• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಚುನಾವಣೆ ಫಲಿತಾಂಶ, ಮೋದಿ-ಶಾ ಗ್ಯಾಂಗಿಗೆ ಎಚ್ಚರಿಕೆ ಗಂಟೆ!

|

ಬಳ್ಳಾರಿ, ನವೆಂಬರ್ 06: ಬಳ್ಳಾರಿಯಲ್ಲಿ ಸೋಲಿನ ಕಹಿ ಸಹಿಸಲು ಸಾಧ್ಯವಾಗದೆ ಗಾಲಿ ರೆಡ್ಡಿ ಹಾಗೂ ಶ್ರೀರಾಮುಲು ಎಲ್ಲಿ ಬಚ್ಚಿಟ್ಟುಕೊಳ್ಳುತ್ತಾರೋ ಏನೋ, ದಕ್ಷಿಣ ಭಾರತದತ್ತ ನಿರ್ಲಕ್ಷ್ಯ ತೋರುವ ಮೋದಿ-ಅಮಿತ್ ಶಾ ಗ್ಯಾಂಗಿಗೆ ಈ ಚುನಾವಣೆ ಫಲಿತಾಂಶವು ಎಚ್ಚರಿಕೆ ಗಂಟೆಯಾಗಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳಿ ಬಂದಿದೆ.

ಬಳ್ಳಾರಿಯಲ್ಲಿ ಬಿಜೆಪಿ ಪ್ರಾಬಲ್ಯ ಎಂದೆನಿಸಿದರೂ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಕಾಂಗ್ರೆಸ್​- 50.5% ಬಿಜೆಪಿ -46.5 % ಇದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಬಳ್ಳಾರಿ ಲೋಕಸಭೆ ಚುನಾವಣೆ LIVE: ದಾಖಲೆ ಗೆಲುವಿನತ್ತ ಉಗ್ರಪ್ಪ ದಾಪುಗಾಲು

ಆದರೆ, ಎಲ್ಲಾ ನಿರೀಕ್ಷೆಗಳನ್ನು ಮೀರಿ, ಉಗ್ರಪ್ಪ ಅವರು ತಮ್ಮ ಮೊದಲ ಚುನಾವಣಾ ಸ್ಪರ್ಧೆಯಲ್ಲೇ ಭರ್ಜರಿ ಜಯದಾಖಲಿಸಿದ್ದಾರೆ. ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಆರ್​ವೈಎಂಇಸಿ ಕಾಲೇಜಿನಲ್ಲಿ ನಡೆದಿರುವ ಮತ ಎಣಿಕೆ ಕಾರ್ಯ ನಡೆದಿದ್ದು, 18 ಸುತ್ತಿನ ಮತ ಎಣಿಕೆ ನಂತರ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.

ಬಳ್ಳಾರಿ ಕೋಟೆ ಮೇಲೆ ಕಾಂಗ್ರೆಸ್ ಬಾವುಟ

ಬಳ್ಳಾರಿ ಕೋಟೆ ಮೇಲೆ ಕಾಂಗ್ರೆಸ್ ಬಾವುಟ

ಸ್ವಾತಂತ್ರ್ಯ ಬಂದಾಗಿನಿಂದ 2000ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿತ್ತು. ಹಾಗಾಗಿ, ಮತ್ತೆ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಹಾಗೂ ರಾಮುಲುಗೆ ಲಗಾಮು ಹಾಕಲು ಕಾಂಗ್ರೆಸ್‌ನ ದಿಗ್ಗಜರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಈ ಯುದ್ಧವನ್ನು ಮುನ್ನಡೆಸಿ ಗೆದ್ದಿದ್ದಾರೆ.

ಅದರಲ್ಲೂ ಎಂಎಲ್ಸಿಯಾಗಿ ಅನುಭವವಿದ್ದ, ಚುನಾವಣಾ ರಾಜಕೀಯ ಕಂಡಿರದ ವಿಎಸ್ ಉಗ್ರಪ್ಪ ಅವರನ್ನು ಕಣಕ್ಕಿಳಿಸಿ ಗೆದ್ದಿದ್ದಾರೆ. ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹೀಗಾಗಿ, ಬಿಜೆಪಿಗೆ ಇಲ್ಲಿ ಗೆಲ್ಲುವುದು ಕಷ್ಟವಾಯಿತು ಎನ್ನಲಾಗಿದೆ.

