ಬಳ್ಳಾರಿಯಲ್ಲಿ ಸೆಪ್ಟಂಬರ್ 1 ರಿಂದ 3 ದಿನಗಳ ಕಾಲ ಗ್ರಾಮೀಣ ನಾಟಕೋತ್ಸವ
ಬಳ್ಳಾರಿ, ಆಗಸ್ಟ್.29:ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೆ.1, 2 ಮತ್ತು 3 ರಂದು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಮರಿಯಮ್ಮನಹಳ್ಳಿಯ ಮಹಿಳಾ ವೃತ್ತಿರಂಗ ಕಲಾವಿದರ ಸಂಘದಿಂದ ಗ್ರಾಮೀಣ ನಾಟಕೋತ್ಸವ ಆಯೋಜಿಸಲಾಗಿದೆ.
ಕುರುಕ್ಷೇತ್ರ, ರಕ್ತರಾತ್ರಿ ಮತ್ತು ಶಿವಾರ್ಜುನರ ಯುದ್ಧ ನಾಟಕಗಳು ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರದರ್ಶನವಾಗಲಿವೆ.
ಪುಟ್ಟಸ್ವಾಮಯ್ಯ, ಕಂದಗಲ್ ಹನುಮಂತರಾಯ, ನೇರಲಗುಂಟೆ ಎಸ್.ತಿಪ್ಪೇಸ್ವಾಮಿ ಅವರ ರಚನೆಯ ಈ ಪೌರಾಣಿಕ ನಾಟಕಗಳನ್ನು ಸೂಲದಹಳ್ಳಿಯ ಶ್ರೀ ಪಂಚಾಕ್ಷರಿ ಸಂಗೀತ ಕಲಾ ಬಳಗ, ವಿರುಪಾಪುರದ ಶೃತಿ ಲಯ ಕಲಾ ಸಂಘ ಮತ್ತು ಗೊಲ್ಲರಹಳ್ಳಿಯ ಶ್ರೀಗುರು ಪುಟ್ಟರಾಜ ಸಂಗೀತ ಕಲಾ ಬಳಗ ಇವರು ನಡೆಸಿಕೊಡಲಿದ್ದಾರೆ ಎಂದು ಮರಿಯಮ್ಮನಹಳ್ಳಿ ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಅಧ್ಯಕ್ಷೆ ಡಾ.ಕೆ.ನಾಗರತ್ನಮ್ಮ ತಿಳಿಸಿದ್ದಾರೆ.

ಅವರೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಬಿ.ಶಿವಕುಮಾರಿ, ಜಾನಪದ ಅಕಾಡಮಿ ಸದಸ್ಯೆ ಮಾತಾ ಮಂಜಮ್ಮ ಜೋಗತಿ ಮತ್ತು ಹಿರಿಯ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications