ಬೆಂಕಿ ಹಚ್ಚುವ ಬೆದರಿಕೆ: ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಕರಣ ದಾಖಲು
ವಿಜಯನಗರ ಆಗಸ್ಟ್ 31: ಸಚಿವ ಆನಂದ್ ಸಿಂಗ್ ಅವರಿಂದ ಬೆಂಕಿ ಹಚ್ಚುವುದಾಗಿ ಬೆದರಿಕೆ ಬಂದಿದೆ ಎಂದು ಆರೋಪಿಸಿದ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಘಟನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಇತರೆ ಮೂವರ ವಿರುದ್ಧ ಇಲ್ಲಿನ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ 6ನೇ ವಾರ್ಡ್‍ನ ನಿವಾಸಿ ಡಿ.ಪೋಲಪ್ಪ ಮತ್ತು ಕುಟುಂಬದ ಸದಸ್ಯರಿಂದ ಪೆಟ್ರೋಲ್ ಸುರಿದುಕೊಂಡು ಎಸ್‌ಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಇದರ ಬೆನ್ನಲ್ಲೇ ಹೀಗಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂದೆ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ 9 ಜನರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆಗೆ ಮುಂದಾದದ್ದು ಸ್ಥಳೀಯರು ಆತಂಕಕ್ಕೀಡಾಗುವಂತಾಗಿತ್ತು. 'ಸಚಿವ ಆನಂದ್ ಸಿಂಗ್ ಬೆಂಕಿ ಹಾಕಿ ನಿಮ್ಮ ಮನೆ ಸುಡ್ತೀನಿ ಅಂತ ಬೆದರಿಸಿದ್ದಾರೆ, ಹೀಗಾಗಿ ಇಂದು ಪೆಟ್ರೋಲ್ ಸುರಿದುಕೊಂಡಿದ್ದೇವೆ, ಸಚಿವ ಆನಂದ್ ಸಿಂಗ್ ಬಂದು ಬೆಂಕಿ ಹಚ್ಚಲಿ' ಎಂದು ಪೋಲಪ್ಪ ಪ್ರತಿಭಟನೆ ವೇಳೆ ಹೇಳಿದರು.

ಡಿ.ಪೋಲಪ್ಪ 6 ನೇ ವಾರ್ಡ್‍ನ ಸುಣ್ಣದ ಬಟ್ಟಿ ಪ್ರದೇಶದ ನಿವಾಸಿಯಾಗಿದ್ದು, ನೀವಿರೋದು ನಮ್ಮ ಜಾಗ ಖಾಲಿ ಮಾಡಿ ಇಲ್ಲವಾದಲ್ಲಿ ಬೆಂಕಿ ಹಚ್ಚಿ ಸುಡ್ತೀನಿ ಅಂತ ಆನಂದ್ ಸಿಂಗ್ ರಿಂದ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ್ದಾರೆ. ಮಡಿವಾಳ ಸಮಾಜಕ್ಕೆ ಸೇರಿದ ಭೂಮಿ ಒತ್ತವರಿ ಮಾಡೋರೋ ಆರೋಪ ಪೋಲಪ್ಪ ಅವರ ಮೇಲಿದೆ, ತೆರವು ಮಾಡುವಂತೆ ಪೋಲಪ್ಪ ಅವರ ಮೇಲೆ ಒತ್ತಡ ಹಾಕಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಆತ್ಮಹತ್ಯೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದವರನ್ನು ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 'ನಾವೂ ವಾಸ ಮಾಡುತ್ತಾ ಇರುವ ಜಾಗ ಮಡಿವಾಳ ಸಮಾಜಕ್ಕೆ ಸೇರಿದಲ್ಲ, ವೀರಕ್ತಮಠದ ಶ್ರೀಗಳಿಂದ ನನ್ನ ಪತ್ನಿಯ ಕುಟುಂಬಕ್ಕೆ ಬಂದಿದೆ. ಈ ಜಾಗದಿಂದ ನಮ್ಮ ಕುಟುಂಬವನ್ನ ಒಕ್ಕಲೆಬ್ಬಿಸಲು ಸಚಿವರು ಸಂಚು ರೂಪಿಸಿದ್ದಾರೆ. ಸಚಿವರ ವಿರುದ್ಧ ಧ್ವನಿ ಎತ್ತಿದವರನ್ನ ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಪೋಲಪ್ಪ ಹೇಳಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ ಹೊಸಪೇಟೆಯ ಎಸ್‌ಪಿ ಕಚೇರಿ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪೋಲಪ್ಪ, ಟಿ ಸರೋಜಮ್ಮ, ವಿಜಯಕುಮಾರ್, ಮಹಾಲಕ್ಷ್ಮಿ, ಟಿ ಜ್ಞಾನೇಶ್ವರಿ, ಟಿ ಅಶ್ವಿನಿ ಎನ್ನುವವರು ಪೆಟ್ರೋಲ್ ಸುರಿದುಕೊಂಡು ಸರ್ಕಾರಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆ ಡಿಎಆರ್ ಪೊಲೀಸ್ ಸಿಬ್ಬಂದಿ ಗವಿಸಿದ್ದಪ್ಪ ಅವರು ದೂರು ನೀಡಿದ್ದಾರೆ. ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ. ಪೋಲಪ್ಪ ಎಂಬುವರು ಕೊಟ್ಟ ದೂರಿನ ಮೇರೆಗೆ ಐಪಿಸಿ ಸೇಕ್ಷನ್ 504,506 r/w 34 IPC, 3(2)(Va) SC/ST ಕಾಯ್ದೆ ಅಡಿ ಆನಂದ್ ಸಿಂಗ್, ಮರಿಯಪ್ಪ, ಹನುಮಂತಪ್ಪ ಹಾಗೂ ಹುಲುಗಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.












Click it and Unblock the Notifications