ಹೊಸಪೇಟೆ: ಮತ್ತೆ 11 ರೈಲ್ವೆ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್!
ವಿಜಯನಗರ, ಮಾರ್ಚ್ 10: ಹೊಸಪೇಟೆ ರೈಲ್ವೆ ಜಂಕ್ಷನ್ನಿನ 19 ರೈಲ್ವೆ ಸಿಬ್ಬಂದಿಗೆ ಮಂಗಳವಾರ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮತ್ತೆ 11 ರೈಲ್ವೆ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.
ರೈಲ್ವೆ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವೈರಸ್ ಬೆನ್ನತ್ತಿದ್ದು, ಬುಧವಾರದ ಪ್ರಕರಣಗಳು ಸೇರಿ ಒಟ್ಟು 30 ರೈಲ್ವೆ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.
ಹುಬ್ಬಳ್ಳಿ, ಗದಗ ಮತ್ತು ಬೆಂಗಳೂರು ಮೂಲದ ರೈಲ್ವೆ ಲೋಕೋ ಪೈಲಟ್ ಗಳಿಗೆ ಕೊರೊನಾ ಸೋಂಕು ಬಂದಿತ್ತು. ಅವರ ಪ್ರಾಥಮಿಕ ಸಂಪರ್ಕದಲ್ಲಿರುವ 90 ಜನರಿಗೆ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 11 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಹೊಸಪೇಟೆ ರೈಲ್ವೆ ಸಿಬ್ಬಂದಿಗೆ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಒತ್ತು ನೀಡಿದೆ. ಇದರ ಪರಿಣಾಮವಾಗಿ ವಿಜಯನಗರ ಜಿಲ್ಲೆಯ ಪ್ರಭಾರ ಡಿಎಚ್ಒ ಡಾ. ಜನಾರ್ಧನ ಅವರು ದಿಢೀರನೆ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಸಭೆ ನಡೆಸಿದ್ದಾರೆ.












Click it and Unblock the Notifications