ಬಳ್ಳಾರಿಯಲ್ಲಿ 100 ರೂಗೆ ಸಿಕ್ತಿದೆ ಒಂದು ಕೋಳಿ; ಇದು ಕೊರೊನಾ ಎಫೆಕ್ಟ್
ಬಳ್ಳಾರಿ, ಮಾರ್ಚ್ 11: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೋಳಿ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಕೋಳಿ ತಿನ್ನುವುದರಿಂದ ಕೊರೊನಾ ಬರಲಿದೆ ಎಂಬ ವದಂತಿ ಎಲ್ಲೆಡೆ ಹರಡಿದೆ. ಹೀಗಾಗಿ ಕೋಳಿಗಳನ್ನು ರಸ್ತೆಯಲ್ಲಿ ನಿಂತು ಮಾರಾಟ ಮಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಸುಗುಣಾ ಕಂಪನಿಯ ಕೋಳಿಗಳನ್ನು ನೂರು ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಈ ಮೊದಲು ಒಂದು ಕೆ.ಜಿ ಕೋಳಿ ಮಾಂಸಕ್ಕೆ 150 ರೂಪಾಯಿ ಇತ್ತು. ಆದರೆ ಈಗ 3 ಕೆ.ಜಿ. ತೂಕ ಇರುವ ಒಂದು ಕೋಳಿಯನ್ನು ನೂರು ರೂಪಾಯಿಗೆ ಮಾರಾಟ ಮಾಡುತಿದ್ದಾರೆ.

ಆದರೆ ರಸ್ತೆಯಲ್ಲಿ ನಿಂತು ಕೋಳಿ ಮಾರಾಟ ಮಾಡಿದರೂ ಜನ ಕೋಳಿಯನ್ನು ಖರೀದಿ ಮಾಡುತ್ತಿಲ್ಲ. ಹೀಗಾಗಿ ಜಿಲ್ಲೆಯ ಕೋಳಿ ಫಾರ್ಮ್ ಗಳು ಭಾರಿ ನಷ್ಟ ಅನುಭವಿಸಿವೆ. ಕೊಟ್ಟೂರಿನಲ್ಲಿ ಮಾತ್ರವಲ್ಲ, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕೋಳಿ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.












Click it and Unblock the Notifications