ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಹಳೆ ಪುಸ್ತಕಗಳ ಆನ್ ಲೈನ್ ಅಂಗಡಿ

By Mahesh
|
Google Oneindia Kannada News

ಬೆಂಗಳೂರು, ಡಿ.19: ಹಳೆ ಕಥೆ ಪುಸ್ತಕ, ಕಾದಂಬರಿ, ಮ್ಯಾಗಜೀನ್, ಇಂಜಿನಿಯರಿಂಗ್, ಮೆಡಿಕಲ್ ಪುಸ್ತಕಗಳು ಬೇಕಾದಾಗ ಪುಸ್ತಕ ಪ್ರೇಮಿಗಳಿಗೆ ಥಟ್ಟನೆ ನೆನಪಾಗುವುದು ಅವೆನ್ಯೂ ರಸ್ತೆಯ ಫುಟ್ ಪಾತ್ ಅಂಗಡಿಗಳು, ಅದು ಬಿಟ್ಟರೆ ನವರಂಗ್ ಹತ್ತಿರ, ಜಯನಗರದಲ್ಲಿ ಆ ಕಾಲ ವೇದಾ ಬುಕ್ ಹೌಸ್ ಹಳೆ ಪುಸ್ತಕಗಳಿಗೆ ಬೆಲೆ ತಂದುಕೊಟ್ಟಿತ್ತು. ಈಗ ಹಳೆ, ಹೊಸ ಪುಸ್ತಕಗಳೆರಡನ್ನು ಒಂದೆ ಕಡೆ ಖರೀದಿಸುವ ಸೌಲಭ್ಯ ನಿಮ್ಮ ಬೆರಳು ತುದಿಯಲ್ಲೇ ಸಿಗುವಂತಾಗಿದೆ.

ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕರ್ತ ಸುನೀಲ್ ಎಸ್. ಪಾಟೀಲ್ ಹಾಗೂ ಬೆಂಗಳೂರಿನ ಸಚಿನ್ ಕುಡ್ತುರಕರ್ ಅವರು ಹೀಗೊಂದು ಸೌಲಭ್ಯ ಕಲ್ಪಿಸಿದ್ದಾರೆ. ಅಫೋರ್ಡಬಲ್ (a4dable.in) ಎಂಬ ಹೆಸರಿನ ವೆಬ್ ತಾಣ ಆರಂಭಿಸಿದ ಇಬ್ಬರು ಕನ್ನಡ ಪ್ರೇಮಿಗಳು ಈಗ ಮೊಬೈಲ್ ಮೂಲಕ ಪುಸ್ತಕ ಖರೀದಿಯ ಹೊಸ ಸೌಲಭ್ಯವನ್ನು ಸಾಧ್ಯವಾಗಿಸಿದ್ದಾರೆ.

ಇಂಗ್ಲೀಷ್ ಹಳೆ, ಹೊಸ ಪುಸ್ತಕ ಖರೀದಿ ಸಾಕಷ್ಟು ವೆಬ್ ತಾಣಗಳಿವೆ. ಕನ್ನಡದಲ್ಲೂ ಟೋಟಲ್ ಕನ್ನಡ, ಸಪ್ನ, ಅಕೃತಿ ಬುಕ್ ಹೌಸ್, ಕನ್ನಡ ಸ್ಟೋರ್, ಬುಕ್ಸ್ ಫಾರ್ ಯೂ ಅಲ್ಲದೆ ಫ್ಲಿಪ್ ಕಾರ್ಟ್ ಮುಂತಾದ ಆನ್ ಲೈನ್ ಶಾಪಿಂಗ್ ವೆಬ್ ತಾಣಗಳು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯ ಒದಗಿಸಿವೆ. ಇವೆಲ್ಲದರ ನಡುವೆ ಅಫೊರ್ಡಬಲ್ ಹೇಗೆ ಭಿನ್ನ? ಈ ವೆಬ್ ತಾಣ ಹುಟ್ಟು ಹಾಕಲು ಪ್ರೇರಣೆ ಏನು? ಯಾವ ಯಾವ ಹಳೆ ಪುಸ್ತಕ ಸಿಗಲಿದೆ? ಮೊಬೈಲ್ ಮೂಲಕ ಖರೀದಿ ಹೇಗೆ? ಮುಂದೆ ಓದಿ...

