• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ; ಕಾಂಗ್ರೆಸ್ ಶಾಸಕನ ಸಹೋದರ ಬಿಜೆಪಿ ಸೇರ್ಪಡೆ

|

ಬಳ್ಳಾರಿ, ಅಕ್ಟೋಬರ್ 07: ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ. ಟಿ. ಪರಮೇಶ್ವರ ನಾಯ್ಕ್ ಸಹೋದರ ಬಿಜೆಪಿ ಸೇರಿದ್ದಾರೆ. ಪರಮೇಶ್ವರ ನಾಯ್ಕ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಸಹ ಆಗಿದ್ದರು.

ಹರಪನಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಪಿ. ಟಿ. ಶಿವಾಜಿ ನಾಯ್ಕ್ ಬಿಜೆಪಿ ಸೇರಿದರು. ಕ್ಷೇತ್ರದ ಶಾಸಕ ಕರುಣಾಕರ ರೆಡ್ಡಿ ಅವರು ಕಾಂಗ್ರೆಸ್ ಶಾಸಕನ ಸಹೋದರನನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಶಾಸಕ ಪಿಟಿ ಪರಮೇಶ್ವರ ನಾಯ್ಕಗೆ ಕೊರೊನಾ ಸೋಂಕು ದೃಢ

"ಪ್ರಧಾನಿ ನರೇಂದ್ರ ಮೋದಿ ಅವರ ತತ್ವಾದರ್ಶ, ಪಕ್ಷದ ಶಿಸ್ತನ್ನು ಮೆಚ್ಚಿಕೊಂಡು ಬಿಜೆಪಿ ಸೇರಿದ್ದೇನೆ" ಎಂದು ಪಿ. ಟಿ. ಶಿವಾಜಿ ನಾಯ್ಕ್ ಹೇಳಿದ್ದಾರೆ. ಶಿವಾಜಿ ನಾಯ್ಕ್ ಅವರ ಬೆಂಬಲಿಗರು ಸಹ ಬಿಜೆಪಿ ಸೇರಿದ್ದಾರೆ.

ಬಿಜೆಪಿ ಪಕ್ಷಕ್ಕೆ ತಿನ್ನುವ ಅನ್ನ ಜೀರ್ಣವಾಗುತ್ತಿಲ್ಲ: ಕಾಂಗ್ರೆಸ್ ಮಾಜಿ ಶಾಸಕ

"ಹರಪನಹಳ್ಳಿ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ನಮ್ಮ ಕುಟುಂಬದಲ್ಲಿ ಅನೇಕ ಸಮಸ್ಯೆಗಳಿವೆ. ಕುಟುಂಬದಲ್ಲಿನ ಸಮಸ್ಯೆಗಳಿಂದ ಬೇಸತ್ತು ಬಿಜೆಪಿ ಸೇರ್ಪಡೆಗೊಂಡಿದ್ದೇನೆ" ಎಂದು ಶಿವಾಜಿ ನಾಯ್ಕ್ ಹೇಳಿದ್ದಾರೆ.

ಬಳ್ಳಾರಿ; ಮಗುವಿಗೆ ಜಿಲ್ಲಾಧಿಕಾರಿ ನಕುಲ್ ಹೆಸರಿಟ್ಟ ದಂಪತಿ

"ಕರುಣಾಕರ ರೆಡ್ಡಿ ಅವರ ಜೊತೆ ಹಲವು ವರ್ಷಗಳಿಂದ ನಂಟಿದೆ. ಅವರ ಬಳಿ ಕ್ಷೇತ್ರದ ಕೆಲಸಕ್ಕೆ ಹೋದರೆ ಪರಮೇಶ್ವರ ನಾಯ್ಕ್ ಸಹಿಸುತ್ತಿರಲಿಲ್ಲ" ಎಂದು ಸಹ ಸಹೋದರನ ವಿರುದ್ಧ ಶಿವಾಜಿ ನಾಯ್ಕ್ ಆರೋಪ ಮಾಡಿದ್ದಾರೆ.

ಪಿ. ಟಿ. ಪರಮೇಶ್ವರ ನಾಯ್ಕ್ ಹರಪನಹಳ್ಳಿ ಮತ್ತು ಹೂವಿನ ಹಡಗಲಿ ಕ್ಷೇತ್ರದಿಂದ ತಲಾ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕಾರ್ಮಿಕ, ಮುಜರಾಯಿ ಸಚಿವರಾಗಿದ್ದರು.

English summary
P. T. Shivaji Naik brother of Congress MLA from Huvina Hadagali constituency P. T. Parameshwar Naik joined BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X