ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ; ಜನಪ್ರತಿನಿಧಿಗಳಿಗೆ ಆನಂದ್‌ ಸಿಂಗ್‌ ಭರ್ಜರಿ ದೀಪಾವಳಿ ಉಡುಗೊರೆ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಅಕ್ಟೋಬರ್‌, 24: ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿರುವುದು ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸ್ವಕ್ಷೇತ್ರದ ಜನಪ್ರತಿನಿಧಿಗಳ ಮನವೊಲಿಸಲು ಸಚಿವ ಆನಂದ್ ಸಿಂಗ್ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಹೊಸಪೇಟೆ ನಗರಸಭೆ ಸದಸ್ಯರಿಗೆ 1 ಲಕ್ಷ ರೂಪಾಯಿ ನಗದು, 1 ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಡಬ್ಬಿ ಒಳಗೊಂಡ ಕಿಟ್‌ ಅನ್ನು ಕೊಟ್ಟಿದ್ದಾರೆ. ಪಂಚಾಯಿತಿಯ ಒಬ್ಬ ಸದಸ್ಯರಿಗೆ ತಲಾ 27 ಸಾವಿರ ರೂಪಾಯಿ ನಗದು, 500 ಗ್ರಾಂ ಬೆಳ್ಳಿ ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಎಂದು ಬರೆದ ಆಹ್ವಾನವನ್ನು ನೀಡಿದ್ದಾರೆ.

ಶ್ರೀರಾಮುಲುನಂತಹ ಪೆದ್ದನ ಜೊತೆಗೆ ಚರ್ಚೆ ಮಾಡುವ ಹುಂಬತನ ಇಲ್ಲ: ಸಿದ್ದರಾಮಯ್ಯಶ್ರೀರಾಮುಲುನಂತಹ ಪೆದ್ದನ ಜೊತೆಗೆ ಚರ್ಚೆ ಮಾಡುವ ಹುಂಬತನ ಇಲ್ಲ: ಸಿದ್ದರಾಮಯ್ಯ

ಚುನಾವಣೆಗೆ ಈಗಿನಿಂದಲೇ ಕಸರತ್ತು

ಸಚಿವರ ಬೆಂಬಲಿಗರು ಎಲ್ಲ ಸದಸ್ಯರಿಗೆ ಕೊಡುಗೆ ತಲುಪಿಸುತ್ತಿದ್ದಾರೆ ಎಂದು ಗೊತ್ತಾಗಿದ್ದು, ಸಚಿವರ ಈ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ಕಮಲಾಪುರ ಪಟ್ಟಣ ಪಂಚಾಯತ್ ಮತ್ತು ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ. ಸಾಮಾನ್ಯವಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರನ್ನು ತಮ್ಮ ಪಕ್ಷಗಳತ್ತ ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಾರೆ.

Vijayanagara; Anand Singh Deepavali costly Gift to local civic body Representatives

ಆದರೆ ವಿಜಯನಗರದಲ್ಲಿ ಸಚಿವ ಆನಂದ್‌ ಸಿಂಗ್‌ ಜನರ ಬದಲಾಗಿ ಜನಪ್ರತಿನಿಧಿಗಳನ್ನು ಮನವೊಲಿಸಲು ಒಡವೆ, ನಗದುಗಳನ್ನು ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಇನ್ನು ಆರಂಭವಾಗದೇ ಇಷ್ಟು ಕಸರತ್ತು ನಡೆಸುವ ಸಚಿವರು, ಇನ್ನು ಚುನಾವಣೆ ಬಂದರೆ ತಮ್ಮ ಗೆಲುವಿಗಾಗಿ ಏನೆಲ್ಲ ಉಡುಗೊರೆಗಳನ್ನು ನೀಡುತ್ತಾರೆಯೋ ಎನ್ನುವ ವಿಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

English summary
Minister Anand Singh given Deepavali gifts to Grama Panchayat members of Hospet Municipal Council and Vijayanagara Assembly Constituency. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X