ಗಂಡನ ಕೊಂದು ಅಪಘಾತ ಎಂದು ಬಿಂಬಿಸಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

ಬಳ್ಳಾರಿ, ಸೆಪ್ಟೆಂಬರ್ 15: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ್ದ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 30 ಸಾವಿರ ದಂಡ ಹಾಕಲಾಗಿದೆ.

2014ರ ಜೂನ್ 14ರಂದು ಮುದ್ದಪ್ಪ (38) ಎಂಬುವವರನ್ನು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿ ಹಳ್ಳಿಯಲ್ಲಿ ಕೊಲೆ ಮಾಡಲಾಗಿತ್ತು. ಮುದ್ದಪ್ಪ ಅವರ ಪತ್ನಿ ಸವಿತಾ ಬಾಯಿ ಮತ್ತು ಪ್ರಿಯಕರ ಚನ್ನಪ್ಪ ಸೇರಿ ಕೊಲೆ ಮಾಡಿ ಹೊಲವೊಂದರ ಪಕ್ಕದ ರಸ್ತೆಯಲ್ಲಿ ದೇಹವನ್ನು ಬಿಸಾಡಿ ಅಪಘಾತ ಎಂದು ಬಿಂಬಿಸುವ ನಾಟಕವಾಡಿದ್ದರು.

Wife And Her Lover Sentenced To Life Imprisonment For Killing Her Husband In Ballary

ಸವಿತಾ ಬಾಯಿ ಮತ್ತು ಚನ್ನಪ್ಪ ನಡುವೆ ಅಕ್ರಮ ಸಂಬಂಧವಿದ್ದು, ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದಿದ್ದು, ಇವರಿಬ್ಬರೂ ಆರೋಪಿಗಳು ಎಂಬುದು ಸಾಬೀತಾಗಿದೆ. ಹೊಸಪೇಟೆ 3ನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅವರು ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+