ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

Posted By:
Subscribe to Oneindia Kannada

ಬೆಂಗಳೂರು, ಜೂನ್ 01: ನಗರದ ಹೊಚ್ಚ ಹೊಸ ಆಕರ್ಷಣೆಯಾಗಿರುವ ಮೆಟ್ರೋ ಸುರಂಗ ಮಾರ್ಗದಲ್ಲಿ ಮಂಗಳವಾರ ರಾತ್ರಿ ಕೆಲಕಾಲ ಪ್ರಯಾಣಿಕರು ಗಾಬರಿಯಿಂದ ತತ್ತರಿಸಿದ್ದರು. ತಾಂತ್ರಿಕ ದೋಷದಿಂದ ಮೆಟ್ರೋ ರೈಲು ಸುರಂಗದಲ್ಲಿ ನಿಲ್ಲಿಸಲಾಗಿತ್ತು. ಗಾಬರಿಯಲ್ಲಿದ್ದ ಪ್ರಯಾಣಿಕರನ್ನು ಬಿಎಂ ಆರ್ ಸಿಎಲ್ ಸಿಬ್ಬಂದಿ ಪರ್ಯಾಯ ಮೂಲಕ ಸುರಕ್ಷಿತವಾಗಿ ನಿಲ್ದಾಣಕ್ಕೆ ತಲುಪಿಸಿದ್ದಾರೆ.

ನಂತರ ಇದೊಂದು ಅಣಕು ಪ್ರದರ್ಶನ, ಮೇಟ್ರೋ ರೈಲು ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲು ಮಾಡಿದ ಕಾರ್ಯಾಚರಣೆ ಎಂದು ಪ್ರಯಾಣಿಕರಿಗೆ ತಿಳಿದು ಬಂದಿದೆ. [ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

ಬೆಂಗಳೂರು ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಅವರು ಕೂಡಾ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಯಾಣಿಕರ ಸುರಕ್ಷತೆ ಬಗ್ಗೆ ಬಿಎಂ ಆರ್ ಸಿಎಲ್ ಕೈತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಿ ಪ್ರಶಂಸಿಸಿದರು.[ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?]

Bengaluru: Metro stops abruptly in tunnel, passengers panic

ಆತಂಕ ಕ್ಷಣಾರ್ಧದಲ್ಲೇ ನಿವಾರಣೆ: ವಿಧಾನಸೌಧ ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಸುರಂಗ ಮಾರ್ಗವಾಗಿ ಸಾಗಿದ ಮೆಟ್ರೋ ಅರ್ಧ ದಾರಿಯಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ ನಿಲ್ಲಿಸಲಾಗಿತ್ತು. [ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]


ತಕ್ಷಣವೆ ಮೆಸೇಜ್ ಬೋರ್ಡ್ ಗಳಲ್ಲಿ ಈ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಯಿತು. ಬಿಎಂ ಆರ್ ಸಿಎಲ್ ಸಿಬ್ಬಂದಿ ಇನ್ನೊಂದು ಮೆಟ್ರೋ ರೈಲಿನ ಮೂಲಕ ಪ್ರಯಾಣಿಕರನ್ನು ಸಾಗಿಸಿದರು.

ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವವರು ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು, ಸಿಬ್ಬಂದಿ ಯಾವ ಕ್ರಮ ಕೈಗೊಳ್ಳುತ್ತಾರೆ? ಬದಲಿ ಮಾರ್ಗ ಇದೆಯೇ?


ಪ್ರಯಾಣಿಕರು ಹೊರ ಹೋಗುವಂಥ ಪರ್ಯಾಯ ವ್ಯವಸ್ಥೆಯನ್ನು ಸುರಂಗ ಮಾರ್ಗದಲ್ಲಿಯೇ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ಸಿಂಗ್ ಕರೋಲಾ ತಿಳಿಸಿದ್ದಾರೆ.

ಪೂರ್ವ-ಪಶ್ಚಿಮ ಕಾರಿಡಾರ್ ಮೆಟ್ರೋ ವ್ಯಾಪ್ತಿಯಲ್ಲಿ ಬರುವ ಸುರಂಗ ಮಾರ್ಗದಲ್ಲಿ ಒಟ್ಟು 5 ನಿಲ್ದಾಣಗಳಿವೆ ಕಬ್ಬನ್ ಪಾರ್ಕ್, ವಿಧಾನಸೌಧದ ಎದುರಿನ ಅಂಬೇಡ್ಕರ್ ನಿಲ್ದಾಣ, ಸೆಂಟ್ರಲ್ ಕಾಲೇಜಿನ ಬಳಿಯ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ, ಮೆಜೆಸ್ಟಿಕ್ ಕೆಂಪೇಗೌಡ ನಿಲ್ದಾಣ ಮತ್ತು ಸಿಟಿ ರೈಲ್ವೆ ಸ್ಟೇಷನ್ ನಿಲ್ದಾಣಗಳನ್ನು ನಮ್ಮ ಮೆಟ್ರೋದ ಸುರಂಗ ಮಾರ್ಗ ಒಳಗೊಂಡಿದೆ.
ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

-
-
-
-
-
-
-
-
-
-
ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

ಸುರಂಗದಲ್ಲಿ ಮೆಟ್ರೋ ಕೆಟ್ಟು ನಿಂತಾಗ, ಜಾರ್ಜ್ ಜತೆಗಿದ್ರು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Metro commuters were in for a shock when the Metro train on Tuesday stopped abruptly after leaving the Vidhana Soudha Ambedkar Metro Station 'due to a technical glitch.'
Please Wait while comments are loading...