ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂ.12ರಿಂದ ಬೆಂಗಳೂರು-ಗೋವಾ ವಿಮಾನಯಾನ

|
Google Oneindia Kannada News

ಬೆಂಗಳೂರು, ಜೂ. 11 : ಅತಿ ಕಡಿಮೆ ದರದ ವಿಮಾನಯಾನ ಸೇವೆ ಆರಂಭಿಸುತ್ತಿರುವ ಏರ್ ಏಷ್ಯಾ ಗುರುವಾರದಿಂದ ತನ್ನ ಹಾರಾಟವನ್ನು ಆರಂಭಿಸಲಿದೆ. ಆರಂಭಿಕ ಹಂತದಲ್ಲಿ ಗೋವಾ ಮತ್ತು ಬೆಂಗಳೂರು ನಡುವೆ ಎರಡು ವಿಮಾನಗಳು ಸಂಚರಿಸಲಿದ್ದು, ಮೊದಲ ವಿಮಾನ ಗುರುವಾರ ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡಲಿದೆ.

ವಿಮಾನಯಾನ ಕ್ಷೇತ್ರದಲ್ಲಿ ಹೊಸ ದರ ಸಮರ ಆರಂಭಿಸಿರುವ ಏರ್ ಏಷ್ಯಾ ಬೆಂಗಳೂರು-ಗೋವಾ ನಡುವಿನ ಸಂಚಾರಕ್ಕೆ ತೆರಿಗೆ ಸೇರಿ ಪ್ರತಿ ಟಿಕೆಟ್ ಗೆ 990 ರೂ. ನಿಗದಿಗೊಳಿಸಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಗೋವಾಕ್ಕೆ ಪ್ರಯಾಣ ಬೆಳೆಸಲಿದೆ. [ಏರ್ ಏಷ್ಯಾ ವೆಬ್ ಸೈಟ್]

AirAsia

ಮೊದಲ ಹಂತದಲ್ಲಿ ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು -ಗೋವಾ ನಡುವೆ ಎರಡು ವಿಮಾನಗಳು ಸಂಚರಿಸಲಿವೆ. ಈಗಾಗಲೇ ಬೆಂಗಳೂರಿನಿಂದ ಗೋವಾಗೆ ಪ್ರತಿ ಟಿಕೆಟ್‌ಗೆ 990 ರುಪಾಯಿ ನಿಗದಿ ಮಾಡಲಾಗಿದೆ. ಆದರೆ ಬೆಂಗಳೂರು-ಚೆನ್ನೈ ಮಾರ್ಗದ ಟಿಕೆಟ್ ದರ ಇನ್ನೂ ಬಹಿರಂಗವಾಗಿಲ್ಲ. [ಬೆಂಗಳೂರು-ಗೋವಾಕ್ಕೆ ರೂ.990ಕ್ಕೆ ವಿಮಾನ ಸಂಚಾರ]

ಜೂನ್ 12ರ ಗುರುವಾರ ಮೊದಲ ವಿಮಾನ ಎ320 ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡಲಿದೆ ಎಂದು ಏರ್ ಏಷ್ಯಾ ಇಂಡಿಯಾ ಸಿಇಒ ಮಿತ್ತು ಚಾಂಡಿಲ್ಯಾ ತಿಳಿಸಿದ್ದಾರೆ. ಕಡಿಮೆ ದರದ ವಿಮಾನ ಪ್ರಯಾಣ ಕಲ್ಪಿಸುವ ಏರ್ ಏಷ್ಯಾ ವಿಮಾನ ಈ ತಿಂಗಳಲ್ಲಿ ಭಾರತದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಪಡೆದುಕೊಂಡಿತ್ತು. ಏರ್ ಏಷ್ಯಾ ಭಾರತದಲ್ಲಿ ಟಾಟಾ ಗ್ರೂಪ್ ಮತ್ತು ಟೆಲೆಸ್ಟ್ರಾ ಟ್ರೇಡ್‌ಪ್ಲೇಸ್ ಗಳೊಂದಿಗೆ ಸಹಭಾಗಿತ್ವ ಹೊಂದಿದೆ.

48 ಗಂಟೆಗಳಲ್ಲಿ ಟಿಕೆಟ್ ಫುಲ್ ಬುಕ್ : ಬೆಂಗಳೂರು-ಗೋವಾ ನಡುವಿನ ಪ್ರಯಾಣಕ್ಕೆ ರೂ 990 ದರವನ್ನು ಏರ್ ಏಷ್ಯಾ ಘೋಷಿಸಿ, ಮೇ 30ರ ಮಧ್ಯರಾತ್ರಿಯಿಂದಲೇ ಕಂಪೆನಿಯ ವೆಬ್‌ ­ಸೈಟ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿ­ಸಲು ಅವಕಾಶ ಕಲ್ಪಿಸಿತ್ತು. ಈ ಘೋಷಣೆ ಹೊರಬಿದ್ದ 48 ಗಂಟೆಗಳಲ್ಲಿಯೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿತ್ತು.

English summary
The domestic aviation space is all set to witness severe competition with the entry of AirAsia India, which starts operation from June 12 Thursday from Bangalore to Goa. AirAsia triggered the fare war by announcing fares as low as Rs 990 for its Bangalore-Goa operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X