ಬಳ್ಳಾರಿಯಲ್ಲಿ ಪ್ರಮುಖರಿಂದ ಮತದಾನ;ವೋಟ್ ಮಾಡಿದವರಿಗೆ ಮಜ್ಜಿಗೆ ವಿತರಣೆ

ಬಳ್ಳಾರಿ, ಏಪ್ರಿಲ್ 23:ಬಳ್ಳಾರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ವೈ ದೇವೆಂದ್ರಪ್ಪ ಹಾಗೂ ಅವರ ಪತ್ನಿ ಸುಶೀಲಮ್ಮ ದೇವೆಂದ್ರಪ್ಪನವರು ತಾಲೂಕಿನ ಅರಸಿಕೇರಿಯಲ್ಲಿ ಮತದಾನ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹಾಗೆಯೇ ಹೊಸಪೇಟೆಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಬೂತ್ 21 ರಲ್ಲಿ ಶಾಸಕ ಆನಂದಸಿಂಗ್ ಕುಟುಂಬ ಮತದಾನ ಮಾಡಿದೆ. ಆನಂದಸಿಂಗ್ ಅವರು ಪತ್ನಿ ಲಕ್ಷ್ಮೀ, ತಂದೆ ಪೃಥ್ವಿರಾಜ್ ಸಿಂಗ್ ಜೊತೆ ಆಗಮಿಸಿ ಮತ ಚಲಾವಣೆ ಮಾಡಿದ್ದಾರೆ.

Free buttermilk distribution for casting vote

ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದು 1751911 ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಮತಯಂತ್ರದಲ್ಲಿ ದಾಖಲಿಸಲಿದ್ದಾರೆ.

Free buttermilk distribution for casting vote

ಇದಕ್ಕಾಗಿ ಲೋಕಸಭಾ ಕ್ಷೇತ್ರದಾದ್ಯಂತ 1925 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 19 ಸಖಿ ಮತಗಟ್ಟೆಗಳು ಹಾಗೂ 1 ವಿಕಲಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 541 ಸೂಕ್ಷ್ಮ ಮತಗಟ್ಟೆಗಳು, 236 ಭಯಗ್ರಸ್ಥ ಮತಗಟ್ಟೆಗಳೆಂದು ಗುರುತಿಸಲಾಗಿದೆ.

Free buttermilk distribution for casting vote

ಉಚಿತ ಮಜ್ಜಿಗೆ
ಬಳ್ಳಾರಿಯಲ್ಲಿ ಮತ ಹಾಕಿದವರಿಗೆ ಉಚಿತ ಮಜ್ಜಿಗೆ ವಿತರಿಸಲಾಗುತ್ತಿದೆ.ಶಾಯಿ ತೋರಿಸಿದವರಿಗೆ ಜನತಾ ಹೊಟೇಲ್ ನಿಂದ ಕುಡಿಯಲು ತಂಪು ಮಜ್ಜಿಗೆ ಕೊಡಲಾಗುತ್ತಿದೆ.

ಸದ್ಯ ತಮ್ಮ ಹಕ್ಕು ಚಲಾಯಿಸಿ ಬಂದ ಮತದಾದರು ಮಜ್ಜಿಗೆ ಕುಡಿದು ದಣಿವು ನಿವಾರಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+