ಬಳ್ಳಾರಿ; ಕೊರೊನಾ ಸೋಂಕು ಪರೀಕ್ಷೆಗಾಗಿ ಇನ್ನು ಕಾಯಬೇಕಿಲ್ಲ

ಬಳ್ಳಾರಿ, ಏಪ್ರಿಲ್ 06: ಬಳ್ಳಾರಿ ಜಿಲ್ಲೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೇ ವೈರಾಣು ಪರೀಕ್ಷಾ ಪ್ರಯೋಗಾಲಯವನ್ನು ಆರಂಭ ಮಾಡಲಾಗಿದೆ.

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ - 19 ಪರೀಕ್ಷಾ ಕೇಂದ್ರವನ್ನು ಸೋಮವಾರ ಆರೋಗ್ಯ ಮತ್ತು ‌ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು. ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕೊರೊನಾ ಸೋಂಕಿನ ಬಗ್ಗೆ ಪರೀಕ್ಷಾ ವರದಿ‌ ಬೆಂಗಳೂರಿನಿಂದ ಬರುವ ತನಕ ಇನ್ನು ಮುಂದೆ ಕಾಯಬೇಕಿಲ್ಲ. ಬಳ್ಳಾರಿಯಲ್ಲಿಯೇ ಪರೀಕ್ಷಾ ಕೇಂದ್ರ ಆರಂಭವಾಗಿರುವುದರಿಂದ ತಕ್ಷಣವೇ ವರದಿ ಲಭ್ಯವಾಗಲಿದೆ.

ಪರೀಕ್ಷಾ ಕೇಂದ್ರ ಆರಂಭವಾಗಿದ್ದು ಜಿಲ್ಲಾಡಳಿತಕ್ಕೂ ಸಹಾಯಕವಾಗಿದೆ. ಕೊರೊನಾ ಸೋಂಕು ಇರುವುದು ಪತ್ತೆಯಾದರೆ ಅಗತ್ಯ ಕ್ರಮಗಳನ್ನು‌ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ. ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ‌ ಪ್ರಯೋಗಾಲಯ ನೆರವಾಗಲಿದೆ.

ಅಗತ್ಯ ಪರಿಕರಗಳಿವೆ

ಅಗತ್ಯ ಪರಿಕರಗಳಿವೆ

ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆವರಣದಲ್ಲಿಯೇ ವೈರಾಣು ಪರೀಕ್ಷಾ ಪ್ರಯೋಗಾಲಯವನ್ನು ಆರಂಭ ಮಾಡಲಾಗಿದೆ. ಈ ಪ್ರಯೋಗಾಲಯದಲ್ಲಿ ಎಲ್ಲ ರೀತಿಯ ವೈದ್ಯಕೀಯ ಪರಿಕರಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಬಳ್ಳಾರಿ ಮತ್ತು ಸುತ್ತಮುತ್ತಲಿನ ಜನರಿಗೆ ಇದರಿಂದಾಗಿ ಸಹಾಯಕವಾಗಲಿದೆ.

15 ಸ್ಯಾಂಪಲ್ ಪರೀಕ್ಷಿಸಬಹುದು

15 ಸ್ಯಾಂಪಲ್ ಪರೀಕ್ಷಿಸಬಹುದು

ವಿಮ್ಸ್‌ನಲ್ಲಿ ಆರಂಭಿಸಲಾಗಿರುವ ವೈರಾಣು ಸಂಶೋಧನಾ ಮತ್ತು ರೋಗ ಪರೀಕ್ಷಾ ಪ್ರಯೋಗಾಲಯ ಸರಕಾರದಿಂದ‌ ಎಲ್ಲ ರೀತಿಯ ಪರಿಶೀಲನೆಗೆ ಒಳಪಟ್ಟು ಕಾರ್ಯಾರಂಭ ಮಾಡಿದೆ. ಈ ಪ್ರಯೋಗಾಲಯದಲ್ಲಿ ‌ಒಂದು ಯಂತ್ರವಿದ್ದು, ಪ್ರತಿದಿನಕ್ಕೆ ಒಂದು ಶಿಫ್ಟ್‌ನಲ್ಲಿ 15 ಸ್ಯಾಂಪಲ್ ಪರೀಕ್ಷಿಸಬಹುದು.

16.5 ಲಕ್ಷ ರೂ. ವೆಚ್ಚ

16.5 ಲಕ್ಷ ರೂ. ವೆಚ್ಚ

ಜಿಲ್ಲಾ‌ಡಳಿತದಿಂದ ಜಿಲ್ಲಾ ವಿಪತ್ತು ಪರಿಹಾರ ನಿಧಿ ಅಡಿ 16.5 ಲಕ್ಷ ರೂ.ಮೊತ್ತದಲ್ಲಿ ಇನ್ನೊಂದು ವೈರಾಣು ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದೆ. ಇದು ಕೂಡ ಪ್ರತಿ ಶಿಫ್ಟ್‌ನಲ್ಲಿ 45 ಸ್ಯಾಂಪಲ್ ಪರೀಕ್ಷಿಸಲಿದೆ. ಎರಡು ಶಿಫ್ಟ್‌ ಗಳಲ್ಲಿ ಎರಡು ಯಂತ್ರಗಳಿಂದ 110 ಸ್ಯಾಂಪಲ್ ಪ್ರತಿನಿತ್ಯ ಪರೀಕ್ಷಿಸಬಹುದಾಗಿದೆ.

ಹಲವು ಪ್ರಕರಣಗಳು

ಹಲವು ಪ್ರಕರಣಗಳು

ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈ ಪ್ರಯೋಗಾಲಯ ಸ್ಥಾಪಿಸಿದ್ದರಿಂದ ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಕೋವಿಡ್ - 19 ಪರೀಕ್ಷೆಗೆ ಸಹಾಯಕವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+