ಆತ್ಮಹತ್ಯೆ ಮಾಡಿಕೊಂಡ ಪ್ರೇಯಸಿ ಶವವನ್ನು ಆತ ಬೈಕ್ ನಲ್ಲಿ ತಂದ

ಬಳ್ಳಾರಿ, ಜುಲೈ 10: ಇಲ್ಲಿನ ಸಿರುಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದಲ್ಲಿ ಹೃದಯ ಕಲುಕುವಂಥ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಪ್ರೇಯಸಿಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ.

ಆಗಿದ್ದೇನೆಂದರೆ, ಸಿರಿಗೆರೆಯ ಹತ್ತೊಂಬತ್ತು ವರ್ಷದ ಹನುಮಂತಮ್ಮ ಹಾಗೂ ದಾವಲ್ ಸಾಬ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ದಾವಲ್ ಸಾಬ್ ನಿಗೆ ಬೇರೊಂದು ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಈ ವಿಚಾರವಾಗಿ ದಾವಲ್ ಮತ್ತು ಹನುಮಂತಮ್ಮ ಮಧ್ಯೆ ಜಗಳ ಕೂಡ ನಡೆದಿತ್ತು.

Suicide

ಆ ನಂತರ ಹನುಮಂತಮ್ಮಳನ್ನು ಸಮಾಧಾನಪಡಿಸಲು ದಾವಲ್ ಸಾಬ್ ಯತ್ನಿಸಿದ್ದ. ಆದರೆ ಹನುಮಂತಮ್ಮ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ತನ್ನ ಕಣ್ಣೆದುರೇ ನೇಣಿಗೆ ಶರಣಾಗಿದ್ದ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಟಿಕೊಂಡು ದಾವಲ್ ಸಾಬ್ ಬೈಕ್ ನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದಾನೆ ಎಂದು ವರದಿಯಾಗಿದೆ.

ಈ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾವಲ್ ಸಾಬ್ ನ ವಿಚಾರಣೆ ನಡೆಸುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+