ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್ 27: ಗಣಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ ಐ ಮಾಡಿದ ಆ ಒಂದು ಪಾರ್ಟಿಯಿಂದಾಗಿ ಇಡೀ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯನ್ನೇ ಸೀಲ್ ಡೌನ್ ಮಾಡುವ ಹಾಗೆ ಆಗಿದೆ.

Recommended Video

ಚೀನಾ ವಸ್ತುಗಳ ವಿರುದ್ಧ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಮೋದಿ. | Narendra Modi | Oneindia Kannada

ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ ಐ ಮೌನೇಶ ರಾಥೋಡ್ ಅವರು, ತಮಗೆ ಗಂಡುಮಗು ಹುಟ್ಟಿದೆ ಎಂಬ ಸಂತಸದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಸಂಬಂಧಿಕರಿಗೆ ಹಾಗೂ ಹಿತೈಷಿಗಳಿಗೆ ಪಾರ್ಟಿ ಕೊಟ್ಟಿದ್ದೇ ಈಗ ಕಂಟಕವಾಗಿದೆ. ಪಾರ್ಟಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಭಾಗಿಯಾಗಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಬಳ್ಳಾರಿಯಲ್ಲಿ ಕೊರೊನಾ ಭಯಕ್ಕೆ ಶವದ ಹತ್ತಿರ ಸುಳಿಯದ ಕುಟುಂಬ; ಅಂತ್ಯಸಂಸ್ಕಾರ ಮಾಡಿದವರಲ್ಲೀಗ ಭಯಬಳ್ಳಾರಿಯಲ್ಲಿ ಕೊರೊನಾ ಭಯಕ್ಕೆ ಶವದ ಹತ್ತಿರ ಸುಳಿಯದ ಕುಟುಂಬ; ಅಂತ್ಯಸಂಸ್ಕಾರ ಮಾಡಿದವರಲ್ಲೀಗ ಭಯ

ಜೂನ್ 19ರಂದು ಕಂಪ್ಲಿ ಪಟ್ಟಣದ ಹೊರವಲಯದಲ್ಲಿರುವ ಸಮುದಾಯ ಭವನದಲ್ಲಿ ಪಿಎಸ್ ಐ ಮೌನೇಶ ರಾಥೋಡ್ ಪಾರ್ಟಿ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಆದರೆ ಈ ಪಾರ್ಟಿಯಲ್ಲಿ ಸೋಂಕಿತ, ಕಂಪ್ಲಿ ಠಾಣೆಯ ಪೊಲೀಸ್ ಪೇದೆ ಭಾಗಿಯಾಗಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಇದೀಗ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

Ballari Kampli Police Station Seal Down And 50 People Quarantined

ಸೋಂಕಿತ ಪೇದೆಯು ಜೂ.20ರ ರಾತ್ರಿ ತಾಲೂಕಿನ ಚಿನ್ನಾಪುರ ಗ್ರಾಮದ ಕಂಟೈನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜೂ. 21ರಂದು ಪಟ್ಟಣದಲ್ಲಿ ರಾತ್ರಿ ಬೀಟ್ ನಲ್ಲಿಯೂ ಕೆಲಸ ಮಾಡಿದ್ದರು. ಜೂ.22 ರಿಂದ ಜೂ.25ರವರೆಗೆ ರಜೆ ತೆಗೆದುಕೊಂಡು ಹಗರಿಬೊಮ್ಮನಹಳ್ಳಿ ಬಳಿಯ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಜೂ. 23ರಂದು ಹಗರಿಬೊಮ್ಮನಹಳ್ಳಿ ಫಿವರ್ ಕ್ಲಿನಿಕ್‍ ನಲ್ಲಿ ಆನಾರೋಗ್ಯದ ಕಾರಣದಿಂದ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದು, ಜೂ. 25ರ ವರದಿಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
Kampli police station seal-downed because of corona virus infected police participated in party conducted by psi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X