ಬಳ್ಳಾರಿ ಬಿಜೆಪಿಗೆ ತಲೆನೋವಾಗಿರುವ ಅಭ್ಯರ್ಥಿ ಶ್ರೀನಿವಾಸ್‌ ಆಸ್ತಿ ವಿವರ

ಬಳ್ಳಾರಿ, ಅಕ್ಟೋಬರ್ 16: ಡಿ.ಕೆ.ಶಿವಕುಮಾರ್ vs ಶ್ರೀರಾಮುಲು ಎನಿಸಿಕೊಂಡಿರುವ ಬಳ್ಳಾರಿ ಕ್ಷೇತ್ರ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ವೈದ್ಯ ಶ್ರೀನಿವಾಸ ಟಿ.ಆರ್. ನಾಮಪತ್ರ ಸಲ್ಲಿಸಿದ್ದಾರೆ.

ಆರು ವರ್ಷದ ಹಿಂದೆ ವೈದ್ಯಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಸಕ್ರಿಯ ರಾಜಕಾರಣಿಯಾಗಿ ಜೊತೆಗೆ ವೈದ್ಯರಾಗಿಯೂ ಗುರುತಿಸಿಕೊಂಡಿದ್ದ ಡಾ.ಟಿ.ಆರ್.ಶ್ರೀನಿವಾಸ ಅವರು ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಬಗಲ ಮುಳ್ಳಾಗಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಹಲವು ಸ್ಥರಗಳಲ್ಲಿ ಕಾರ್ಯಗಳನ್ನು ನಿರ್ವಹಿಸಿದ್ದರು. ಆರ್‌ಎಸ್‌ಎಸ್‌ ನಂಟೂ ಇರುವ ಅವರು ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದ್ದರು.

ತಮ್ಮ ಟಿಕೆಟ್ ಬೇಡಿಕೆಯನ್ನು ಪಕ್ಷದು ವರಿಷ್ಠರು ನಿರಾಕರಿಸಿದ ಕಾರಣ. ಹಾಗೂ ಶ್ರೀರಾಮುಲು ಅವರು ತಮ್ಮ ಜೊತೆ ಮಾತನಾಡುವ ಸೌಜನ್ಯವನ್ನೂ ತೋರದೆ ಕೆಟ್ಟದಾಗಿ ನಡೆದುಕೊಂಡರು ಎಂಬ ಕಾರಣ ನೀಡಿ ಅವರು ಪಕ್ಷದಿಂದ ಹೊರಬಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಆಸ್ತಿ ವಿವರವನ್ನೂ ಸಲ್ಲಿಸಿರುವ ವೈದ್ಯ, ಶ್ರೀ ಸಾಯಿ ಖಾಸಗಿ ಆಸ್ಪತ್ರೆ ಮಾಲೀಕ ಟಿ.ಆರ್.ಶ್ರೀನಿವಾಸ ಅವರ ಆಸ್ತಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ವೈದ್ಯರಾಗಿರುವ ಶ್ರೀನಿವಾಸ್ ಆಸ್ತಿ ಎಷ್ಟು?

ವೈದ್ಯರಾಗಿರುವ ಶ್ರೀನಿವಾಸ್ ಆಸ್ತಿ ಎಷ್ಟು?

* ಹಿಂದೆ ಸರ್ಕಾರಿ ವೈದ್ಯರಾಗಿದ್ದ ಹಾಗೂ ಈಗ ಖಾಸಗಿ ಆಸ್ಪತ್ರೆಯೊಂದರ ಮಾಲೀಕ ಹಾಗೂ ವೈದ್ಯರಾಗಿರುವ ಟಿದ.ಆರ್.ಶ್ರೀನಿವಾಸ್ ಅವರ 2018-19ನೇ ಸಾಲಿನ ಆದಾಯ 20,24,543 ರೂಪಾಯಿ. ಪತ್ನಿ ವೈದ್ಯೆ ಯರಿಯಮ್ಮ ಅವರ ವಾರ್ಷಿಕ ಆದಾಯ 1,40,500.

