ಬ್ರೇಕಿಂಗ್ ನ್ಯೂಸ್: ಬಳ್ಳಾರಿಯಲ್ಲಿ 21 ಕೊರೊನಾ ವಾರಿಯರ್ಸ್ ಗೆ ಕ್ವಾರೆಂಟೈನ್!
ಬಳ್ಳಾರಿ, ಮೇ.21: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಬಳ್ಳಾರಿ ಜಿಲ್ಲಾಡಳಿತವು ದಿವ್ಯ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆ 21 ಕೊರೊನಾ ವಾರಿಯರ್ಸ್ ನ್ನು ಕ್ವಾರೆಂಟೈನ್ ನಲ್ಲಿ ಇರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
Recommended Video
ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ 93 ಮಂದಿಯನ್ನು ನಗರದ ಬಿಸಿಎಂ ಹಾಸ್ಟೆಲ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಸ್ಟೆಲ್ ನಲ್ಲಿ ಇರಿಸಲಾಗಿತ್ತು. ಆದರೆ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮುಂಬೈನಿಂದ ಆಗಮಿಸಿದ 93 ಮಂದಿ ಪೈಕಿ 11 ಮಂದಿಗೆ ಗುರುವಾರ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 11 ಕ್ವಾರೆಂಟೈನ್ ಸಿಬ್ಬಂದಿ ಹಾಗೂ 10 ಪೊಲೀಸರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.

ಬಳ್ಳಾರಿಯಲ್ಲಿ ಗುರುವಾರ 11 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು 19 ರಿಂದ 30ಕ್ಕೆ ಏರಿಕೆಯಾಗಿದೆ. 93 ಮಂದಿ ಪೈಕಿ 11 ಮಂದಿಗೆ ಸೋಂಕು ತಗಲಿರುವುದು ದೃಢಪಡುತ್ತಿದ್ದು, ಉಳಿದವರಲ್ಲಿ ಆತಂಕ ಹೆಚ್ಚಿಸಿದೆ. ಕ್ವಾರೆಂಟೈನ್ ನಲ್ಲಿ ಸೋಂಕಿತರ ಜೊತೆಗೆ ಉಳಿದುಕೊಂಡವರಿಗೂ ಕೊವಿಡ್-19 ತಗಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.












Click it and Unblock the Notifications