ಹೂವಿನಹಡಗಲಿಯಲ್ಲಿ ನಮೋ ಮಂತ್ರ ಜಪಿಸಿದ ರಾಮುಲು

ಬಳ್ಳಾರಿ, ಮಾ.29 : ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಶನಿವಾರ ಹೂವಿನಹಡಗಲಿ ತಾಲೂಕಿನಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಯುಪಿಎ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ನೀತಿಯ ಬಗ್ಗೆ ಜನರಿಗೆ ಮಾಹಿತಿ ನೀಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ಶ್ರೀರಾಮುಲು ಶನಿವಾರ ಬೆಳಗ್ಗೆ ಹೂವಿನಹಡಗಲಿ ತಾಲೂಕಿನ ಮೈಲಾರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೈಲಾರ, ಕುರುವತ್ತಿ, ಹರವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಮತ ಯಾಚನೆ ಮಾಡಿದರು.

ಶ್ರೀರಾಮುಲು ಅವರರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ್, ಮಾಜಿ ಶಾಸಕ ಚಂದ್ರಾ ನಾಯ್ಕ್, ಬಿಜೆಪಿ ಮುಖಂಡರಾದ ಗೋವಿಂದರೆಡ್ಡಿ, ಪೂಜಪ್ಪ, ಮೀರಾಬಾಯಿ, ಕೊಟ್ರೇಶ್ ನಾಯಕ ಮುಂತಾದವರು ಪ್ರಚಾರಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ಶ್ರೀರಾಮುಲು ಪ್ರಚಾರ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಹೂವಿನ ಹಡಗಲಿಯಲ್ಲಿ ಶ್ರೀರಾಮುಲು ಮತಯಾಚನೆ

ಹೂವಿನ ಹಡಗಲಿಯಲ್ಲಿ ಶ್ರೀರಾಮುಲು ಮತಯಾಚನೆ

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಶನಿವಾರ ಹೂವಿನಹಡಗಲಿ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಮೈಲಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಅಲ್ಲಿಂದಲೇ ಪ್ರಚಾರ ಆರಂಭಿಸಿದರು.

ಹಲವು ಬಿಜೆಪಿ ನಾಯಕರ ಸಾಥ್

ಹಲವು ಬಿಜೆಪಿ ನಾಯಕರ ಸಾಥ್

ಮೈಲಾರ, ಕುರುವತ್ತಿ, ಹರವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶ್ರೀರಾಮುಲು ಮುತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ್, ಮಾಜಿ ಶಾಸಕ ಚಂದ್ರಾ ನಾಯ್ಕ್, ಬಿಜೆಪಿ ಮುಖಂಡರಾದ ಗೋವಿಂದರೆಡ್ಡಿ, ಪೂಜಪ್ಪ, ಮೀರಾಬಾಯಿ, ಕೊಟ್ರೇಶ್ ನಾಯಕ ಮುಂತಾದವರು ಶ್ರೀರಾಮುಲು ಜೊತೆಗಿದ್ದರು.

ಬೆಲೆ ಏರಿಕೆಗೆ ಯುಪಿಎ ಸರ್ಕಾರ ಕಾರಣ

ಬೆಲೆ ಏರಿಕೆಗೆ ಯುಪಿಎ ಸರ್ಕಾರ ಕಾರಣ

ಗ್ರಾಮಗಳಲ್ಲಿ ಜನರೊಂದಿಗೆ ಮಾತುಕತೆ ನಡೆಸಿದ ಶ್ರೀರಾಮುಲು ಅವರು, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಆತಂಕಗೊಂಡಿದ್ದಾರೆ. ತರಕಾರಿ, ಅಕ್ಕಿ, ಸಿಲಿಂಡರ್ ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದಕ್ಕೆಲ್ಲಾ ಕೇಂದ್ರದಲ್ಲಿರುವ ಯುಪಿಎ ಸರ್ಕಾರದ ಜನವಿರೋಧಿ ಆಡಳಿತದ ನೀತಿಯೇ ಕಾರಣ ಎಂದು ಶ್ರೀರಾಮುಲು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಸಾಮಾಜಿಕ ನ್ಯಾಯ ದೊರೆಯುತ್ತದೆ

ಸಾಮಾಜಿಕ ನ್ಯಾಯ ದೊರೆಯುತ್ತದೆ

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲಾ ಧರ್ಮದವರಿಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷದವರು ಮೋದಿ ಅವರ ಬಗ್ಗೆ ಅಪಪ್ರಚಾರ ಮಾಡಿ ಅವರ ಹೆಸರು ಕೆಡಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಶ್ರೀರಾಮುಲು ದೂರಿದರು.

ಅಭಿವೃದ್ಧಿಗಾಗಿ ಮತ ನೀಡಿ

ಅಭಿವೃದ್ಧಿಗಾಗಿ ಮತ ನೀಡಿ

ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ, ದೇಶವನ್ನು ಗುಜರಾತ್ ರಾಜ್ಯದಂತೆ ಅಭಿವೃದ್ಧಿ ಮಾಡುತ್ತಾರೆ. ಆದ್ದರಿಂದ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಶ್ರೀರಾಮುಲು ಮನವಿ ಮಾಡಿದರು. [ಶ್ರೀರಾಮುಲು ಭರ್ಜರಿ ರೋಡ್ ಶೋ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+