ವಿಷಾಹಾರ ಸೇವಿಸಿ ಬಳ್ಳಾರಿಯಲ್ಲಿ 450 ಕ್ಕೂ ಹೆಚ್ಚು ಜ‌ನ ಅಸ್ವಸ್ಥ

ಬಳ್ಳಾರಿ, ಮಾರ್ಚ್ 14: ವಿಷ ಆಹಾರ ಸೇವಿಸಿ ಸುಮಾರು 450 ಕ್ಕೂ ಹೆಚ್ಚು ಜನರ ಅಸ್ವಸ್ಥರಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಮಾಲ್ವಿಯಲ್ಲಿ ಶನಿವಾರ ನಡೆದಿದೆ.

ಮಾಲ್ವಿ ಗ್ರಾಮದಲ್ಲಿ ನಡೆದ ಪೀರ್ ಸಾಬ್ ಉರುಸ ನಲ್ಲಿ ಅವಘಡ ನಡೆದಿದ್ದು, ಪೀರ್ ಸಾಬ್ ಉರಸಿನಲ್ಲಿ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡಿದ್ದಾರೆ. ಬಳಿಕ ಕೆಲವರಿಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ, ಸಂಜೆ ಆಗುತಿದ್ದಂತೆ ಜನರಲ್ಲಿ ವಾಂತಿ ಬೇದಿ ಹೆಚ್ಚಾಗಿದೆ. ಹೀಗಾಗಿ ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಗರಿ ಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 450 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಕಾರಣ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನೆಲದಲ್ಲಿ ರೋಗಿಗಳನ್ನು ಹಾಕಿ ಚಿಕಿತ್ಸೆ ನೀಡಲಾಗಿದೆ. ಇನ್ನು ಇಬ್ಬರಿಗೆ ಸ್ಥಿತಿ ಗಂಭೀರವಾಗಿರುವ ಕಾರಣ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Food Poisoning In Bellary;: 450 Village People Hospitalised

ವಿಷಯ ತಿಳಿದ ಹಗರಿ ಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಬೀಮಾ ನಾಯಕ್ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+