ಸಾರಿಗೆ ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ
Recommended Video
ಸರ್ಕಾರಿ ಬಸ್ ನಲ್ಲೇ ಗಂಡು ಮಗು ಜನನ..? | KSRTC Bus | Oneindia Kannada
ಬಳ್ಳಾರಿ, ಸೆಪ್ಟೆಂಬರ್ 27: ದಿಢೀರನೆ ಹೆರಿಗೆ ನೋವು ಕಾಣಿಸಿಕೊಂಡು ತಾನು ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ಸಿನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಜಿಲ್ಲೆಯ ಸಂಡೂರು ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರೇ ಬಸ್ಸಿನೊಳಗೆ
ಮಗುವಿಗೆ ಜನ್ಮವಿತ್ತ ಮಹಿಳೆ.
ಜಿಲ್ಲೆಯ ಸಂಡೂರು ಪಟ್ಟಣದಿಂದ ನೆರೆಯ ಚಿತ್ರದುರ್ಗ ಜಿಲ್ಲೆಯ ರಾಂಪುರದತ್ತ ಅವರು ಬಸ್ ಪ್ರಯಾಣ ಬೆಳೆಸಿದ್ದು, ರಾಂಪುರ ಬಳಿ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವನ್ನು ತಾಳಲಾರದೇ ಕುಳಿತಲ್ಲೇ ಚೀರಾಡಲು ಆರಂಭಿಸಿದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಿಳಾ ಪ್ರಯಾಣಿಕರು ಆಕೆ ಕುಳಿತಿದ್ದ ಸೀಟಿನ ಸುತ್ತಲೂ ಸೀರೆಯೊಂದನ್ನು ಕಟ್ಟಿ, ಬಸ್ಸಿನಲ್ಲೇ ಹೆರಿಗೆ ಮಾಡಿಸಿದ್ದಾರೆ.

ತಾಯಿ, ಮಗು ಆರೋಗ್ಯದಿಂದ ಇದ್ದಾರೆಂದು ಪ್ರಯಾಣಿಕರು ತಿಳಿಸಿದ್ದಾರೆ. ಬಳಿಕ, ರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಬಸ್ಸಿನ ಚಾಲಕರು, ನಿರ್ವಾಹಕರು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.












Click it and Unblock the Notifications