ಬಳ್ಳಾರಿಯಲ್ಲಿ 13 ಕೊರೊನಾ ಸೋಂಕಿತರ ಪೈಕಿ 5 ಮಂದಿ ಡಿಸ್ಚಾರ್ಜ್!
ಬಳ್ಳಾರಿ, ಏಪ್ರಿಲ್.26: ಕೊರೊನಾ ವೈರಸ್ ಎಂಬ ಸಾವಿನ ಮನೆಯನ್ನು ದಾಟಿ ಗುಣಮುಖರಾದ ಇಬ್ಬರು ಸೋಂಕಿತರಿಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ವೈದ್ಯರು ಅತ್ಯಂತ ಹೃದಯಸ್ಪರ್ಶಿಯಾಗಿ ಬಿಳ್ಕೋಡಿಗೆ ನೀಡಿದ್ದಾರೆ.
ಕೊರೊನಾ ಸೊಂಕಿನಿಂದ ಗುಣಮುಖರಾದ ಹೊಸಪೇಟೆಯ ಪೇಶೆಂಟ್ ನಂಬರ್.90 ಹಾಗೂ ಬಳ್ಳಾರಿಯ ಗುಗ್ಗರಹಟ್ಟಿ ಪೇಶೆಂಟ್ ನಂಬರ್.151ರನ್ನು ಭಾನುವಾರ ಮಧ್ಯಾಹ್ನ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರ ಪೈಕಿ ಈ ಹಿಂದೆ ಕೂಡಾ ಮೂವರ ಆರೋಗ್ಯದಲ್ಲಿ ಚೇತರಿಸಿಕೊಂಡ ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತಿಬ್ಬರು ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಐವರು ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉಳಿದ ಎಂಟು ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು ಅವರ ಆರೋಗ್ಯದಲ್ಲೂ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮನೆ ಮಾಡಿದ್ದ ಆತಂಕ, ದುಗುಡ, ಭಯದ ವಾತಾವರಣ ಮಾಯವಾಗಿತ್ತು. ಕೊರೊನಾ ವೈರಸ್ ಕೂಡ ಸಾಮಾನ್ಯ ರೋಗ ಎಂಬಂತೆ ವೈದ್ಯರು ಪರಿಗಣಿಸುತ್ತಿದ್ದಾರೆ. ಕೊರೊನಾ ಅಷ್ಟೇ ಅಲ್ಲ, ಯಾವುದೇ ಆರೋಗ್ಯ ಸಮಸ್ಯೆಯಾದ್ರೂ ನಾವಿದ್ದೇವೆ ಡೊಂಟ್ ವರಿ" ಎಂದು ಹೇಳುವ ಮೂಲಕ ವೈದ್ಯರು ಧೈರ್ಯ ತುಂಬುತ್ತಿದ್ದಾರೆ.














Click it and Unblock the Notifications