ಬಳ್ಳಾರಿ ಪ್ರಕರಣ, ಸಂಸದನ ಪುತ್ರನಿಂದ ಬೆದರಿಕೆ

ಬಳ್ಳಾರಿಯಲ್ಲಿ ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ಮತ್ತು ಆತn ಸ್ನೇಹಿತರು ನಡೆಸಿದ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ಯುವಕ ಎಂ ಅತಹಾರ್, ನನಗೆ ಈಗಲೂ ಹಲವರಿಂದ ಜೀವ ಬೆದರಿಕೆ ಇದೆ ಹೇಳಿದ್ದಾನೆ. ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ನನಗೆ ಬೆದರಿಕೆ ಹಾಕಿ ವೇಶ್ಯಾವಾಟಿಕೆ ಆರೋಪ ಮಾಡುವಂತೆ ಸೂಚಿಸಿದ್ದ ಎಂದು ತಿಳಿಸಿದ್ದಾನೆ. [ಸಂಸದನ ಪುತ್ರ ಸೇರಿ 6 ಮಂದಿ ಬಂಧನ]
ಸಂಸದ ಸಣ್ಣಫಕ್ಕೀರಪ್ಪ ಅವರ ಪುತ್ರ ಮುತ್ತು ಹಾಗೂ ಆತನ ಗೆಳೆಯರು ಕಾಲೇಜ್‌ಗೆ ಬಂದು ನನ್ನ ಎತ್ತಿಕೊಂಡು ಹೋಗಿ ಹಲ್ಲೆ ನಡೆಸಿದ್ದರು. ನಾವು ಹೇಳಿದಂತೆ ಮಾಡುವಂತೆ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿದ್ದರು. ನಂತರ ನಾನು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನಗೆ ಮರಳಿದ್ದೆ.
ಪುನಃ ನನ್ನನ್ನು ಬೆದರಿಸಿ ಆ ಯುವತಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತ ಹೇಳುವಂತೆ ಒತ್ತಡ ಹಾಕಿದ್ದರು. ಹೀಗಾಗಿ ನಾನು ಭಯದಿಂದ ಆ ರೀತಿ ಸುಳ್ಳು ಆರೋಪ ಮಾಡಿದೆ. ನಾನು ಹಾಗೂ ಯುವತಿ ಇಬ್ಪರೂ ಕ್ಲಾಸೆಮೇಟ್ಸ್. ನಾವಿಬ್ಬರೂ ಬರೀ ಸ್ನೇಹಿತರು ಮಾತ್ರ. ನಾವು ಪ್ರೇಮಿಗಳಲ್ಲ ಎಂದು ಅತಹಾರ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಕೌಲ್ ಬಜಾರ್ ಠಾಣೆ ವ್ಯಾಪ್ತಿ ನಿವಾಸಿಯಾದ ಭಾಗ್ಯಮ್ಮ ಅವರ ಮನೆಗೆ ಬುಧವಾರ ಸಂಜೆ ನುಗ್ಗಿದ ಸಣ್ಣಪಕ್ಕೀರಪ್ಪ ಪುತ್ರ ಮತ್ತು ಅವರ ಸ್ನೇಹಿತರು ಭಾಗ್ಯಮ್ಮ ಮಗಳು ಶ್ರೀಲಕ್ಷ್ಮೀ ಮನೆಯಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುತ್ತು ಮತ್ತು ಆತನ 6 ಮಂದಿ ಸ್ನೇಹಿತರನ್ನು ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ. [ಸಣ್ಣ ಫಕ್ಕೀರಪ್ಪ ಕುಟುಂಬಕ್ಕೆ ಪೊಲೀಸ್ ನೋಟಿಸ್]












Click it and Unblock the Notifications