ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ : ಉರಗ ತಜ್ಞ ಕಾಶಿನಾಥ್ ನೆಗಳೂರುಮಠ ವಿಧಿವಶ

|
Google Oneindia Kannada News

ಬಳ್ಳಾರಿ, ಮಾರ್ಚ್ 14 : ಕಲಾವಿದ, ಉರಗ ತಜ್ಞ ಕಾಶಿನಾಥ್ ನೆಗಳೂರುಮಠ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಕಾಶಿನಾಥ್ ನೆಗಳೂರುಮಠ (49) ಅವರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಾಡುಲರ್ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ರಾತ್ರಿ ಅವರು ವಿಧಿವಶರಾಗಿದ್ದಾರೆ. ಹಾವೇರಿ ಜಿಲ್ಲೆ ಗುತ್ತಲ ನಿವಾಸಿಯಾದ ಕಾಶಿನಾಥ್ ನೆಗಳೂರುಮಠ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.

ಬಾವಿಯಲ್ಲಿ ಬಿದ್ದಿದ್ದ ಹಾವು ರಕ್ಷಿಸಿದ ಗುರುರಾಜ್ ಸನಿಲ್ ನಮ್ಮೂರ ಹೀರೋಬಾವಿಯಲ್ಲಿ ಬಿದ್ದಿದ್ದ ಹಾವು ರಕ್ಷಿಸಿದ ಗುರುರಾಜ್ ಸನಿಲ್ ನಮ್ಮೂರ ಹೀರೋ

Snake conservationist Kashinath Neglurmath no more

13 ವರ್ಷಗಳಿಂದ ವಿಮ್ಸ್ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 1000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದರು. ಉರಗ ತಜ್ಞರಾಗಿ, ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿ, ಪ್ರತಿ ವರುಷ ಮಣ್ಣಿನ ಗಣಪ ತಯಾರಿಸಿ ಪರಿಸರ ಕಾಳಜಿ ಮೂಡಿಸುತ್ತಿದ್ದರು.

ರಾಜಧಾನಿಯಲ್ಲಿ ಬಿಸಿಲ ಝಳಕ್ಕೆ ಹೊರಬೀಳುತ್ತಿವೆ ಹಾವುಗಳುರಾಜಧಾನಿಯಲ್ಲಿ ಬಿಸಿಲ ಝಳಕ್ಕೆ ಹೊರಬೀಳುತ್ತಿವೆ ಹಾವುಗಳು

ಕಾಶಿನಾಥ್ ನೆಗಳೂರುಮಠ ಅವರ ಪರಿಸರ ಕಾಳಜಿಗೆ ಹಲವಾರು ಪ್ರಶಸ್ತಿಗಳು ಬಂದಿದ್ದವು. ಕಾಶಿನಾಥ್ ನೆಗಳೂರುಮಠ ನಿಧನಕ್ಕೆ ವಿಮ್ಸ್ ಆಡಳಿತ ಸಿಬ್ಬಂದಿ, ಬಳ್ಳಾರಿ ಛಾಯಾಗ್ರಾಹಕ ಅಸೋಸಿಯೇಷನ್ ಸದಸ್ಯರು ಸಂತಾಪ ಸೂಚಿಸಿದ್ದಾರೆ.

English summary
Ballari based Kashinath Neglurmath(49) died in Bengaluru private hospital. Kashinath saved the life of more than 1000 snake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X