ಕಣ್ಣು ಕಾಣದ ತಂದೆಗೆ ಸೋಂಕು; ಅಪ್ಪ ಅಮ್ಮನಿಗೆ ಒಂದೇ ಕಡೆ ಚಿಕಿತ್ಸೆ ನೀಡಿ ಎಂದು ಕೋರಿದ ಮಗಳು
ಬಳ್ಳಾರಿ, ಜುಲೈ 28: ಕಣ್ಣು ಕಾಣದ ಅಪ್ಪ, ವಯಸ್ಸಾದ ಅಮ್ಮ ಇಬ್ಬರಿಗೂ ಕೊರೊನಾ ಸೋಂಕು ಬಂದಿದ್ದು, ಇಬ್ಬರನ್ನೂ ಬೇರೆ ಬೇರೆ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ದಯವಿಟ್ಟು ಇಬ್ಬರಿಗೂ ಒಂದೇ ಕಡೆ ಚಿಕಿತ್ಸೆ ನೀಡಿ ಎಂದು ಮಹಿಳೆಯೊಬ್ಬರು ವಿಡಿಯೋ ಮಾಡಿ ಕೇಳಿಕೊಂಡಿದ್ದಾರೆ.
Recommended Video
ಬಳ್ಳಾರಿ ಮೂಲದ ಕುಟುಂಬದ ಮೂರು ಜನರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಕುಟುಂಬ ಸದ್ಯ ಬೆಂಗಳೂರಿನ ಆರೆಹಳ್ಳಿಯಲ್ಲಿ ವಾಸವಾಗಿತ್ತು. ಇದೀಗ ಪತಿ, ಪತ್ನಿ, ಹಿರಿಯ ಮಗನಿಗೆ ಸೋಂಕು ತಗುಲಿದೆ. ಮೂರು ಜನರನ್ನೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆದರೆ ಅಪ್ಪನಿಗೆ ಕಣ್ಣು ಕಾಣುವುದಿಲ್ಲ. ಆದ್ದರಿಂದ ಅಪ್ಪ, ಅಮ್ಮ ಇಬ್ಬರಿಗೂ ಒಂದೇ ಕಡೆ ಚಿಕಿತ್ಸೆ ನೀಡಿ ಎಂದು ಮಗಳು ಶ್ರೀದೇವಿ ಕೇಳಿಕೊಂಡಿದ್ದಾರೆ.

ತಂದೆಗೆ 80 ವರ್ಷವಾಗಿದ್ದು, ಅವರಿಗೆ ಕಣ್ಣು ಕಾಣುವುದಿಲ್ಲ. ಅವರಿಗೆ ಸದ್ಯ ದೊರೆಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಗೆ ರಾಜರಾಜೇಶ್ವರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಬರುವ ಮುನ್ನ ತಾಯಿಯೇ ತಂದೆಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅವರ ನಿಗಾ ವಹಿಸಲು ಯಾರೂ ಇಲ್ಲ, ದಯವಿಟ್ಟು ಇಬ್ಬರಿಗೂ ಒಂದೇ ಕಡೆ ಚಿಕತ್ಸೆ ನೀಡಿ ಎಂದು ಬಳ್ಳಾರಿಯಲ್ಲಿ ನೆಲೆಸಿರುವ ಮಗಳು ಕಣ್ಣೀರು ಹಾಕಿದ್ದಾರೆ.












Click it and Unblock the Notifications