ಕರ್ನಾಟಕ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ರಾ ಶ್ರೀರಾಮುಲು ಸಹೋದರಿ..?
ಬಳ್ಳಾರಿ ಜನವರಿ 3: ಮಾಜಿ ಸಚಿವ ಶ್ರೀರಾಮುಲು ಸಹೋದರಿ ಮಾಜಿ ಸಂಸದೆ ಜೆ. ಶಾಂತಾ ಕರ್ನಾಟಕ ರಾಜ ಕಾರಣಕ್ಕೆ ಗುಡ್ ಬೈ ಹೇಳಿದ್ರಾ..? ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಕರ್ನಾಟಕ ರಾಜಕಾರಣ ಬಿಟ್ಟು ಆಂಧ್ರ ರಾಜಕಾರಣಕ್ಕೆ ಶಾಂತಾ ಎಂಟ್ರಿ ಕೊಟ್ಟಿರುವುದೇ ಈ ಪ್ರಶ್ನೆ ಏಳುವುದಕ್ಕೆ ಕಾರಣವಾಗಿದೆ.
ಮಂಗಳವಾರದಂದು ವಿಜಯವಾಡದ ತಾಡಿಪಲ್ಲಿಯ ಲ್ಲಿರುವ ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ಆಂಧ್ರ ಸಿಎಂ ಜಗಮ್ಮೋಹನರೆಡ್ಡಿ ನೇತೃತ್ವದಲ್ಲಿ ವೈಎಸ್‌ಆರ್‌ಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್ ಪಿಯಿಂದ ಸ್ಪರ್ಧೆಯ ಸಾಧ್ಯತೆಯಿದೆ ಎಂದು ಶಾಂತಾ ಅವರ ಆಪ್ತ ಮೂಲಗಳು ತಿಳಿಸಿವೆ.

ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣ ನಿವಾಸಿಯಾಗಿರುವ ಜೆ.ಶಾಂತಾರವರು ಅನಂತಪುರ ಜಿಲ್ಲೆಯ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹಿಂದುಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ನಾಲ್ಕುವರೆ ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ. ಜೆ.ಶಾಂತಾ ಅವರು ಆಂಧ್ರ ಪ್ರದೇಶದ ಗುಂತಕಲ್ ಪಟ್ಟಣ ನಗರ ನಿವಾಸಿಗಳಾಗಿದ್ದರು. 2009 ರಲ್ಲಿ ಶ್ರೀರಾಮುಲು ಅವರ ಸಹಕಾರದಿಂದಾಗಿ ಬಳ್ಳಾರಿಯಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿದ್ದರು.
ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ನಡುವಿನ ರಾಜಕೀಯ ಸಂಬಂಧ ಬಿರುಕುಗೊಂಡ ಮೇಲೆ. 2018ರ ಉಪ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿ ಸೋತರು. ಈಗ ಮತ್ತೊಮ್ಮೆ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನ ಅವಕಾಶ ದೊರೆಯುವ ಸಾಧ್ಯತೆ ಕ್ಷೀಣಿಸಿರುವುದರಿಂದ ಆಂಧ್ರದ ಹಿಂದೂಪುರ ಕ್ಷೇತ್ರದಿಂದ ವೈಎಸ್ಆರ್ ಪಕ್ಷದಿಂದ ಸ್ಪರ್ಧೆ ಮಾಡೋ ಪ್ರಯತ್ನ ನಡೆಸಿದ್ದಾರೆ. ಆಂಧ್ರದಲ್ಲಿ ಬಿಜೆಪಿ ಗಟ್ಟಿಯಾಗಿಲ್ಲ. ಹೀಗಾಗಿ ವೈಎಸ್ಅರ್ ಪಕ್ಷದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರಂತೆ.

2009ರಲ್ಲಿ ಶ್ರೀರಾಮುಲು ಸಹಕಾರದಿಂದ ಬಳ್ಳಾರಿ ಯಿಂದ ಲೋಕಸಭೆ ಆಯ್ಕೆಯಾಗಿದ್ದ ಶಾಂತಾರವರಿಗೆ ಅಂದು ಎಂಪಿಯಾಗಿದ್ದಾಗ ಜಗನ್ ಅವರು ಲೋಕ ಸಭೆಯಲ್ಲಿ ಪರಿಚಯವಾಗಿದ್ದರು. ಅಂದಿನ ಪರಿಚಯವೇ ಶಾಂತಾರವರ ಆಂಧ್ರದ ರಾಜಕೀಯ ಎಂಟ್ರಿಗೆ ಕಾರಣ ವಾಯ್ತು ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ. ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಬಿಜೆಪಿಯಲ್ಲಿ ಎಂಪಿ ಟಿಕೆಟ್ ಸಿಗುವುದು ಕಷ್ಟಸಾಧ್ಯವಾಗಿದೆ ಎನ್ನುವುದು ಆಂಧ್ರ ರಾಜಕಾರಣಕ್ಕೆ ಹೋಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ರಾಜಕೀಯವೇ ಹೀಗೆ, ಅಂದು ಆಂಧ್ರದಿಂದ ಬಂದವರು, ಕ್ಷೇತ್ರದವರಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ನಾನು ಬಳ್ಳಾರಿಯ ಮಗಳು ನಾನು ನಿಮ್ಮವಳೇ ಎನ್ನುತ್ತಿದ್ದ ಶಾಂತಾ ಅವರು. ಈಗ ಆಂದ್ರದಲ್ಲಿ ನಾನು ಈ ರಾಜ್ಯದ ಸೊಸೆ ನಾನು ಗುಂತಕಲ್ಲಿನವರೆಂದು ಹೇಳುತ್ತಾರೆನೋ ಗೊತ್ತಿಲ್ಲ..ಇದರಿಂದಾಗಿ ಶ್ರೀರಾಮುಲುಗೆ ಬಿಜೆಪಿಯಲ್ಲಿ ಕೊಂಚ ಮುಜುಗರಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications