ಅನುಪಮಾ ಶೆಣೈ ಅವರ ಹೊಸ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್'
ಬಳ್ಳಾರಿ, ನವೆಂಬರ್ 01: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಕನ್ನಡ ರಾಜ್ಯೋತ್ಸವ (ನವೆಂಬರ್ 01) ದಿನದಂದು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. 'ಭಾರತೀಯ ಜನಶಕ್ತಿ ಕಾಂಗ್ರೆಸ್' ಹೆಸರಿನ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದಿಂದ ಪಕ್ಷಕ್ಕೆ ಇನ್ನೂ ಮಾನ್ಯತೆ ಸಿಗಬೇಕಿದೆ.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದೇವೆ. ನಾನು ಚುನಾವಣೆಗೆ ಸ್ಪರ್ಧಿಸಲು ಆಸೆ ಹೊಂದಿದ್ದೇನೆ, ಆದರೆ, ಕ್ಷೇತ್ರ ಯಾವುದು ಎಂದು ಇನ್ನೂ ಅಂತಿಮವಾಗಿಲ್ಲ ಎಂದರು.

ಕೃಷಿ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ. ಸಾರಿಗೆ ಮತ್ತು ಶಿಕ್ಷಣದಲ್ಲಿರುವವರಿಗೆ ಪಕ್ಷದಿಂದ ಸ್ಪರ್ಧಿಸಲು ಹೆಚ್ಚು ಒತ್ತುಕೊಡಲಿದ್ದೇವೆ ಎಂದು ಹೇಳಿದರು.
ಡಿವೈಎಸ್ಪಿ ರಾಜೀನಾಮೆ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆದಿದೆ, ಕಾನೂನು ಹೋರಾಟದಲ್ಲಿ ಜಯ ಸಿಗದೆ ಮರಳಿ ಇಲಾಖೆಗೆ ಹೋಗಲು ಅಲ್ಲ, ಬದಲಾಗಿ ಸರ್ಕಾರಿ ನೌಕರರಿಗೆ ಆದ ಅನ್ಯಾಯ, ಮಹಿಳೆಯ ಆದ ಅಗೌರವದ ವಿರುದ್ದವಾಗಿ ಕಾನೂನು ಹೋರಾಟ ಮಾಡುತ್ತಿರುವೆ ಎಂದು ಹೇಳಿದರು.












Click it and Unblock the Notifications