ಯುವಕನ ನೋವಿಗೆ ನೆರವಾದ ಸಚಿವ ಆನಂದ್ ಸಿಂಗ್
ಬಳ್ಳಾರಿ, ಮೇ 2: ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ನಿವಾಸಿಯ ನೆರವಿಗೆ ಸಚಿವ ಆನಂದ್ ಸಿಂಗ್ ಬಂದಿದ್ದಾರೆ. ಪ್ಯಾಂಕ್ರೀಸ್ ಖಾಯಿಲೆಯಿಂದ ಬಳಲುತ್ತಿದ್ದ ಯುವಕನಿಗೆ ಸಹಾಯ ಮಾಡಿದ್ದಾರೆ.
ಹೊಸಪೇಟೆ ನಗರ ನಿವಾಸಿ ನಾಗೇಶ್ ತೀವ್ರ ಹೊಟ್ಟೆ ನೋವಿನಿಂದ ಬಳ್ಳಲುತ್ತಿದ್ದರು. ನಾಗೇಶ್ ತುರ್ತು ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುತ್ತಿದ್ದ ಅವರ ನೆರವಿಗೆ ಆನಂದ್ ಸಿಂಗ್ ಬಂದಿದ್ದಾರೆ. ಯುವಕನ ಚಿಕಿತ್ಸೆಗೆ 1 ಲಕ್ಷ 25 ಸಾವಿರ ಹಣ ನೀಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ನಾಗೇಶ್ ಕುಟುಂಬ ಇದೆ. ದುಡಿಮೆ ಇಲ್ಲದ ಕಾರಣ ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ. ಕೆಲಸ, ಹಣ ಇಲ್ಲದ ಈ ಕಠಿಣ ಸಮಯದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದು ಹೇಗೆ ಎಂದು ನಾಗೇಶ್ ಕುಟುಂಬ ಪರದಾಡುತ್ತಿತ್ತು. ಖಾಯಿಲೆಯಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ, ಹಣ ಇಲ್ಲ ಎನ್ನುವ ಕಾರಣಕ್ಕೆ ನಾಗೇಶ್‌ಗೆ ಚಿಕಿತ್ಸೆ ಪಡೆಯಲು ಆಗುತ್ತಿರಲಿಲ್ಲ.
ಈ ವಿಷಯ ವಿಜಯ ನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಗಮನಕ್ಕೆ ಬಂದಿದ್ದು, ನಾಗೇಶ್ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಚಿಕಿತ್ಸೆಗೆ ನೆರವಾಗಿದ್ದಾರೆ. ಆನಂದ್ ಸಿಂಗ್ ಸಹಾಯಕ್ಕೆ ನಾಗೇಶ್ ಕುಟುಂಬ ಧನ್ಯವಾದ ತಿಳಿಸಿದೆ.












Click it and Unblock the Notifications