ಗಾಲಿ ರೆಡ್ಡಿ ಸೋದರರ ಭ್ರಷ್ಟಾಚಾರಕ್ಕೆ ಬ್ರೇಕ್

ಗಾಲಿ ರೆಡ್ಡಿ ಸೋದರರ ಭ್ರಷ್ಟಾಚಾರಕ್ಕೆ ಬ್ರೇಕ್ ಬಿದ್ದಿದೆ. ಆದರೆ, ಇದು ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ.

ಸುಷ್ಮಾ ಪುತ್ರರಿಗೆ ಮುಖಭಂಗ

ಸುಷ್ಮಾ ಸ್ವರಾಜ್ ಪುತ್ರರಿಗೆ ಮುಖಭಂಗವಾಗಿದೆ. ಎಲ್ಲಿ ಬಚ್ಚಿಟ್ಟುಕೊಳ್ಳುವುದು ಎಂಬುದು ತಿಳಿಯುತ್ತಿಲ್ಲ. ಭಾರಿ ಅಂತರದಿಂದ ಕಾಂಗ್ರೆಸ್ ಗೆಲ್ಲಲಿದೆ.

2014ರಲ್ಲಿ ಮೋದಿ ಅಲೆ ಇತ್ತು, ಈಗ ಇಲ್ಲ

2014ರಲ್ಲಿ ಮೋದಿ ಅಲೆಯಿಂದ ಗೆಲುವು ಸಾಧಿಸಿದ್ದ ಶ್ರೀರಾಮುಲು, ಕ್ಷೇತ್ರ ಮರೆತು ಬೇರೆಡೆ ವಲಸೆ ಹೋಗಿದ್ದೆ ತಡ ಬಿಜೆಪಿ ಸೋಲಿಗೆ ಮುನ್ನುಡಿಯಾಯಿತು. 2019ರ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತ.

ಇವಿಎಂ ಟ್ಯಾಪರಿಂಗ್ ಇಲ್ಲದೆ ಗೆಲುವು ಸಾಧ್ಯ

ವ್ಇವಿಎಂ ಟ್ಯಾಪರಿಂಗ್ ಇಲ್ಲದೆ ಗೆಲುವು ಸಾಧ್ಯ ಎಂಬುದನ್ನು ಬಿಜೆಪಿಗೆ ಯಾರಾದರೂ ತಿಳಿಸಿರಿ. 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರದರ್ಶನ ಈಗ ಜನರ ಮುಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಸರಣಿ ಟ್ವೀಟ್

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಸರಣಿ ಟ್ವೀಟ್ ಮಾಡಿ, ಬಳ್ಳಾರಿಯಲ್ಲಿ ಬಿಜೆಪಿ ಸೋಲು, ಕಾಂಗ್ರೆಸ್ ಗೆಲುವಿನ ವಿಶ್ಲೇಷಣೆ ಮಾಡಿದ್ದಾರೆ. ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ. ಕತ್ತಲೆಯಿಂದ ಬೆಳಕಿನ ಕಡೆಗೆ ಜನಪಯಣ ಎಂದು ಟ್ವೀಟ್ ಮಾಡಿದ್ದಾರೆ

ಹೀಗೊಂದು ವಿಶ್ಲೇಷಣೆ

ಶಿವಮೊಗ್ಗೆ ಹೊರತುಪಡಿಸಿ. ಎಲ್ಲಾ ಕಡೆ ಮುಗಿಚಿದೆ. ಯಡ್ಯೂರಪ್ಪರ ಹಸಿರು ಶಾಲಿನಿಂದ ಕರ್ನಾಟದಲ್ಲಿ ಬೆಳೆಯಿತು.ಯಾವಗ ಹಸಿರ ಬಿಟ್ಟು ಖಾವಿ ಧರಿಸಿ ಮುಂದೆ ಬಂದರೋ ಅಲ್ಲಿಗೆ ಪತನ ಕಾದಿದೆ ಎಂಬುದ ಅರಿಯಬೇಕು

ಮೋದಿಯನ್ನು ಕೂಡಾ ವಾರಣಾಸಿ, ಪುರಿಯಲ್ಲಿ ಸೋಲಿಸಬಹುದು

ಎಲ್ಲಕ್ಕೂ ಅಂತ್ಯವಿದೆ. ಪ್ರಧಾನಿ ಮೋದಿ ಅವರನ್ನು ಕೂಡಾ ವಾರಣಾಸಿ, ಪುರಿಯಲ್ಲಿ ಸೋಲಿಸಬಹುದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka By-elections results, specially Bellary result is warning to Modi and Amith Shah gang who neglecting the south India. It is just a trailer before Lok sabha Election 2019 says netizen via twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more