ಮಹಿಳಾ ಉಪ ಮೇಯರ್ ಗೌನ್ ಯಾರು ತೊಡಲಿದ್ದಾರೆ?
ಬೆಂಗಳೂರು, ಆಗಸ್ಟ್ 27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಉಪ ಮೇಯರ್ ಸಾಮಾನ್ಯ ಮಹಿಳೆ ಮೀಸಲಾಗಿದೆ. ಪ್ರತಿ ಹಿರಿಯ ಸದಸ್ಯರೂ ಮೇಯರ್ ಪಟ್ಟಗಿಟ್ಟಿಸಿಕೊಳ್ಳಲು ಕಸರತ್ತು ಶುರು ಮಾಡಿದ್ದರೆ, ಹೊಸ ಸದಸ್ಯರು ಪ್ರಥಮ ಬಾರಿಗೆ ಉಪ ಮೇಯರ್ ಗೌನ್ ತೊಡುವ ಅವಕಾಶ ಪಡೆಯುವ ಸಾಧ್ಯತೆ ಕಂಡು ಬಂದಿದೆ.
ಬಿಬಿಎಂಪಿ ಚುನಾವಣೆ ಮುಗಿದು, ಅಭ್ಯರ್ಥಿಗಳು ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅದರ ನಡುವೆಯೇ ಬಿಬಿಎಂಪಿಯ 6ನೇ ಮೇಯರ್ ಯಾರಾಗಲಿದ್ದಾರೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಹಾಗೆಯೇ, ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಹಿರಿಯ ಸದಸ್ಯರು ಅದಕ್ಕಾಗಿ ಲಾಬಿ ಶುರುವಿಟ್ಟುಕೊಂಡಿದ್ದಾರೆ.[ಮೇಯರ್ ಹುದ್ದೆಯ ರೇಸ್‌ನಲ್ಲಿರುವ ನಾಯಕರು]
ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಬಿಬಿಎಂಪಿಯ 198 ಸದಸ್ಯರು. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 52 ಸದಸ್ಯರಿಗೆ ಮತದಾನ ಮಾಡುವ ಅಧಿಕಾರವಿದೆ. ಒಟ್ಟು 260 ಸದಸ್ಯರು ಮೇಯರ್ ಆಯ್ಕೆಗೆ ಮತದಾನ ಮಾಡಲಿದ್ದಾರೆ.[ಕಾಂಗ್ರೆಸ್ಸಿನಿಂದ ಮೇಯರ್ ಗೌನ್ ಯಾರ ಹೆಗಲಿಗೆ?]
ಮೇಯರ್ ಮತ್ತು ಉಪ ಮೇಯರ್ ಪಟ್ಟದ ಆಕಾಂಕ್ಷಿಗಳು ಗೆಲುವು ಸಾಧಿಸಲು 131 ಮತಗಳು ಬೇಕಾಗಿವೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 100 ಸದಸ್ಯರು ಗೆಲುವು ಸಾಧಿಸಿದ್ದಾರೆ. 22 ಇತರ ಸದಸ್ಯರ ಮತಗಳು ಬಿಜೆಪಿ ಬಳಿ ಇವೆ. ಈ ಬಾರಿ ನೂರು ಮಹಿಳೆಯರು ಬಿಬಿಎಂಪಿ ಪ್ರವೇಶಿಸಿದ್ದು, ಬಿಜೆಪಿಯಿಂದಲೇ 60ಕ್ಕೂ ಹೆಚ್ಚು ಮಹಿಳಾ ಸದಸ್ಯರಿದ್ದಾರೆ.ಉಪ ಮೇಯರ್ ಸ್ಥಾನದ ರೇಸಿನಲ್ಲಿ ಯಾರಿದ್ದಾರೆ? ಮುಂದೆ ಓದಿ...

