ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಸ ಸಮಸ್ಯೆ ನಿವಾರಿಸಲು ಮನಿಲಾ ಮಂತ್ರ

By Ashwath
|
Google Oneindia Kannada News

ಬೆಂಗಳೂರು,ಜು.12: ಕಸದ ಸಮಸ್ಯೆ ನಿವಾರಣೆಗೆ ನಾನಾ ಪ್ರಯತ್ನಗಳನ್ನು ನಡೆಸುತ್ತಿರುವ ಬಿಬಿಎಂಪಿ ವಿದೇಶಿ ಕಂಪೆನಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಇದೀಗ ಫಿಲಿಪೈನ್ಸ್‌ ಕಂಪೆನಿಯೊಂದರ ಕಸ ವಿಲೇವಾರಿ ಘಟಕದ ತಂತ್ರಜ್ಞಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಬಿಬಿಎಂಪಿ ಮೇಯರ್‌ ಕಟ್ಟೆ ಸತ್ಯನಾರಾಯಣ, ಘನ ತ್ಯಾಜ್ಯ ನಿರ್ವಹಣೆಗಾಗಿಯೇ ವಿಶೇಷ ಆಯುಕ್ತರಾಗಿ ನೇಮಕಗೊಂಡ ದರ್ಪಣ್‌ ಜೈನ್‌ ಮತ್ತು ಇತರ ಅಧಿಕಾರಿಗಳಿಗೆ ಪವರ್‌ ಪಾಯಿಂಟ್‌‌ ಮೂಲಕ ಫಿಲಿಪೈನ್ಸ್‌ ಕಂಪೆನಿಯೊಂದು ಪ್ರಾತ್ಯಕ್ಷಿಕೆ ನೀಡಿದೆ. ಕಂಪೆನಿಯ ತಂತ್ರಜ್ಞಾನ ಬಿಬಿಎಂಪಿ ಅಧಿಕಾರಿಗಳಿಗೆ ಮೆಚ್ಚಗೆಯಾಗಿದ್ದು, ಇದೀಗ ಮನಿಲಾನಗರದ ತ್ಯಾಜ್ಯ ಸಂಸ್ಕರಣಾ ಘಟಕದ ವೀಕ್ಷಣೆಗೆ ಕಂಪೆನಿ ಮೇಯರ್ ಹಾಗೂ ಇತರರಿಗೆ ಆಹ್ವಾನ ನೀಡಿದೆ.[ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು]

garbage
ಬಿಬಿಎಂಪಿ ಅಧಿಕಾರಿಗಳ ತಂಡ ಇದೀಗ ಕಂಪೆನಿಯ ತಂತ್ರಜ್ಞಾನವನ್ನು ಅಧ್ಯಯನ ನಡೆಸುತ್ತಿದ್ದು, 14 ದಿನಗಳ ಒಳಗಡೆ ಈ ತಂಡ ಪರಿಶೀಲನೆಗಾಗಿ ಮನಿಲಾ ನಗರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ತಂಡದಲ್ಲಿ ಮೇಯರ್‌ ಪ್ರಯಾಣಿಸುತ್ತಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಹಿಂದೆ ಕಸದ ಸಮಸ್ಯೆ ನಿವಾರಣೆಗಾಗಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ದುಬೈನಲ್ಲಿ ನಿರ್ಮಿಸಿರುವ ಘಟಕದ ವೀಕ್ಷಣೆಗಾಗಿ ಮೇಯರ್‌ ನೇತೃತ್ವದ ದುಬೈಗೆ ತೆರಳಲು ಸಿದ್ದತೆ ಮಾಡಿಕೊಂಡಿತ್ತು. ಆದರೆ ಸಾರ್ವ‌ಜನಿಕರು, ರಾಜಕೀಯ ಪಕ್ಷಗಳ ನಾಯಕರ ವಿರೋಧಕ್ಕೆ ಮಣಿದು ಕೊನೆಗೆ ಈ ಪ್ರವಾಸವನ್ನೇ ಮೇಯರ್‌ ರದ್ದು ಗೊಳಿಸಿದ್ದರು.[ದುಬೈ ಪ್ರವಾಸ ರದ್ದುಗೊಳಿಸಿದ ಬಿಬಿಎಂಪಿ ಮೇಯರ್]

English summary
The Bruhat Bangalore Mahanagara Palike (BBMP), which is in the middle of a garbage crisis, is looking for help from abroad. While it is seeking suggestions on solid waste management from Philippines. There was a possibility that a delegation from BBMP would go to Manila to study the project, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X