• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಮಾತು ಕೇಳ್ತಾರೆ: ಜಿ.ಟಿ.ದೇವೇಗೌಡ

|

ಬಳ್ಳಾರಿ, ಡಿಸೆಂಬರ್ 29: ಸರ್ಕಾರ ಸುಭದ್ರವಾಗಿದೆ, ಸಿದ್ದರಾಮಯ್ಯ ಹೇಳಿದಂತೆ ರಮೇಶ್-ಸತೀಶ್ ಜಾರಕಿಹೊಳಿ ಕೇಳ್ತಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಈಗ ಸ್ವಲ್ಪ ಅಸಮಾಧಾನಗೊಂಡಿದ್ದಾರೆ, ಆದರೆ ಅದನ್ನು ಶೀಘ್ರವೇ ಶಮನ ಮಾಡಲಾಗುವುದು ಎಂದರು.

'ಕೈ'ಗೆ ಸಿಗದ ರಮೇಶ್ ಜಾರಕಿಹೊಳಿ ಬಿಜೆಪಿ ತೆಕ್ಕೆಗೆ ಜಾರಿದರಾ?

ಸಮ್ಮಿಶ್ರ ಸರ್ಕಾರವಿದ್ದಾಗ ಈ ರೀತಿಯ ಸಣ್ಣ-ಪುಟ್ಟ ಸಮಸ್ಯೆಗಳು ಸಾಮಾನ್ಯ ಎಂದ ಅವರು, ಯಾವುದೇ ಸಮಸ್ಯೆ ಎದುರಾದರೂ ವರಿಷ್ಠ ದೇವೇಗೌಡ, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಕುಮಾರಸ್ವಾಮಿ ಬಗೆಹರಿಸುತ್ತಾರೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರುಗಳು ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿದ್ದು, ಸಿದ್ದರಾಮಯ್ಯ ಮಾತನ್ನು ಅವರು ಕೇಳುತ್ತಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಪಕ್ಷ ಬಿಡುವ ಮಾತೇ ಇಲ್ಲ ಎಂದು ಅವರು ಹೇಳಿದರು.

ರಮೇಶ್‌ ಒಬ್ಬ ಹಠವಾದಿ: ಸತೀಶ್ ಜಾರಕಿಹೊಳಿ ಹೇಳಿಕೆ

ಸಿದ್ದರಾಮಯ್ಯ ವಿರುದ್ಧ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿರುವ ಬಗ್ಗೆ ಮಾತನಾಡಿದ ಅವರು, ನಿಗಮ ಮಂಡಳಿಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬುದು ಅವರ ಅಸಮಾಧಾನ ಆದರೆ ಕುಮಾರಸ್ವಾಮಿಗೆ ಈ ಬಗ್ಗೆ ಅಸಮಾಧಾನ ಇಲ್ಲ ಎಂದರು.

ಸಚಿವ ರಮೇಶ್ ಜಾರಕಿಹೊಳಿಗೆ ಸಮನ್ಸ್ ನೀಡಿದ ಸಿದ್ದರಾಮಯ್ಯ!

ಹಾಗೇನಾದರೂ ಅಸಮಾಧಾನ ಇದ್ದರೆ ಅದನ್ನು ದೇವೇಗೌಡರು ಬಗೆಹರಿಸುತ್ತಾರೆ, ಅಭಿವೃದ್ಧಿ ವಿಷಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಮಾಡುತ್ತೇವೆ ಎಂದು ಅವರು ಹೇಳಿದರು.

English summary
Congress leader Siddaramaiah will handle the Ramesh Jarkiholi issue says JDS leader and minister GT.Devegowda. He talked to media in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X