ಈ ಬಾರಿ ಸಾಮಾನ್ಯ ವರ್ಗಕ್ಕೆ ಗೌನ್ ಮೀಸಲು
ಸರದಿ ಪ್ರಕಾರ ಈ ಬಾರಿಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಉಪ ಮೇಯರ್ ಸಾಮಾನ್ಯ ಮಹಿಳೆ ಮೀಸಲಾಗಿದೆ. ಹೀಗಾಗಿ ಪ್ರತಿ ಹಿರಿಯ ಸದಸ್ಯರೂ ಮೇಯರ್ ಪಟ್ಟಗಿಟ್ಟಿಸಿಕೊಳ್ಳಲು ಕಸರತ್ತು ಶುರು ಮಾಡಿದ್ದಾರೆ.
ಮೇಯರ್ ಸ್ಥಾನಕ್ಕೆ ಕಾಚರಕನಹಳ್ಳಿ ವಾರ್ಡ್ ಸದಸ್ಯ ಪದ್ಮನಾಭ ರೆಡ್ಡಿ, ಕಾವಲ್ ಬೈರಸಂದ್ರ ವಾರ್ಡ್ನ ನಾಗರಾಜು, ಗೋವಿಂದ ರಾಜನಗರ ವಾರ್ಡ್ನ ಉಮೇಶ್ ಶೆಟ್ಟಿ ಹೆಸರುಗಳು ಮುಂಚೂಣಿಯಲ್ಲಿವೆ. [ಪೂರ್ತಿ ಪಟ್ಟಿ ಇಲ್ಲಿದೆ]
ನಾಗರತ್ನ ರಾಮಮೂರ್ತಿ, ಪಟ್ಟಾಭಿರಾಮನಗರ ವಾರ್ಡ್
ಪಟ್ಟಾಭಿರಾಮನಗರ ವಾರ್ಡ್ (168) ನಿಂದ ನಾಗರತ್ನ ರಾಮಮೂರ್ತಿ ಗೆಲುವು ಸಾಧಿಸಿದ್ದು 8,032 ಮತಗಳನ್ನು ಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಲಕ್ಷ್ಮಿ ಚಂದ್ರಶೇಖರ್ 2,635 ಮತಗಳನ್ನು ಪಡೆದಿದ್ದಾರೆ. 2010ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಈ ವಾರ್ಡ್ ನಿಂದ ಬಿಜೆಪಿಯ ಸಿಕೆ ರಾಮಮೂರ್ತಿ ಗೆದ್ದಿದ್ದರು. ಈ ಬಾರಿ ಅವರ ಪತ್ನಿ ಗೆಲುವು ಸಾಧಿಸಿದ್ದಾರೆ.

ಪೂರ್ಣಿಮಾ ರಮೇಶ್, ಯಡಿಯೂರು ವಾರ್ಡ್
ಪೂರ್ಣಿಮಾ ರಮೇಶ್ ಅವರು 10,906 ಮತಗಳನ್ನು ಪಡೆದು ಕಾಂಗ್ರೆಸ್ ನ ಲಕ್ಷ್ಮೀಪಿ (2,722) ವಿರುದ್ಧ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಈ ವಾರ್ಡ್ ನಿಂದ 2010ರಲ್ಲಿ ಬಿಜೆಪಿಯ ಎನ್.ಆರ್ ರಮೇಶ್ ಅವರು ಕಾರ್ಪೊರೇಟರ್ ಆಗಿದ್ದರು. ಈ ಬಾರಿ ಅವರ ಪತ್ನಿ ಪೂರ್ಣಿಮಾ ಅವರು ಗೆಲುವು ದಾಖಲಿಸಿದ್ದಾರೆ.

ಬಿಜೆಪಿಗೆ ಸೇರಿದ ಬೆನ್ನಲ್ಲೇ ಜಯ ಕಂಡ ಪೂರ್ಣಿಮಾ
ಒಂದು ವೇಳೆ ಬಿಜೆಪಿ ಏನಾದರೂ ಹೊಸಬರಿಗಿಂತ ಅನುಭವಿಗಳನ್ನು ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲು ಬಯಸಿದರೆ, ಶಾಸಕ ಭೈರತಿ ಬಸವರಾಜ್‌ಗೆ ಸಡ್ಡು ಹೊಡೆದು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ಕೆಆರ್ ಪುರಂ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪೂರ್ಣಿಮಾ ಕೃಷ್ಣಪ್ಪ ಅವರನ್ನು ಉಪ ಮಹಾಪೌರ ಸ್ಥಾನದಲ್ಲಿ ಕೂರಿಸುವುದು ನಿಶ್ಚಿತ ಎನ್ನಬಹುದು.
ಕೆ ಪೂರ್ಣಿಮಾ ಅವರು 11,037 ಮತಗಳನ್ನು ಪಡೆದು ಕಾಂಗ್ರೆಸ್ ನ ಡಿಕೆ ಮೋಹನ್ (10,487) ವಿರುದ್ಧ ರೋಚಕ ಜಯ ದಾಖಲಿಸಿದ್ದಾರೆ. ಕಳೆದ ಬಾರಿ ಬಿಜೆಪಿಯ ಎನ್ ವೀರಣ್ಣ ಇಲ್ಲಿ ಕಾರ್ಪೊರೇಟರ್ ಆಗಿದ್ದರು.

ಮಹಾಲಕ್ಷ್ಮಿ ರವೀಂದ್ರ, ಹೊಸಹಳ್ಳಿ ವಾರ್ಡ್
ಯುವ ನೇತಾರರನ್ನು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ಮನಸ್ಸು ಮಾಡಿದರೆ ಹೊಸಹಳ್ಳಿ ವಾರ್ಡ್ ನ ಮಹಾಲಕ್ಷ್ಮಿ ರವೀಂದ್ರ (8,992) ಅವರು ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ನ ಎಚ್. ಬಿ ರಾಧಮ್ಮ (6,541 ಮತಗಳು) ಅವರನ್ನು ಸೋಲಿಸಿ ಮೊದಲ ಬಾರಿಗೆ ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದಾರೆ. ಈ ಹಿಂದೆ ಇಲ್ಲಿ ಬಿಜೆಪಿಯ ಡಾ. ಎಚ್ ರಾಜು ಕಾರ್ಪೊರೇಟರ್ ಆಗಿದ್ದರು.
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications