ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಷೇತ್ರ ಬದಲಾವಣೆ; ಮತ್ತೆ ಬಳ್ಳಾರಿಗೆ ಬಿ. ಶ್ರೀರಾಮುಲು?

|
Google Oneindia Kannada News

ಬಳ್ಳಾರಿ, ಜನವರಿ 19; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವಿವಿಧ ಪಕ್ಷಗಳ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರವನ್ನು ಅಂತಿಮಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಬಿಜೆಪಿ ನಾಯಕ, ಸಚಿವ ಬಿ. ಶ್ರೀರಾಮುಲು ಕ್ಷೇತ್ರ ಬದಲಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

2018ರ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ 84,018 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವಿರುದ್ಧವೂ ಸ್ಪರ್ಧಿಸಿದ್ದರು. ಆದರೆ ಮುಂದಿನ ಚುನಾವಣೆಗೆ ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ?.

ಹಿರಿಯೂರು ಕ್ಷೇತ್ರದಿಂದ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧೆ? ಹಿರಿಯೂರು ಕ್ಷೇತ್ರದಿಂದ ಜನಾರ್ದನ ರೆಡ್ಡಿ ಚುನಾವಣೆಗೆ ಸ್ಪರ್ಧೆ?

ತವರು ಜಿಲ್ಲೆ ಬಳ್ಳಾರಿ ಮೇಲೆ ಬಿ. ಶ್ರೀರಾಮುಲುಗೆ ವಿಶೇಷ ಪ್ರೀತಿ. 5 ಬಾರಿ ಶಾಸಕರಾಗಿರುವ ಅವರು ಬಿಜೆಪಿ ಬಿಟ್ಟು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದಾಗಲೂ ಬಳ್ಳಾರಿ ಜನರು ಅವರ ಬೆಂಬಲಕ್ಕೆ ನಿಂತಿದ್ದರು. ಅಲ್ಲದೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಕು ಎಂಬುದು ಶ್ರೀರಾಮುಲು ಬಯಕೆ.

 ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್ ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಸ್ತುವಾರಿ ಸಚಿವ ಸ್ಥಾನಕ್ಕೆ ಭಾರೀ ಪ್ರಯತ್ನ ಪಟ್ಟಿದ್ದರು. ಆದರೆ ಆನಂದ್ ಸಿಂಗ್‌ಗೆ ಬಳ್ಳಾರಿ ಉಸ್ತುವಾರಿ ವಹಿಸಲಾಯಿತು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಶ್ರೀರಾಮುಲುಗೆ ಸಿಕ್ಕಿತು. ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿಲ್ಲ.

ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ?

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ?

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಬಿ. ಶ್ರೀರಾಮುಲು ಮುಂದಿನ ಚುನಾವಣೆಗೆ ಮೊಳಕಾಲ್ಮೂರು ಬಿಟ್ಟು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ.

ಬಳ್ಳಾರಿ ಜಿಲ್ಲೆ ವಿಭಜನೆಗೊಂಡು ವಿಜಯನಗರ ರಚನೆಯಾದರೂ ಬಳ್ಳಾರಿ ಉಸ್ತುವಾರಿ ಶ್ರೀರಾಮುಲು ಕೈಗೆ ಸಿಗುತ್ತಿಲ್ಲ. ತಾವು ಬೇರೆ ಜಿಲ್ಲೆಯ ಶಾಸಕರಾದ ಕಾರಣ ಉಸ್ತುವಾರಿ ಕೈ ತಪ್ಪುತ್ತಿದೆ ಎಂದು ಅಂದಾಜಿಸಿರುವ ಅವರು ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧಿಸಿ ಉಸ್ತುವಾರಿ ಪಡೆಯುವ ಚಿಂತನೆಯಲ್ಲಿದ್ದಾರೆ.

