ಮಲಗಿದ್ದ ಹಾಸಿಗೆಯೊಳಗಿತ್ತು ವಿಷಸರ್ಪ! ಬಳ್ಳಾರಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು
ಬಳ್ಳಾರಿ, ಜುಲೈ 6: ಮಲಗಿದ್ದ ಸಂದರ್ಭ, ಹಾಸಿಗೆಯಲ್ಲಿ ಸೇರಿಕೊಂಡಿದ್ದ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. 41 ವರ್ಷದ ರೈತ ಮಹಿಳೆ ತಿಮ್ಮಕ್ಕ ಮೃತ ದುರ್ದೈವಿ. ವಿಶ್ರಾಂತಿ ಪಡೆಯಲು ಇವರು ಹಾಸಿಗೆಯಲ್ಲಿ ಮಲಗಿದ್ದ ಸಂದರ್ಭ ಹಾವೊಂದು ಹಾಸಿಗೆಯಲ್ಲಿ ಸೇರಿಕೊಂಡಿದೆ. ಹಾವು ಕಚ್ಚಿದ್ದರೂ ಮಹಿಳಿಯ ಅರಿವಿಗೆ ಬಂದಿಲ್ಲ. ಎಚ್ಚರಗೊಂಡ ಮೇಲೆ ತಲೆಸುತ್ತು ಬಂದಿದ್ದು, ಹಾಸಿಗೆಯಿಂದ ಎದ್ದು ನೋಡಿದರೆ ಹಾವು ಹೊರಬಂದಿದೆ.

ನಿನ್ನೆ ಲಾಕ್ ಡೌನ್ ಇದ್ದ ಕಾರಣ ತಕ್ಷಣ ಯಾವ ವಾಹನವೂ ಚಿಕಿತ್ಸೆಗೆ ಕರೆದೊಯ್ಯಲು ಸಿಕ್ಕಿಲ್ಲ. ವಾಹನ ಸಿಗದ ಕಾರಣ ಮಹಿಳೆಗೆ ನಾಟಿ ಔಷಧ ಮಾಡಿಸಲಾಗಿತ್ತು. ಆದರೆ ವಿಷ ದೇಹ ಆವರಿಸಿಕೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ತಿಮ್ಮಕ್ಕ ಮೃತಪಟ್ಟಿದ್ದಾರೆ.












Click it and Unblock the Notifications