ಬಳ್ಳಾರಿ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ ಅವಘಡ
ಬಳ್ಳಾರಿ, ಮೇ 2: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಳೇ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಅಪಾರ ಪ್ರಮಾಣದ ದಾಖಲೆ ಸುಟ್ಟು ಭಸ್ಮವಾಗಿದೆ.
ಇಂದು ಬೆಳಗ್ಗೆ ಸುಮಾರು 9 ಘಂಟೆ ಸುಮಾರಿಗೆ ಕಚೇರಿ ತೆರೆಯುತ್ತಿದ್ದಂತೆ, ಬೆಂಕಿ ಅವಘಡ ನಡೆದಿದೆ. ಕಚೇರಿಯಲ್ಲಿ ಇದ್ದ ಎರಡು ಕಂಪ್ಯೂಟರ್ ಮತ್ತು ಸ್ಟೋರ್ ರೂಂನಲ್ಲಿಟ್ಟಿದ್ದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.
ಹಠಾತ್ ಬೆಂಕಿಯಿಂದಾಗಿ ಇಡೀ ಕಚೇರಿ ತುಂಬಾ ಹೊಗೆ ಆವರಿಸಿಕೊಂಡಿತ್ತು. ಪ್ರಮುಖ ದಾಖಲೆಗಳು ಸುಟ್ಟು ಕರಕಲಾದವು.













Click it and Unblock the Notifications