• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ಜಿಲ್ಲೆ ಒಂದು ಉತ್ಪನ್ನ; ಬಳ್ಳಾರಿಗೆ ಅಂಜೂರ ಆಯ್ಕೆ

|

ಬಳ್ಳಾರಿ, ಮಾರ್ಚ್ 05: 'ಒಂದು ಜಿಲ್ಲೆ ಒಂದು ಉತ್ಪನ್ನ' ಎಂಬ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆ ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬಳ್ಳಾರಿ ಜಿಲ್ಲೆಗೆ ಈ ಯೋಜನೆಯಡಿ ಅಂಜೂರವನ್ನು ಆಯ್ಕೆ ಮಾಡಲಾಗಿದೆ. ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಈ ಕುರಿತು ಮಾಹಿತಿ ನೀಡಿದ್ದು, "ಕೃಷಿ ಇಲಾಖೆಯ ವತಿಯಿಂದ ಕಿರು ಆಹಾರ ಸಂಸ್ಕರಣ ಚಟುವಟಿಕೆಗಳನ್ನು ಕೈಗೊಳ್ಳುವ ಅಥವಾ ಕೈಗೊಂಡಿರುವ ಸ್ವ-ಸಹಾಯ ಗುಂಪು ಅಥವಾ ರೈತ ಉತ್ಪಾದಕ ಸಂಸ್ಥೆ ಹಾಗೂ ವೈಯಕ್ತಿಕ ಉದ್ದಿಮೆದಾರಿಂದ ಅರ್ಜಿ ಆಹ್ವಾನಿಸಲಾಗಿದೆ" ಎಂದು ಹೇಳಿದ್ದಾರೆ.

ಒಂದು ಜಿಲ್ಲೆ ಒಂದು ಉತ್ಪನ್ನ: ಮಂಡ್ಯದ ಬೆಲ್ಲಕ್ಕೆ ಬರಲಿದೆಯಾ ಶುಕ್ರದೆಸೆ?

ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕಂರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅನುಷ್ಠಾನವನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ.

ಕೊಪ್ಪಳದಲ್ಲಿ ಪೇರಲ ಬೆಳೆ ಸಂಸ್ಕರಣೆ ಕ್ಲಸ್ಟರ್‌ ಸ್ಥಾಪನೆ

ಬಳ್ಳಾರಿ ಜಿಲ್ಲೆಗೆ ಅಂಜೂರ ಬೆಳೆಯು ಆಯ್ಕೆಯಾಗಿರುತ್ತದೆ. ಯೋಜನೆ ಅನುಷ್ಠಾನಕ್ಕಾಗಿ ಅಂಜೂರ ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆ ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

ಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವು

ಜಿಲ್ಲೆಯಾದ್ಯಂತ ಚಾಲ್ತಿಯಲ್ಲಿರುವ ಅಥವಾ ನೂತನ ಉದ್ದಿಮೆ ಕೈಗೊಳ್ಳುವ ಸ್ವ-ಸಹಾಯ ಸಂಘ/ ರೈತ ಉತ್ಪಾದಕ ಸಂಸ್ಥೆ/ ವೈಯಕ್ತಿಕ ಉದ್ದಿಮೆದಾರರಿಗೆ ಯೋಜನಾ ವೆಚ್ಚದ ಶೇ. 35 ರಷ್ಟು ಮೌಲ್ಯದ ಸಹಾಯಧನ 10 ಲಕ್ಷ ರೂ. ಗರಿಷ್ಠ ಮಿತಿ ಇದ್ದು, ಪ್ರತಿ ಸಂಸ್ಥೆಯ ಪಾಲು ಕನಿಷ್ಠ ಶೇ.10 ರಷ್ಟು ಇರಬೇಕು ಮತ್ತು ಬಾಕಿ ಬ್ಯಾಂಕಿನ ಸಾಲ ಹಾಗೂ ತರಬೇತಿಗೆ ಬೆಂಬಲ ನೀಡಲಾಗುತ್ತದೆ.

ಒಂದು ಜಿಲ್ಲೆಗೆ ಒಂದು ಉತ್ಪನ್ನಕ್ಕೆ ಅಂಜೂರ ಆಯ್ಕೆಯಾಗಿದ್ದರೂ ಇನ್ನಿತರೆ ಬೆಳೆಗಳ ಸಂಸ್ಕರಣೆಯಡಿ ಚಾಲ್ತಿ ಇರುವ ಅಥವಾ ನೂತನವಾಗಿ ಪ್ರಾರಂಭಿಸುವ ಸ್ವ-ಸಹಾಯ ಸಂಘ/ ರೈತ ಉತ್ಪಾದಕ ಸಂಸ್ಥೆ/ ವೈಯಕ್ತಿಕ ಉದ್ದಿಮೆದಾರರೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಅಂಜೂರ ಬೆಳೆಯ ಸಂಸ್ಕರಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳ ವಿಸ್ತರಣೆಗೆ ಸಹ ಅವಕಾಶ ನೀಡಲಾಗಿದೆ.

English summary
Under One District One Product (ODOP) Fig or Anjeer For Ballari fruit identified for Ballari. Under the scheme entrepreneurs involved with these products are eligible to avail credit-linked capital subsidy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X