ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು ಮೋದಿ, ಶಾ ಭಯದಿಂದಾಗಿ: ಕುಮಾರಸ್ವಾಮಿ
ಬಳ್ಳಾರಿ, ನವೆಂಬರ್ 25: ಅನರ್ಹ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಳ್ಳಾರಿಯ ನಾಯಕನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಹೆಚ್ಡಿಕೆ, "ಆನಂದ್ ಸಿಂಗ್ ಬಳ್ಳಾರಿಯ ಮಣ್ಣು ಮಾರಿ ಸಿಕ್ಕಿಬಿದ್ದಿದ್ದರು, ಆಗ ಮೋದಿ, ಅಮಿತ್ ಶಾ ಒತ್ತಡ ಹೇರಿ ರಾಜೀನಾಮೆ ಕೊಡು ಇಲ್ಲಾ ಅಂದ್ರೆ ಬಿಡಲ್ಲ ಎಂದಿದ್ದಾರೆ. ಆಗ ಆನಂದ್ ಸಿಂಗ್ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದರು, ಮೋದಿಯಿಂದ ದೇಶ ಹಾಳಾಗುತ್ತಿದೆ" ಎಂದರು.
ಸ್ವಾತಂತ್ರ್ಯ ಬಂದು ಸುಮಾರು 70 ವರ್ಷಗಳು ಕಳೆದಿವೆ, ನಾವು ರಾಜಕಾರಣಿಗಳು ನಿಮಗೆ ಪ್ರತಿ ಚುನಾವಣಾ ಸಂದರ್ಭದಲ್ಲಿ ಆಶ್ವಾಸನೆ ನೀಡುತ್ತಾ ಬರುತ್ತೇವೆ. ಆದರೂ ಜನರ ಬದುಕು ಹಸನಾಗಿಲ್ಲ. ಇವತ್ತಿನ ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ, ರಾಜ್ಯದ ಮತದಾರರು ಎಚ್ಚೆತ್ತುಕೊಳ್ಳಬೇಕೆಂದರು.

ಗಣಿಧೂಳಿನಿಂದ ಇಲ್ಲಿ ಅನೇಕ ಜನರು ಬೆಳೆದಿದ್ದಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲುಗಿಂತ ನಾನೇನು ಕಮ್ಮಿ ಎಂಬಂತೆ ಆನಂದ್ ಸಿಂಗ್ ದೊಡ್ಡ ಬಂಗಲೆ ಕಟ್ಟಿಸಿದ್ದಾರೆ.
ಅವರಿಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ರೈತರ ಮತ ಬೇಕು ಆದರೆ ರೈತರ ಸಮಸ್ಯೆಗಳು ರಾಜಕಾರಣಿಗಳಿಗೆ ಬೇಡವಾಗಿದೆ ಎಂದರು.
ಈಗ ನನ್ನ ಸರ್ಕಾರ ಬೀಳಿಸಿರುವ ಆನಂದ್ ಸಿಂಗ್ ಮೊದಲು ಬಿಜೆಪಿಯಿಂದಾನೇ ರಾಜಾಕಾರಣಕ್ಕೆ ಬಂದಿದ್ದು, 2018 ರಲ್ಲಿ ಕಾಂಗ್ರೆಸ್ ಗೆ ಬಂದು ಸ್ಪರ್ಧೆ ಮಾಡಿದರು. ಗೆದ್ದ ಮೊದಲ ದಿನದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಟೋಪಿ ಹಾಕಲು ನೋಡಿದರು. ಈಗ ವಿಜಯನಗರ ಅಭಿವೃದ್ದಿಯ ನೆಪ ಹೇಳುತ್ತಿದ್ದಾರೆ, ಹಾಗಾದರೆ ಬಿಜೆಪಿ ಬಿಟ್ಟು ಬರುವಾಗ ಅಭಿವೃದ್ದಿ ಕಾಣಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಅನರ್ಹ ಶಾಸಕರಿಗಾಗಿ ಮುಖ್ಯಮಂತ್ರಿ ಪ್ರಾಣ ಕೊಡುವುದಾಗಿ ಹೇಳುತ್ತಾರೆ, ರಾಜ್ಯದ ಜನರಿಗಾಗಿ ಪ್ರಾಣ ಕೊಡುವುದಾಗಿ ಯಡಿಯೂರಪ್ಪ ಹೇಳಲಿಲ್ಲವಲ್ಲ ಎಂದು ಟೀಕಿಸಿದರು. ಎಲ್ಲ ಅನರ್ಹ ಶಾಸಕರನ್ನು ಸೋಲಿಸುವದೇ ನನ್ನ ಗುರಿ, ರಾಜ್ಯದ ಮತದಾರರು ಅವರನ್ನು ಸೋಲಿಸಲು ಪಣ ತೊಡಿ ಎಂದು ಕರೆ ನೀಡಿದರು.
ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇಲ್ಲಿ ಬಿಜೆಪಿಯಿಂದ ಆನಂದ್ ಸಿಂಗ್, ಕಾಂಗ್ರೆಸ್ ನಿಂದ ವಿ.ವೈ.ಘೋರ್ಪಡೆ ಮತ್ತು ಜೆಡಿಎಸ್ ನಿಂದ ಎನ್.ಎಂ.ನಬಿ ಚುನಾವಣಾ ಆಖಾಡದಲ್ಲಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications