ದೆಹಲಿಗೆ ಹೋಗಿ ಬಂದವರಿಗೆ ಗಡುವು ನೀಡಿದ ಬಳ್ಳಾರಿ ಎಸ್ಪಿ ಬಾಬಾ
ಬಳ್ಳಾರಿ, ಏಪ್ರಿಲ್ 07: ಪ್ರತಿಯೊಬ್ಬರ ಜೀವವೂ ನಮಗೆ ಮಹತ್ವ. ಇದಕ್ಕಾಗಿ ದೆಹಲಿಯ ನಿಜಾಮುದ್ದೀನ್ ಮಾರ್ಕಸ್ಸ್ ನಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ಜಿಲ್ಲೆಯವರು ಸ್ವಯಂ ಪ್ರೇರಣೆಯಿಂದ ಕೊರೊನಾ ಪರೀಕ್ಷೆಗೆ ಮುಂದಾಗಬೇಕು ಎಂದು ಎಸ್ಪಿ ಸಿ.ಕೆ.ಬಾಬಾ ಎಚ್ಚರಿಕೆ ನೀಡಿದ್ದಾರೆ.
Recommended Video
ಇನ್ನೂ ಅಬ್ಬರಿಸಲಿದೆ ಕೊರೊನಾ!!ಕೋಡಿ ಶ್ರೀಗಳು ಕೊರೊನಾ ಬಗ್ಗೆ ನುಡಿದ ಭವಿಷ್ಯ ಇಲ್ಲಿದೆ
ಈ ಕುರಿತು ಪ್ರಕಟಣೆ ನೀಡಿರುವ ಅವರು, "ಪ್ರಾಣಕ್ಕೆ ಯಾವ ಧರ್ಮದ ಭೇದ ಭಾವವಿಲ್ಲ, ಪ್ರತಿಯೊಬ್ಬರ ಆರೋಗ್ಯ ಮತ್ತು ಜೀವ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಹೊಣೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ತಿಳಿಸಿದ್ದಾರೆ.

ಒಂದು ವೇಳೆ ಕೊರೊನಾ ಪರೀಕ್ಷೆ ಮಾಡಿಸಲು ನಿರ್ಲಕ್ಷ್ಯವಹಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದೂ ಎಚ್ಚರಿಸಿದ್ದಾರೆ. ಇಂದು ಸಂಜೆ ಏಳು ಗಂಟೆವರೆಗೆ ಗಡುವು ನೀಡಿದ್ದು, ಒಂದು ವೇಳೆ ಏಳು ಗಂಟೆ ನಂತರ ಬರದೇ ಇದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದಿದ್ದಾರೆ.












Click it and Unblock the Notifications