ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಚನಗುಡ್ಡದ ಸುತ್ತ ಕಿಂಗ್ ಫಿಷರ್ ಗಳ ಕಲರವ ಕೇಳ ಬನ್ನಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಆಗಸ್ಟ್.06: ಸಿರಗುಪ್ಪ ತಾಲೂಕಿನ ಕೆಂಚನಗುಡ್ಡವನ್ನು ಸೀಳಿಕೊಂಡು ಹರಿಯುವ ತುಂಗಭದ್ರಾ ನದಿ ತುಂಬಿ ತುಳಕುವಾಗ ಪ್ರವಾಸಿಗರ ಮನಸೂರೆಗೊಳ್ಳುವಷ್ಟು ಪ್ರಕೃತಿ ವೈವಿಧ್ಯಗಳನ್ನು ಹೊಂದಿದೆ.

ಜುಳುಜುಳು ನೀರಿನ ನಿನಾದದ ಮಧ್ಯೆ, ಪರಿಸರದಲ್ಲಿ ಹಕ್ಕಿ ಗುಬ್ಬಚ್ಚಿಗಳ ಚಿವ್ ಚಿವ್ ಸದ್ದು, ಝೀರುಂಡೆಗಳ ಜುಯ್ಯು ನಾದ, ಮಿಂಚು ಹುಳುಗಳ ಅಲೆದಾಟ, ಕಾಗೆ - ಹದ್ದುಗಳ ಹಾರಾಟ, ಇಷ್ಟೆಲ್ಲಾ ಸದ್ದು ಗದ್ದಲಗಳ ಮಧ್ಯೆ ಮನಸ್ಸಿಗೆ ಮುದ ನೀಡುವ ಪ್ರಕೃತಿಯ ಸೊಬಗು ಮನಸ್ಸನ್ನು ಆಹ್ಲಾದಗೊಳಿಸುತ್ತದೆ.

Beautiful King Fisher Birds are flying in Kenchanagudda

ಅಪರೂಪದ ಮರಗಳ ಕುರಿತು ಆಸಕ್ತಿ ಇದ್ದರೆ ಲಾಲ್‌ ಬಾಗ್‌ಗೆ ಬನ್ನಿ!ಅಪರೂಪದ ಮರಗಳ ಕುರಿತು ಆಸಕ್ತಿ ಇದ್ದರೆ ಲಾಲ್‌ ಬಾಗ್‌ಗೆ ಬನ್ನಿ!

ಈ ನಿಟ್ಟಿನಲ್ಲಿ ಹೇಳುವುದಾದರೆ, ಕೆಂಚನಗುಡ್ಡದ ಸುತ್ತಲೂ ಇರುವ ಅಪರೂಪದ ಪ್ರಕೃತಿಯಲ್ಲಿ ಮಿಂದೇಳಲು ಅನೇಕ ಹಕ್ಕಿಗಳು, ವಿಧವಿಧವಾದ ಪಕ್ಷಿಗಳು ಕಿಲೋಮೀಟರ್‍ಗಟ್ಟಲೆ ದೂರದಿಂದ ಹಾರಿಕೊಂಡು ಇಲ್ಲಿಗೆ ಬರುತ್ತಿವೆ.

Beautiful King Fisher Birds are flying in Kenchanagudda

ಕಪ್ಪು ಮತ್ತು ನೀಲಿ ಬಣ್ಣದ ಮೇಲೆ ಬಿಳಿ ಚುಕ್ಕೆ ಇರುವ ಅಪರೂಪದ ಕಿಂಗ್ ಫಿಷರ್ ಹಕ್ಕಿಗಳು ಇಲ್ಲಿ ನಿರಾಳವಾಗಿ ಹಾರಾಡಿ, ಪಕ್ಷಿ ಪ್ರಿಯರಲ್ಲಿ ವಿಸ್ಮಯಗಳನ್ನು ಮೂಡಿಸುತ್ತಿವೆ. ಕಪ್ಪು ಬಣ್ಣದ ಕಿಂಗ್ ಫಿಷರ್ ಗಳ ದೇಹವೆಲ್ಲಾ ಬಿಳಿ ಆಗಿದ್ದು, ತಲೆಯ ಮೇಲೆ ಮಾತ್ರ ಕಪ್ಪು ಬಣ್ಣ ಮೂಡಿರುತ್ತದೆ.

Beautiful King Fisher Birds are flying in Kenchanagudda

ಸಿರುಗುಪ್ಪದ ಹವ್ಯಾಸಿ ಛಾಯಾಗ್ರಹಕ ದಾನಪ್ಪಗೌಡ ಅವರು ಈ ಪ್ರಕೃತಿ ವಿಸ್ಮಯದ ಫೋಟೋಗಳನ್ನೆಲ್ಲಾ ಕ್ಲಿಕ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

English summary
Beautiful King Fisher Birds are flying in Kenchanagudda, Bellary District. Different birds fly from a distance of kilometers and come here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X