* ಪ್ರಸ್ತುತ ಶ್ರೀನಿವಾಸ ಅವರ ಬಳಿ 2,00,000 ನಗದು ಹಣವಿದೆ. ಅವರ ಪತ್ನಿ ಯರಿಯಮ್ಮ ಅವರ ಬಳಿ 1,00,000 ನಗದು ಹಣವಿದೆ.

ಹಲವು ವಿಮೆ ಮಾಡಿಸಿದ್ದಾರೆ ಶ್ರೀನಿವಾಸ್

ಹಲವು ವಿಮೆ ಮಾಡಿಸಿದ್ದಾರೆ ಶ್ರೀನಿವಾಸ್

* ಶ್ರೀನಿವಾಸ್ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 4,02,773 ರೂಪಾಯಿ ಹಣವಿದೆ. 66,176 ರೂಪಾಯಿ ಹಣವಿದೆ. ಶ್ರೀನಿವಾಸ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರ ಖಾತೆಯಲ್ಲೂ ಹಣವಿಲ್ಲ ಅಥವಾ ಇಬ್ಬರಿಗೂ ಬ್ಯಾಂಕ್ ಖಾತೆ ಇಲ್ಲ.

* ಶ್ರೀನಿವಾಸ ಅವರಿಗೆ 8 ಲಕ್ಷ, 15 ಲಕ್ಷ, 2 ಲಕ್ಷ, 10 ಲಕ್ಷ ವಿಮೆ ಇದೆ. ಪತ್ನಿ ಅವರ ಹೆಸರಲ್ಲಿ 6.40, 2.18, 8 ಲಕ್ಷ ಮೌಲ್ಯದ ವಿಮೆ ಪತ್ನಿ ಹೆಸರಲ್ಲಿ ಇದೆ. ಮಕ್ಕಳಿಬ್ಬರಿಗೂ 8 ಲಕ್ಷದ ವಿಮೆ ಇದೆ.

ಕಾರುಗಳೆಷ್ಟಿವೆ, ಬೈಕ್‌ ಇರುವುದೆಷ್ಟು?

ಕಾರುಗಳೆಷ್ಟಿವೆ, ಬೈಕ್‌ ಇರುವುದೆಷ್ಟು?

* ಶ್ರೀನಿವಾಸ ಅವರ ಹೆಸರಿನಲ್ಲಿ 2015 ರಲ್ಲಿ ಕೊಂಡುಕೊಂಡಿರುವ 15 ಲಕ್ಷ ಮೌಲ್ಯದ ಕಾರಿದೆ. ಅವರ ಪತ್ನಿ ಹೆಸರಲ್ಲಿ 2018 ರಲ್ಲಿ ಕೊಂಡಿರುವ 12 ಲಕ್ಷ ಮೌಲ್ಯ ಒಂದು ಕಾರು ಹಾಗೂ 50,000 ಮೌಲ್ಯದ ಒಂದು ದ್ವಿಚಕ್ರ ವಾಹನವಿದೆ.

* ಶ್ರೀನಿವಾಸ್ ಅವರ ಬಳಿ 3 ಲಕ್ಷ ಮೌಲ್ಯದ ಚಿನ್ನ ಇದೆ. ಅವರ ಪತ್ನಿ ಬಳಿ 14,00,000 ಮೌಲ್ಯದ ಚಿನ್ನಾಭರಣ ಇದೆ. ಟಿವಿ, ಫ್ರಿಡ್ಜ್‌, ಎಸಿ, ಮೊಬೈಲ್‌ಗಳ ಮೌಲ್ಯ 1.55 ಲಕ್ಷವಂತೆ.

