• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಗೆ ನುಗ್ಗಿದ ಚರಂಡಿ ನೀರು; ಕಟ್ಟೆ ಮೇಲೆ ಕುಳಿತು ತರಾಟೆ ತೆಗೆದುಕೊಂಡ ಬಳ್ಳಾರಿ ಶಾಸಕ

|

ಬಳ್ಳಾರಿ, ಸೆಪ್ಟೆಂಬರ್ 3: ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಮನೆಗೆ ಇಂದು ಬೆಳಿಗ್ಗೆ ಚರಂಡಿ ನೀರು ನುಗ್ಗಿದೆ. ಇದರಿಂದ ಆಕ್ರೋಶಗೊಂಡ ಅವರು ಮನೆ ಮುಂದೆ ಕಟ್ಟೆ ಮೇಲೆ ಕೂತು ಬೆಳ್ಳಂಬೆಳಿಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಕ್ಕರಹಳ್ಳಿ ಕೆರೆಯಲ್ಲೂ ಕಾಣಿಸಿಕೊಂಡಿದೆ ನೊರೆ...ಮುಂದೇನು?

ಬಳ್ಳಾರಿಯ ಗಣೇಶ ಕಾಲೋನಿಯಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಶಾಸಕ ಸೋಮಶೇಖರ್ ರೆಡ್ಡಿ ಮನೆ ಮುಂದೆಯೂ ಚರಂಡಿ ನೀರು ಆವರಿಸಿದೆ. ಹೀಗಾಗಿ ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿಗೆ ಬೆಳಿಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮನೆ ಮುಂದಿನ ಕಟ್ಟೆ ಮೇಲೆ ಕುಳಿತು, "ಈ ಸಮಸ್ಯೆಗೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ನಗರದಲ್ಲಿ ಪದೇ ಪದೇ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೂ ಕ್ರಮ ತೆಗೆದುಕೊಂಡಿಲ್ಲ. 1978ರಲ್ಲಿ ಚರಂಡಿ ನಿರ್ಮಾಣವಾಗಿದ್ದು, ಇದರ ನಿರ್ವಹಣೆ ಮಾತ್ರ ಒಂದು ಬಾರಿಯೂ ಆಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅಧಿಕಾರಿಗಳು ವಾಹನಗಳನ್ನು ತರಿಸಿ ಕ್ಲೀನ್ ಮಾಡಲು ಮುಂದಾಗಿದ್ದಾರೆ.

English summary
Drainage water rushed to the Bellary MLA Somasekhar Reddy's house this morning. Outraged by this, he sat on the bench in front of the house and fired at the authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X