ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಭಾರಿ ಭಾರಿ ಹವಾಲಾ ಹಣ ಪತ್ತೆ!

By Srinath
|
Google Oneindia Kannada News

ಬಳ್ಳಾರಿ, ಏಪ್ರಿಲ್ 12: ಚುನಾವಣೆ ಸಮಯದಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಆತಂಕಕಾರಿ ಸುದ್ದಿಯೊಂದು ಬಳ್ಳಾರಿಯಿಂದ ಹೊರಬಿದ್ದಿದೆ. 54 ವರ್ಷಗಳ ಹಿಂದೆ ರಾಜಸ್ಥಾನದಿಂದ ಬಂದು ಇಲ್ಲಿ ನೆಲೆಸಿದ ಬಾಬೂಲಾಲ್ ಎಂಬುವವನ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನದ ಬಿಸ್ಕತ್, ಚೆಕ್, ಬಾಂಡ್ ಇತ್ಯಾದಿ ಇತ್ಯಾದಿ ದೊರೆತಿವೆ.

ಚುನಾವಣೆ ಸಂದರ್ಭದಲ್ಲಿ ಈ ಪ್ರಮಾಣದ ನಗದು ದೊರೆತಿರುವುದು ಇದೇ ಮೊದಲು ಎನ್ನಲಾಗಿದ್ದು, ಚುನಾವಣಾಧಿಕಾರಿಗಳು ನಗದು/ ಚಿನ್ನ ನೋಡಿ ಬೆಚ್ಚಿಬಿದ್ದಿದ್ದಾರೆ.

money

ಖಚಿತ ಮಾಹಿತಿಯ ಮೇರೆಗೆ ಚುನಾವಣಾಧಿಕಾರಿಗಳು, ಸ್ಥಳೀಯ ಪೊಲೀಸರು ತೆರಿಗೆ ಅಧಿಕಾರಿಗಳು ದಿಢೀರನೆ ಬಾಬೂಲಾನ ಮೂರು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬಾಬೂಲಾಲನ ಮನೆಗಳಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳು ನಿನ್ನೆ ನಡುರಾತ್ರಿಯಿಂದ ವಶಪಡಿಸಿಕೊಂಡಿರುವ ನಗದು, ವಸ್ತುಗಳ ಲೆಕ್ಕ ಹಾಕುತ್ತಲೇ ಇದ್ದಾರೆ. ಆದರೆ ಅದಿನ್ನೂ ಮುಗಿಲ್ಲ. ಆ ಪಾಟಿ ಹಣ ಸಿಕ್ಕಿದೆ.

ಸದ್ಯದ ಮಾಹಿತಿ ಪ್ರಕಾರ ಬಳ್ಳಾರಿಯ ಗಣೇಶ ಮಂದಿರ ಬಡವಾಣೆಯಲ್ಲಿ ಬಾಬೂಲಾಲ್ ಮನೆಯಲ್ಲಿ ಸಿಕ್ಕಿರುವ ನಗದು/ ಸರಕು ವಿವರ ಹೀಗಿದೆ: * 9 ಕೋಟಿ ನಗದು, * 9 ಕೋಟಿ NSC bonds, 9 ಕೋಟಿ ರೂ ಮೌಲ್ಯದ cheque, ನೂರಾಋಉ ಎಕರೆ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರ... ಇತ್ಯಾದಿ ಇತ್ಯಾದಿ.

ಬಾಬೂಲಾಲ್ ಫೈನಾನ್ಶಿಯರ್ ಸಹ ಆಗಿದ್ದು, ಅನೇಕ ಮಂದಿಗೆ ಸಾಲಗಳನ್ನು ನೀಡಿದ್ದಾನೆ. ದಾಳಿ ವೇಳೆ ಸಿಕ್ಕಿರುವ ಚೆಕ್ಕುಗಳು ಖಾತ್ರಿ ರೂಪದಲ್ಲಿ ಸಾಲಗಾರರು ನೀಡಿರುವ ಚೆಕ್ಕುಗಳು ಎನ್ನಲಾಗಿದೆ.

ಬಳ್ಳಾರಿಯಲ್ಲಿ ಇತ್ತೀಚೆಗೆ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದಾಗ ಬಾಬುಲಾಲನ ಬಳಿ 1,000 ಕ್ಕೂ ಹೆಚ್ಚು ಲಾರಿಗಳು ಇದ್ದವಂತೆ. ಬಾಬುಲಾಲನ ಪುತ್ರರಾದ ರಮೇಶ್ ಪುರಿಯಾ, ಶ್ರೀಕಾಂತ್ ಸಹ ಅಪ್ಪನ ಫೈನಾನ್ಸ್ ದಂಧೆಗೆ ನೆರವು ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಬಾಬುಲಾಲ್‌ ಪ್ರಮುಖ ಪಕ್ಷಗಳ ಮುಖಂಡರೊಂದಿಗೆ ಬಾಂಧವ್ಯ ಹೊಂದಿದ್ದು, ಅಭ್ಯರ್ಥಿಗಳಿಗೆ ಹವಾಲಾ ರೂಪದಲ್ಲಿ ಹಣ ನೀಡಲು ಈ ಹಣವನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಚುನಾವಣಾ ಪ್ರಚಾರಕ್ಕೆಂದು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಇಂದು ಬೆಳಗ್ಗೆ ಆಗಮಿಸಿದ್ದು, ಬಾಬುಲಾಲ್ ಬಗ್ಗೆ ಸುದ್ದಿಗಾರರು ಕೇಳಿದಾಗ 'ನನಗೂ ಆ ಬಾಬುಲಾಲ್ ಗೂ ಯಾವುದೇ ಸಂಬಂಧವಿಲ್ಲ. ಅಸಲಿಗೆ ನಾನು ಆತನ ಹೆಸರನ್ನೂ ಕೇಳಿಲ್ಲ, ಆತನ ಮುಖವನ್ನೂ ನೋಡಿಲ್ಲ. ಬಳ್ಳಾರಿ ಅಂತ ಹೇಳೀದ ತಕ್ಷಣ ನನಗೂ ಆತನಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

English summary
Lok Sabha Elections 2014- Bellary poll officers confiscate crores of hawala money from Babulal Yesterday (April 11). Babulal a native of Rajasthan has settled in Bellary 54 years back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X