1.10 ಕೋಟಿ ಸ್ಥಿರಾಸ್ತಿ

1.10 ಕೋಟಿ ಸ್ಥಿರಾಸ್ತಿ

* ಶ್ರೀನಿವಾಸ್ ಅವರ ಒಟ್ಟು ಚರಾಸ್ಥಿಯ ಮೌಲ್ಯ 51,25,773 ಮತ್ತು ಅವರ ಪತ್ನಿ ಯರಿಯಮ್ಮ ಅವರ ಹೆಸರಿನಲ್ಲಿರುವ ಒಟ್ಟು ಚರಾಸ್ತಿಯ ಮೌಲ್ಯ 42,28,862 ರೂಪಾಯಿಗಳಾಗುತ್ತವೆ.

* ಶ್ರೀನಿವಾಸ ಅವರಿಗಿರುವ ಒಟ್ಟು ಕೃಷಿ ಹಾಗೂ ಕೃಷಿಯೇತರ ಜಮೀನಿನ ಇಂದಿನ ಮಾರುಕಟ್ಟೆ ಮೌಲ್ಯ ಅಂದಾಜು 1.10 ಕೋಟಿ ಆಗುತ್ತದೆ. ಅವರ ಪತ್ನಿ ಹೆಸರಲ್ಲಿರುವ ಕೃಷಿ ಹಾಗೂ ಕೃಷಿಯೇತರ ಜಮೀನು ಅಥವಾ ಸ್ವತ್ತಿನ ಮೌಲ್ಯ 78 ಲಕ್ಷವಾಗುತ್ತದೆ.

ಆಸ್ಪತ್ರೆಗೆ 2.37 ಕೋಟಿ ಬಂಡವಾಳ

ಆಸ್ಪತ್ರೆಗೆ 2.37 ಕೋಟಿ ಬಂಡವಾಳ

* ಶ್ರೀನಿವಾಸ್ ಅವರು ತಮ್ಮ ಮಾಲೀಕತ್ವದ ಆಸ್ಪತ್ರೆಯ ಮೇಲೆ 2.37 ಕೋಟಿ ಬಂಡವಾಳ ಹೂಡಿದ್ದಾರೆ. ಅವರ ಪತ್ನಿ 6 ಲಕ್ಷವನ್ನು ಎರಡು ಫೈನಾನ್ಸ್‌ ಸಂಸ್ಥೆಗಳ ಮೇಲೆ ಹೂಡಿದ್ದಾರೆ.

* ಶ್ರೀನಿವಾಸ್ ಅವರು 2.37 ಕೋಟಿ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿ ಮಾಡಬೇಕಿದೆ. ಅವರ ಪತ್ನಿ ಸಹ 8,00,000 ಸಾಲ ಪಡೆದಿದ್ದಾರೆ. ಇನ್ನುಳಿದಂತೆ ಇನ್ನಾವುದೇ ಬಾಕಿಗಳನ್ನು ಅವರು ಉಳಿಸಿಕೊಂಡಿಲ್ಲ.

ದೆಹಲಿಯಲ್ಲಿ ಎಂಡಿ, ಮಂಗಳೂರಲ್ಲಿ ಎಂಬಿಬಿಎಸ್‌

ದೆಹಲಿಯಲ್ಲಿ ಎಂಡಿ, ಮಂಗಳೂರಲ್ಲಿ ಎಂಬಿಬಿಎಸ್‌

* ಶ್ರೀನಿವಾಸ್ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 5.52 ಕೋಟಿ ರೂಪಾಯಿ. ಪತ್ನಿ ಯರ್ರಿಯಮ್ಮ ಅವರ ಸ್ಥಿರಾಸ್ತಿ ಮೌಲ್ಯ 43.29 ಲಕ್ಷ ರೂಪಾಯಿ.

* ಶ್ರೀನಿವಾಸ್ ಅವರು ಮಂಗಳೂರು ವಿವಿಯಲ್ಲಿ ಎಂಬಿಬಿಎಸ್‌ ಮಾಡಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಎಂಡಿ ಮಾಡಿದ್ದಾರೆ. ಪ್ರಸ್ತುತ ಬಳ್ಳಾರಿಯಲ್ಲಿ ಶ್ರೀ ಸಾಯಿ ಆಸ್ಪತ್ರೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+