ಮತದಾನಕ್ಕೂ ಮುನ್ನ ಗೋ ಪೂಜೆ, ಯಂತ್ರದ ಮುಂದೆ ಶ್ರೀ ರಾಮುಲು ಧ್ಯಾನ!

ಬಳ್ಳಾರಿ, ಮೇ 12 : ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಮತಯಂತ್ರಕ್ಕೆ ಊದಿ, ಯಂತ್ರದ ಮುಂದೆ ಧ್ಯಾನ ಮಾಡಿ ಮತದಾನ ಮಾಡಿ ಅಚ್ಚರಿ ಮೂಡಿಸಿದರು. ಎರಡು ಕ್ಷೇತ್ರಗಳಲ್ಲಿ ಅವರು ಕಣಕ್ಕಿಳಿದ್ದಾರೆ.

Karnataka elections : Sriramulu performs pooja, meditation before voting

ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಬಳ್ಳಾರಿ ನಗರದ ದೇವಿನಗರದ 25ನೇ ಮತಗಟ್ಟೆಯಲ್ಲಿ ಶನಿವಾರ ಹಕ್ಕು ಚಲಾಯಿಸಿದರು. ಅದಕ್ಕೂ ಮುನ್ನ ಮನೆಯಲ್ಲಿ ಗೋ ಪೂಜೆ ನೆರವೇರಿಸಿದರು. ದೇವಾಲಯಕ್ಕೆ ಭೇಟಿ ನೀಡಿ ನಂತರ ಮತಕೇಂದ್ರಕ್ಕೆ ತೆರಳಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Karnataka elections : Sriramulu performs pooja, meditation before voting

ಮತ ಕೇಂದ್ರದಲ್ಲಿ ಮತಯಂತ್ರದ ಮುಂದೆ ಕೆಲವು ಸೆಕೆಂಡ್‌ಗಳ ಕಾಲ ಧ್ಯಾನ ಮಾಡಿದರು. ಬಳಿಕ ಮತಯಂತ್ರಕ್ಕೆ ಮೂರು ಬಾರಿ ಊದಿ ನಂತರ ಹಕ್ಕು ಚಲಾಯಿಸಿದರು.

ನಿಯಮದಂತೆ ಮತಯಂತ್ರಕ್ಕೆ ಪೂಜೆ ಸಲ್ಲಿಸುವಂತಿಲ್ಲ. ಶ್ರೀರಾಮುಲು ಅವರು ಮತಯಂತ್ರಕ್ಕೆ ಊದಿರುವುದು ಚುನಾವಣಾ ನಿಯಮದ ಉಲ್ಲಂಘನೆಯಲ್ಲವೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದಾರೆ. ಆದರೆ, ಅವರು ಎರಡೂ ಕಡೆಯೂ ಮತದಾನ ಮಾಡುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+