ಎಸ್ ಎಲ್ ಭೈರಪ್ಪರ ಪುಸ್ತಕಗಳು ಲಭ್ಯ

ಎಸ್ ಎಲ್ ಭೈರಪ್ಪರ ಪುಸ್ತಕಗಳು ಲಭ್ಯ

ಎಸ್ ಎಲ್ ಭೈರಪ್ಪರ ಎಲ್ಲಾ ಪುಸ್ತಕಗಳು ಅನ್ ಲೈನ್ ಮೂಲಕ ಲಭ್ಯವಿದೆ. ಬೆಂಗಳೂರಿನವರಿಗೆ cash on delivery ಸೌಲಭ್ಯವನ್ನೂ ಒದಗಿಸಲಾಗಿದೆ. ಎಲ್ಲಾ ಪಬ್ಲಿಕೇಷನ್ ನ ಎಲ್ಲಾ ಸಾಹಿತಿಗಳ ಹಳೆ ಪುಸ್ತಕಗಳನ್ನು ಇಲ್ಲಿ ನೀಡಲು ನಾವು ಮುಂದಾಗಿದ್ದೇವೆ ಎಂದು ಸುನಿಲ್ ಹೇಳಿದ್ದಾರೆ.

 ಜ್ಞಾನ ಎಂಬುದು ನಿರಂತರವಾಗಿ ಹರಿಯಬೇಕು

ಜ್ಞಾನ ಎಂಬುದು ನಿರಂತರವಾಗಿ ಹರಿಯಬೇಕು

ನಾವು ನಮ್ಮ ಕಾಲೇಜು ದಿನಗಳಲ್ಲಿ ಹಳೆ ಪುಸ್ತಕಗಳನ್ನು ನಮ್ಮನಮ್ಮಲ್ಲೇ ಹಂಚಿಕೊಳ್ಳುತ್ತಿದ್ದೆವು. ಇನ್ನು ಕೆಲವು ರದ್ದಿ ಕಾಗದವಾಗುತ್ತಿತ್ತು. ಆದರೆ, ಜ್ಞಾನ ಎಂಬುದು ನಿರಂತರವಾಗಿ ಹರಿಯಬೇಕು ಈ ಕಾರಣಕ್ಕೆ ಹಳೆ ಪುಸ್ತಕಗಳ ಮಾರಾಟ ಮುಖ್ಯವೆನಿಸುತ್ತದೆ ಎಂದು ಸಂಸ್ಥಾಪಕರು ಹೇಳಿದ್ದಾರೆ.

ಎಸ್ ಎಲ್ ಭೈರಪ್ಪ, ದರಾ ಬೇಂದ್ರೆ, ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ 700ಕ್ಕೂ ಅಧಿಕ ಪುಸ್ತಕಗಳಿವೆ

ದೇಶಪಾಂಡೆ ಪ್ರತಿಷ್ಠಾನ

ದೇಶಪಾಂಡೆ ಪ್ರತಿಷ್ಠಾನ

ಯಾರಾದರೂ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರೆ ಆದರ ಬಹುತೇಕ ಭಾಗವನ್ನು ಶೈಕ್ಷಣಿಕ ಸಂಸ್ಥೆ ನಡೆಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲು ದೇಶಪಾಂಡೆ ಪ್ರತಿಷ್ಠಾನ ಉದ್ದೇಶಿಸಲಾಗಿದೆ.

ಪುಸ್ತಕ ಖರೀದಿ ಹೇಗೆ

ಆನ್ ಲೈನ್ ಖರೀದಿ ನಂತರ 48 ಗಂಟೆಗಳಲ್ಲಿ ನಿಮ್ಮ ಕೈ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...

ಅಥವಾ 08553133393 ಸಂಖ್ಯೆಗೆ ಕರೆ ಮಾಡಿ ಬೇಕಾದ ಪುಸ್ತಕ ಬುಕ್ ಮಾಡಿ ಬ್ಯಾಂಕಿಗೆ ದುಡ್ಡು ತುಂಬಿ ನಿಮ್ಮ ಮನೆಗೆ ಪುಸ್ತಕ ತರೆಸಿಕೊಳ್ಳಿ

English summary
Two enterprising youth, Sachin Kudturkar from Bangalore and Sunil S. Patil from Hubli, came up with the idea and have set up ‘a4dable.in’ that offers a online platform where people willing to sell and buy old books
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X