ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿವಾರಿ ಸಾವನ್ನು ರಾಜಕೀಯಕ್ಕಾಗಿ ಬಿಜೆಪಿ ಬಳಸುವುದು ಹೇಯ : ಖರ್ಗೆ

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣವನ್ನು ಸುಮ್ಮನೆ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ಮುಖಂಡರ ವಿರುದ್ದ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖಗೆ ಕಿಡಿಕಾರಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮೇ 21: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣವನ್ನು ಸುಮ್ಮನೆ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ಮುಖಂಡರ ವಿರುದ್ದ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖಗೆ ಕಿಡಿಕಾರಿದ್ದಾರೆ.

ಅನುರಾಗ್ ತಿವಾರಿ ಅವರು ಉತ್ತಮ ಅಧಿಕಾರಿಯಾಗಿದ್ದರು. ಕರ್ನಾಟಕ ಕೇಡರ್ ನ ಅಧಿಕಾರಿ, ಒಳ್ಳೆ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆದರೆ, ಅವರು ದೊಡ್ಡ ಹಗರಣ ಬಹಿರಂಗ ಪಡಿಸಲು ಮುಂದಾಗಿದ್ದರು. ಅದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಎದುರು ಹಾಕಿಕೊಂಡಿದ್ದರು. ಇದೇ ಅವರ ಸಾವಿಗೆ ಕಾರಣವಾಗಿದೆ ಎಂದೆಲ್ಲ ಸುಳ್ಳು ಆರೋಪ ಹೊರೆಸುತ್ತಾ ಸಾವಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಖರ್ಗೆ ಹೇಳಿದರು.[ಇಲಾಖೆ ಭ್ರಷ್ಚಾಚಾರ ಬಯಲಿಗೆಳೆದ್ದಿದ್ದೇ ತಿವಾರಿ ಸಾವಿಗೆ ಕಾರಣವಾಯ್ತೆ?]

Anuraga Tiwari Death Case : Mallikarjun Kharge blasts BJP for politicizing the issue
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ಯಾವುದೇ ತನಿಖೆಗೂ ಸಿದ್ಧವಿದೆ. ಉತ್ತರ ಪ್ರದೇಶದ ಸಿಎಂಗೆ ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.[ತನಿಖೆಗೆ ಕೋರಿ ಯೋಗಿಗೆ ಪತ್ರ ಬರೆದ ಸಿದ್ದರಾಮಯ್ಯ]

ಇನ್ನು ಆಹಾರ ಇಲಾಖೆಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಅನುರಾಗ್ ತಿವಾರಿ ಅವರಿಗೆ ಸಂಬಳ ನೀಡಿಲ್ಲ. ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದರು ಎಂಬುದೆಲ್ಲ ಬಿಜೆಪಿ ಹೆಣೆದಿರುವ ಕಟ್ಟುಕತೆ ಎಂದು ಖರ್ಗೆ ತಿಳಿಸಿದರು.[ಅನುರಾಗ್ ತಿವಾರಿ ಸಾವಿನಲ್ಲೂ ರಾಜಕೀಯ]

{promotion-urls}

English summary
Anuraga Tiwari Death Case : Lok Sabha opposition leader, Senior Congress leader Mallikarjun Kharge today(May 21) blasted Karnataka BJP leaders for politicizing the issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X