆ. 74.6 ಅಡಿಯಿಂದ 60 ಅಡಿ ಮಟ್ಟದವರೆಗಿನ ನೀರನ್ನು ಕುಡಿಯುವ ನೀರಿಗಾಗಿ ಮೀಸಲಾಗಿಡಬೇಕು. ಜಲಾಶಯದ ನೀರಿನಮಟ್ಟ 60 ಅಡಿಗೆ ಕುಸಿದರೆ ಡೆಡ್‌ ಸ್ಟೋರೇಜ್‌ ತಲುಪುತ್ತದೆ. ಆ ನೀರನ್ನು ಯಾವ ಉದ್ದೇಶಕ್ಕೂ ಬಳಕೆ ಮಾಡಲು ಸಾಧ್ಯವಿಲ್ಲ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ವಾರಕ್ಕೊಮ್ಮೆ ನಗರಕ್ಕೆ ನೀರು ಪೂರೈಕೆ ಮಾಡಲು ಜಲಮಂಡಳಿ ನಿರ್ಧರಿಸಿದೆ. ಮುಂಗಾರು ಬರುವ ತನಕ ವಾರಕ್ಕೊಮ್ಮೆ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಪರಿಹಾರವೇನು?: ಮೇ ಅಂತ್ಯಕ್ಕೆ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ಅವಧಿಗೆ ಮುನ್ನವೇ ಮಳೆ ಬರಲಿ ಎಂದು ಪ್ರಾರ್ಥಿಸುವುದೊಂದೇ ನಮ್ಮ ಮುಂದಿರುವ ಪರಿಹಾರ. ಜಲಮಂಡಳಿ ಬೆಂಗಳೂರಿನ ನೀರಿನ ಪರಿಸ್ಥಿತಿ ಕುರಿತು ಸೂಕ್ಷವಾಗಿ ಅವಲೋಕನ ನಡೆಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Water levels at the KRS reservoir dropping to 85 feet in the past week. the troubles ahead are immense. Bengaluru city too will be affected largely due to this. Currently the BWSSB has been supplying water to the residents of the city thrice a week. However if this situation continues, then it will be reduced to once a week.
Please Wait while comments are loading...