ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಉಪ ಚುನಾವಣೆ, ಬಿ.ಶ್ರೀರಾಮುಲು ಒನ್ ಮ್ಯಾನ್ ಶೋ?

|
Google Oneindia Kannada News

Recommended Video

ಬಳ್ಳಾರಿ ಉಪಚುನಾವಣೆಯಲ್ಲಿ ಬಿ ಶ್ರೀರಾಮುಲು ಒನ್ ಮ್ಯಾನ್ ಶೋ | Oneindia Kannada

ಬಳ್ಳಾರಿ, ಅಕ್ಟೋಬರ್ 23 : ಬಳ್ಳಾರಿ ಲೋಕಸಭಾ ಉಪ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಬಿ.ಶ್ರೀರಾಮುಲು ಏಕಾಂಗಿಯಾಗಿದ್ದಾರೆ? ಎಂಬ ಭಾವನೆ ಮೂಡಿದೆ. ಚುನಾವಣೆ ಶ್ರೀರಾಮುಲು ಒನ್ ಮ್ಯಾನ್ ಶೋ ಆಗಿದೆಯೇ?.

ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಣದಲ್ಲಿದ್ದಾರೆ.

ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಬಳ್ಳಾರಿ ಉಪ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆ ಅಡಗಿದೆ. ಬಿಜೆಪಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್‌ ಪ್ರಚಾರದಲ್ಲಿ ಮುಂದಿದೆ ಎನ್ನುವುದು ಸ್ಥಳೀಯ ನಾಯಕರ ಅಭಿಪ್ರಾಯ.

ಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

ಕರ್ನಾಟಕ ಕಾಂಗ್ರೆಸ್ ಬಳ್ಳಾರಿ ಉಪ ಚುನಾವಣೆಯನ್ನು ಗೆಲ್ಲಬೇಕು ಎಂದು ಪಣ ತೊಟ್ಟಿದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವರು, ಶಾಸಕರು ಸೇರಿ 51 ಜನ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ....

ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್

ಜನಾರ್ದನ ರೆಡ್ಡಿ ಪ್ರಚಾರ ಮಾಡುತ್ತಿಲ್ಲ

ಜನಾರ್ದನ ರೆಡ್ಡಿ ಪ್ರಚಾರ ಮಾಡುತ್ತಿಲ್ಲ

ಬಿ.ಶ್ರೀರಾಮುಲು ಆಪ್ತ ಸ್ನೇಹಿತ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಜೆ.ಶಾಂತ ಪರವಾಗಿ ಪ್ರಚಾರ ಮಾಡಲು ಸಿದ್ಧರಿದ್ದಾರೆ. ಆದರೆ, ಅವರನ್ನು ಪ್ರಚಾರದ ಕಣಕ್ಕಿಳಿಸಲು ಬಿಜೆಪಿ ನಾಯಕರು ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ. ಆದ್ದರಿಂದ, ಅವರು ಬಾಹ್ಯವಾಗಿ ಬೆಂಬಲ ನೀಡಬಹುದಾಗಿದೆ.

ಚುನಾವಣಾ ಕಾವು ಇಲ್ಲ

ಚುನಾವಣಾ ಕಾವು ಇಲ್ಲ

ಜೆ.ಶಾಂತ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ, ನಾಮಪತ್ರ ಸಲ್ಲಿಸಿದ ಬಳಿಕವೂ ಬಳ್ಳಾರಿ ಬಿಜೆಪಿಯಲ್ಲಿ ಚುನಾವಣೆಯ ಕಾವು ಕಾಣುತ್ತಿಲ್ಲ. ಬಿ.ಶ್ರೀರಾಮುಲು ಅವರು ಏಕಾಂಗಿಯಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಮತ್ತೊಂದು ಕಡೆ ಜೆ.ಶಾಂತ ಅವರು ಹಲವು ನಾಯಕರ ಜೊತೆ ಮತ್ತೊಂದು ತಂಡದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೇರೆ ರಾಜ್ಯ ನಾಯಕರು ಅತ್ತ ಮುಖ ಮಾಡಿಲ್ಲ.

ಉಸ್ತುವಾರಿಗಳ ನೇಮಕ

ಉಸ್ತುವಾರಿಗಳ ನೇಮಕ

ಕರ್ನಾಟಕ ಬಿಜೆಪಿ ರಮೇಶ್ ಜಿಗಜಿಣಗಿ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಎನ್.ರವಿಕುಮಾರ್, ಪ್ರಭು ಚೌವ್ಹಾಣ್, ರಾಮಣ್ಣ ಲಮಾಣಿ ಅವರನ್ನು ಬಳ್ಳಾರಿ ಚುನಾವಣೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದೆ. ಆದರೆ, ಬಿಜೆಪಿ ಪಾಳಯದಲ್ಲಿ ಚುನಾವಣಾ ಪ್ರಚಾರ ಮಂಕಾಗಿದೆ ಎನ್ನುವುದು ಸ್ಥಳೀಯರು ಹೇಳುವ ಮಾತು.

51 ಜನರ ತಂಡ

51 ಜನರ ತಂಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಕಳೆದ 2 ದಿನಗಳಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಹೊರತುಪಡಿಸಿ 6 ಸಚಿವರು, 10 ಸಂಸದರು ಸೇರಿದಂತೆ 51 ಪ್ರಮುಖ ನಾಯಕರ ತಂಡ ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ ಪರವಾಗಿ ಮತಯಾಚನೆ ಮಾಡುತ್ತಿದೆ. ಒದೊಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದೆ.

English summary
Former MP and Molakalmuru MLA B.Sriramulu one man show in Ballari Lok Sabha by election. B.Sriramulu sister J.Shantha BJP candidate and Election will b held on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X