ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಅಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇಲ್ಲಿ ಅಂಬರೀಶ್...

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಅಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇಲ್ಲಿ ಅಂಬರೀಶ್ | Oneindia Kannada

    ಬೆಂಗಳೂರು, ನವೆಂಬರ್ 15 : ಸದ್ಯಕ್ಕೆ ಅಂಬರೀಶ್ ಅವರು ಮಂಡ್ಯ ಜಿಲ್ಲಾ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರೆಬೆಲ್ ಸ್ಟಾರ್ ಮತ್ತೆ ಸಕ್ಕರೆ ನಗರಿಯ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ, ಹಲವಾರು ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ.

    Gallery: 'ಉಪ್ಪು ಹುಳಿ ಖಾರ' ಪ್ರೆಸ್ ಮೀಟ್

    ಮಂಡ್ಯ ವಿಧಾನಸಭೆಯನ್ನು ಪ್ರತಿನಿಧಿಸುವ ಅವರಿಗೆ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಲ್ಲಿ ಕೆಎಂಪಿಎ ತಿದ್ದುಪಡಿ ಕಾಯ್ದೆ ವಿರುದ್ಧ ವೈದ್ಯರ ಪ್ರತಿಭಟನೆ, ಮಾಜಿ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ, ಕನ್ನಡಪರ ಹೋರಾಟಗಾರರ ಪ್ರತಿಭಟನೆ, ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೂ ಅಂಬರೀಶ್ ಎಲ್ಲಿದ್ದಾರೆ?

    ಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳು

    ಅಂಬರೀಶ್ ಅವರೊಬ್ಬರನ್ನೇ ಈ ಕುರಿತು ಪ್ರಶ್ನಿಸುವುದು ಸರಿಯಲ್ಲ, ಏಕೆಂದರೆ ಸದಸದಲ್ಲಿ ಇರುವುದು ಬೆರಳೆಣಿಕೆಯ ಸದಸ್ಯರಷ್ಟೇ. ಚಪ್ಪಾಳೆ ತಟ್ಟಲೂ ಯಾರೂ ಇಲ್ಲ, ಮೇಜು ಕುಟ್ಟಲು ಸದನದಲ್ಲಿ ಸಾಕಷ್ಟು ಕೈಗಳಿಲ್ಲ. ಹಲವರು ಪರಿವರ್ತನಾ ಯಾತ್ರೆಯಲ್ಲಿ, ವಿಕಾಸ ಯಾತ್ರೆಯಲ್ಲಿ, ಮತ್ತಿತರ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

    ಮಂಡ್ಯ ರಾಜಕಾರಣ, ಜೆಡಿಎಸ್‌ಗೆ ಅಂಬರೀಶ್?

    ಇದೀಗ ಬಂದಿರುವ ಮಾಹಿತಿ ಪ್ರಕಾರ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಪರಿಷತ್ ಕಲಾಪ ಆರಂಭವಾದಾಗ ಇದ್ದ ಸದಸ್ಯರ ಸಂಖ್ಯೆ... ಕಾಂಗ್ರೆಸ್ - 6 ಸಚಿವರು, 19 ಸದಸ್ಯರು, ಬಿಜೆಪಿ - 14, ಜೆಡಿಎಸ್ - 8, ಪಕ್ಷೇತರರು - 3, ಒಟ್ಟು 50.

     ಮಾಲಾಶ್ರೀ ಅವರ ಸೊಂಟ ಬಳಸಿ ನರ್ತನ

    ಮಾಲಾಶ್ರೀ ಅವರ ಸೊಂಟ ಬಳಸಿ ನರ್ತನ

    ಇಲ್ಲಿ ಅಂಬರೀಶ್ ಅವರ ಹೆಸರು ಏಕೆ ಬಂತೆಂದರೆ, ಬೆಳಗಾವಿಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಹಲವಾರು ವಿಷಯಗಳ ಕುರಿತಂತೆ ಕಾವೇರಿದ ಚರ್ಚೆ ನಡೆಯುತ್ತಿದ್ದರೆ, ರೆಬೆಲ್ ಸ್ಟಾರ್ ಅಂಬರೀಶ್ ಅವರು ತಣ್ಣಗೆ ಮಾಲಾಶ್ರೀ ಅವರ ಸೊಂಟ ಬಳಸಿ ಬೆಂಗಳೂರಿನಲ್ಲಿ ಡಾನ್ಸ್ ಮಾಡುತ್ತಿದ್ದರು.

    ಉಪ್ಪು ಹುಳಿ ಖಾರ ಕಾರ್ಯಕ್ರಮದಲ್ಲಿ ಅಂಬಿ

    ಉಪ್ಪು ಹುಳಿ ಖಾರ ಕಾರ್ಯಕ್ರಮದಲ್ಲಿ ಅಂಬಿ

    ಇಮ್ರಾನ್ ಸರ್ದಾರಿಯಾ ನಿರ್ದೇಶನದ, ಮಾಲಾಶ್ರೀ ಪ್ರಮುಖ ಭೂಮಿಕೆಯಲ್ಲಿರುವ, ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ 'ಉಪ್ಪು ಹುಳಿ ಖಾರ' ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಮಂಡ್ಯದ ಜನಪ್ರತಿನಿಧಿ, ರೆಬೆಲ್ ಸ್ಟಾರ್ ಅಂಬರೀಶ್ ಅವರು ಅನುಶ್ರೀ, ಮಾಲಾಶ್ರೀ ಜೊತೆ ಡಾನ್ಸ್ ಮಾಡುತ್ತಿದ್ದರು.

    ಮೈಮರೆತು ನಾಲ್ಕು ಸ್ಟೆಪ್ ಹಾಕಿದರು

    ಮೈಮರೆತು ನಾಲ್ಕು ಸ್ಟೆಪ್ ಹಾಕಿದರು

    ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಠಿ ಅಂದ ಮೇಲೆ ಡಾನ್ಸ್ ಮಾಡದಿರಲು ಸಾಧ್ಯವೆ? ಅಂಬರೀಶ್ ಅವರು ಕೂಡ ಅಭಿಮಾನಿಗಳ ಆಗ್ರಹದ ಮೇರೆಗೆ, ಬೆಳಗಾವಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ಮರೆತು, ಮೈಮರೆತು ನಾಲ್ಕು ಸ್ಟೆಪ್ ಹಾಕಿದರು. ಅಲ್ಲಿ ಸೇರಿದ್ದ ನೂರಾರು ಅಭಿಮಾನಿಗಳು ಶಿಳ್ಳೆ ಹೊಡೆದರು, ತಾವೂ ಅಂಬರೀಶ್ ಜೊತೆಗೆ ಹೆಜ್ಜೆ ಹಾಕಿದರು.

    ಕೆಪಿಎಂಸಿ ಮಸೂದೆ ಮಂಡನೆ ಆಗುತ್ತಿರುವಾಗ

    ಕೆಪಿಎಂಸಿ ಮಸೂದೆ ಮಂಡನೆ ಆಗುತ್ತಿರುವಾಗ

    ಅಂಬರೀಶ್ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಹಿಂದೆ ಅವರು ಕಾಯಿಲೆ ಬಿದ್ದಾಗ ಇದೇ ಖಾಸಗಿ ಆಸ್ಪತ್ರೆಯ ವೈದ್ಯರು ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಮರುಜನ್ಮ ನೀಡಿದ್ದರು. ಅವರದೇ ಸರಕಾರ ಈಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) 2017' ಮಸೂದೆ ತರಲು ಹೊರಟಿದೆ. ಈ ದೃಷ್ಟಿಯಿಂದಲಾದರೂ ಅವರು ಅಧಿವೇಶನದಲ್ಲಿ ಇರಬೇಕಿತ್ತು.

    ಅಂಬಿ ಬೆಳಗಾವಿಗೆ ಯಾಕೆ ಬರುತ್ತಿಲ್ಲ?

    ಅಂಬಿ ಬೆಳಗಾವಿಗೆ ಯಾಕೆ ಬರುತ್ತಿಲ್ಲ?

    ಆದರೆ, ಅವರು ಬೆಳಗಾವಿಗೆ ಯಾಕೆ ಬರುತ್ತಿಲ್ಲ? ಅಲ್ಲಿ ನಡೆಯುವ ಚರ್ಚೆಗಳಲ್ಲಿ ಯಾಕೆ ಭಾಗಿಯಾಗುತ್ತಿಲ್ಲ? ಮಂಡ್ಯದಲ್ಲಿ ವೈದ್ಯರಿಲ್ಲದೆ ಎಷ್ಟು ರೋಗಿಗಳು ಸಾಯುತ್ತಿದ್ದಾರೋ ಏನೋ? ಅವರ ಬಗ್ಗೆ ಸದನದಲ್ಲಿ ಯಾಕೆ ದನಿ ಎತ್ತುತ್ತಿಲ್ಲ ಅಂಬರೀಶ್? ಹೋಗಲಿ ಅವರಿಗೆ ಮತ ಹಾಕಿದ ಮತದಾರರಾದರೂ ಈ ಬಗ್ಗೆ ಅವರನ್ನು ಯಾಕೆ ಪ್ರಶ್ನಿಸುತ್ತಿಲ್ಲ?

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka Congress MLA from Mandya Ambareesh skips assembly session in Belagavi, seen dancing at a music launch in Bengaluru on Tuesday. Ambareesh was seen dancing with Malashri at the press conference of Kannada movie Uppu Huli Khara. Carry on Ambi.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more