ಗದಗ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು

ಗದಗ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು

ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾದ ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಲಾಗಿತ್ತು. ಆದರೆ ಅದನ್ನು ಕೆಲವೇ ದಿನದಲ್ಲಿ ಬದಲಾವಣೆ ಮಾಡಿ ಎಂ. ಪಿ. ಪ್ರಕಾಶ್‌ಗೆ ಉಸ್ತುವಾರಿ ನೀಡಲಾಯಿತು. ಬಿ. ಶ್ರೀರಾಮುಲಿಗೆ ಗದಗ ಜಿಲ್ಲಾ ಉಸ್ತುವಾರಿ ವಹಿಸಲಾಯಿತು.

ಬಳಿಕ ವಿವಿಧ ಕಾರಣಗಳಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಬಿ. ಶ್ರೀರಾಮುಲುವಿನಿಂದ ದೂರವಾಗುತ್ತಿದೆ. ಈಗ ಬಳ್ಳಾರಿ ಜಿಲ್ಲೆ ವಿಭಜನೆಯಾಗಿದೆ. ಆದರೂ ಸಹ ಜಿಲ್ಲಾ ಉಸ್ತುವಾರಿ ಶ್ರೀರಾಮುಲು ಕೈಗೆ ಸಿಗುತ್ತಿಲ್ಲ.

ಬಳ್ಳಾರಿ ಗ್ರಾಮೀಣದಿಂದ ಗೆದ್ದರು

ಬಳ್ಳಾರಿ ಗ್ರಾಮೀಣದಿಂದ ಗೆದ್ದರು

ಬಿ. ಶ್ರೀರಾಮುಲು 2008ರ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಗೆದ್ದರು. ಬಿಜೆಪಿ ಸರ್ಕಾರದದಲ್ಲಿ ಸಚಿವರೂ ಆದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ಆಪ್ತ ಜನಾರ್ದನ ರೆಡ್ಡಿಗೆ ಸಿಕ್ಕಿತು. 2010, 2013ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಗೆದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲಿಲ್ಲ.

2018ರ ಚುನಾವಣೆಯಲ್ಲಿ ಬಳ್ಳಾರಿ ಬಿಟ್ಟು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಕಣಕ್ಕಿಳಿದು ಗೆದ್ದರು. ಬಳ್ಳಾರಿ ಜಿಲ್ಲೆಯವರು ಆಗದ ಕಾರಣ ಆಗ ಉಸ್ತುವಾರಿ ಶ್ರೀರಾಮುಲು ಕೈ ತಪ್ಪಿ ಆನಂದ್ ಸಿಂಗ್ ಕೈಗೆ ಹೋಯಿತು.

ಜಿಲ್ಲೆಯಲ್ಲಿ ಹಿಡಿತ ಸಾಧಿಸಬೇಕು

ಜಿಲ್ಲೆಯಲ್ಲಿ ಹಿಡಿತ ಸಾಧಿಸಬೇಕು

ಈಗ ಜನಾರ್ದನ ರೆಡ್ಡಿ ಬಳ್ಳಾರಿ, ರಾಜಕೀಯದಿಂದಲೇ ದೂರವಾಗಿದ್ದಾರೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಬೇಕಾದರೆ ಉಸ್ತುವಾರಿ ಬೇಕು ಎಂಬುದು ಬಿ. ಶ್ರೀರಾಮುಲು ಲೆಕ್ಕಾಚಾರವಾಗಿದೆ. ಆದ್ದರಿಂದ 2023ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆಗೆ ಅವರು ಚಿಂತನೆ ನಡೆಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಕ್ಷೇತ್ರ ಬದಲಾವಣೆಗೆ ಒಪ್ಪಿಗೆ ಕೊಡಲಿದೆಯೇ? ಎಂದು ಕಾದು ನೋಡಬೇಕಿದೆ. ಚುನಾವಣೆ ನಡೆದು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಯಲಿದೆ.

Recommended Video

ಅಬ್ಬಾ!ಏನ್ ಜಂಪ್ ಗುರೂ ಇದು..ಹೈ ಜಂಪ್ ನಲ್ಲಿ ಗೋಲ್ಡ್ ಮೆಡಲ್ ಫಿಕ್ಸ್ | Oneindia Kannada

English summary
Transport minister B. Sriramulu may change assembly seat. Now he is MLA from Molakalmuru of Chitradurga district. For 2023 elections he may contest from Ballari Rural seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X