• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯದ ಜೊತೆ ಕೃಷಿ; ಇದು ಸಹೋದರರ ಯಶಸ್ಸಿನ ಕಥೆ!

By ಭೀಮರಾಜ.ಯು. ವಿಜಯನಗರ
|

ವಿಜಯನಗರ, ಮೇ 24; ಇಲ್ಲೊಬ್ಬರು ಸಕ್ರಿಯ ರಾಜಕಾರಣದ ಜೊತೆ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಬೆಳ ಬೆಳೆದು, ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಇದು ಸಹೋದರರ ಯಶಸ್ಸಿನ ಕಥೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದ ನಿವಾಸಿ ಎಸ್. ಕೃಷ್ಣ ನಾಯ್ಕ್ ಅವರದ್ದು ಮೂವರು ತಮ್ಮಂದಿರು ಇರುವ ಅವಿಭಕ್ತ ಕುಟುಂಬ. ಕೃಷ್ಣ ನಾಯ್ಕ್ ತಂದೆ ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸಿದವರು. ಇವರ ಮೂರು ಜನ ಮಕ್ಕಳಲ್ಲಿ ಕೃಷ್ಣ ನಾಯ್ಕ್ ದೊಡ್ಡವರು, ಮೂವರು ತಮ್ಮಂದಿರಲ್ಲಿ ಒಬ್ಬರು ಸರ್ಕಾರಿ ಉದ್ಯೋಗಿ. ಇನ್ನಿಬ್ಬರು ಅಣ್ಣನ ಜೊತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ರೈತರ ಸಮಸ್ಯೆಗಳ ಸ್ಪಂದನೆಗೆ ಕೃಷಿ ಇಲಾಖೆಯಿಂದ ಸಹಾಯವಾಣಿ ಸ್ಥಾಪನೆರೈತರ ಸಮಸ್ಯೆಗಳ ಸ್ಪಂದನೆಗೆ ಕೃಷಿ ಇಲಾಖೆಯಿಂದ ಸಹಾಯವಾಣಿ ಸ್ಥಾಪನೆ

ಕೃಷ್ಣ ನಾಯ್ಕ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಕಳೆದ 27 ವರ್ಷಗಳಿಂದ ಮರಿಯಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆಯಾಗುತ್ತಿದ್ದಾರೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಸಂಘಟಿಸಿದವರಲ್ಲಿ ಮೊದಲಿಗರು. ಕಾಂಗ್ರೆಸ್ ಪಕ್ಷದಿಂದ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗದಿದ್ದಾಗ ಅಸಮಧಾನಗೊಂಡು ಜೆಡಿಎಸ್ ಪಕ್ಷದಿಂದ ಟಿಕೆಟ್ ತಂದು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದರು.

17 ಕೆ.ಜಿ ಟೊಮೆಟೊಗೆ 3 ರೂ! ಉಚಿತವಾಗಿ ಹಂಚಿದ ದೊಡ್ಡೇರಿ ರೈತ17 ಕೆ.ಜಿ ಟೊಮೆಟೊಗೆ 3 ರೂ! ಉಚಿತವಾಗಿ ಹಂಚಿದ ದೊಡ್ಡೇರಿ ರೈತ

ಹಗರಿಬೊಮ್ಮನಹಳ್ಳಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಎಸ್. ಭೀಮನಾಯ್ಕ್ ವಿರುದ್ಧ ಪರಾಜಿತಗೊಂಡರು. ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ 18ನೇ ವಾರ್ಡ್‌ನ ಸದಸ್ಯೆಯಾಗಿ ಕೃಷ್ಣ ನಾಯ್ಕ್ ತಮ್ಮನ ಹೆಂಡತಿ ಆಯ್ಕೆಯಾಗಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: 3 ಎಕರೆ 60 ಸೆಂಟ್ಸ್ ಬಾಳೆಯನ್ನು ನೆಲಸಮ ಮಾಡಿದ ರೈತಲಾಕ್‌ಡೌನ್ ಎಫೆಕ್ಟ್: 3 ಎಕರೆ 60 ಸೆಂಟ್ಸ್ ಬಾಳೆಯನ್ನು ನೆಲಸಮ ಮಾಡಿದ ರೈತ

ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆ

ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆ

ಅವಿಭಕ್ತ ಕುಟುಂಬವಾಗಿರುವುದರಿಂದ ಎಲ್ಲರೂ ಒಟ್ಟಾಗಿ ವಾಸವಾಗಿದ್ದಾರೆ. ಮನೆಯ ಎಲ್ಲಾ ಸದಸ್ಯರು ಜೊತೆಯಾಗಿ ಕೃಷಿ ಮಾಡುತ್ತಾರೆ. 11 ಎಕರೆ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೋಳಿ ಸಾಕಾಣಿಕೆಯಲ್ಲೂ ತೊಡಗಿಸಿಕೊಂಡಿದ್ದು ಸುಮಾರು 8 ಸಾವಿರ ಕೋಳಿಗಳನ್ನು ಸಾಕಿದ್ದಾರೆ. ಅವುಗಳನ್ನು 45 ರಿಂದ 50 ದಿನದಲ್ಲಿ ಮಾರಾಟ ಮಾಡುತ್ತಾರೆ.

ಕುರಿ‌ ಸಾಕಾಣಿಕೆಯೂ ಇದೆ

ಕುರಿ‌ ಸಾಕಾಣಿಕೆಯೂ ಇದೆ

ಸುಮಾರು 50 ರಿಂದ 100 ಕುರಿಗಳನ್ನು ಸಾಕುವುದಕ್ಕೆ ಒಂದು ಶೆಡ್ ನ್ನು ನಿರ್ಮಿಸಿಕೊಂಡಿದ್ದಾರೆ. ಇವುಗಳಿಗೆ ಅಗತ್ಯ ಇರುವ ಮೇವನ್ನು ತೋಟದಲ್ಲಿ ಬೆಳೆದಿದ್ದಾರೆ. ಸಣ್ಣ ಮರಿಗಳನ್ನು ತಂದು ಒಂದು ವರ್ಷಗಳ ಕಾಲ ಸಾಕಿದ ನಂತರ ಮಾರಟ ಮಾಡಲಾಗುತ್ತದೆ.

3 ಜರ್ಸಿ ತಳಿಯ ಆಕಳುಗಳನ್ನ ಸಾಕಲಾಗಿದ್ದು, ಮನೆಗೆ ಹಾಲನ್ನು ಉಳಿಸಿಕೊಂಡು ಹೊಟೇಲ್ ಮತ್ತು ಡಾಬಗಳಿಗೆ ಸಹ ಕಳಿಸುತ್ತಾರೆ. ಹಸುಗಳಿಗಾಗಿಯೇ ಪ್ರತ್ಯೇಕವಾಗಿ ಎರಡು ತಳಿಯ ಮೇವು ಬೆಳೆಸಿದ್ದಾರೆ. ಇಬ್ಬರಿಂದ ಮೂವರು ಕೆಲಸಗಾರರು ಇದ್ದಾರೆ. ಉಳಿದಂತೆ ಕುಟುಂಬದ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ

ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ

ವರ್ಷ ಪೂರ್ತಿ ಕುಟುಂಬದರೆಲ್ಲಾ ಸೇರಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ರೇಷ್ಮೆ, ಟಮಾಟೋ, ಬದನೆಕಾಯಿ, ಮೆಣಸಿನ‌ಕಾಯಿ, ಆಲೂಗಡ್ಡೆ, ಕರಿಬೇವು ಸೇರಿದಂತೆ ವಿವಿಧ ಬೆಳೆ ಇದೆ. ಆರು ತಿಂಗಳ ಬೆಳೆಗಳಾದ ಕಬ್ಬು, ಈರುಳ್ಳಿ, ಭತ್ತ ಹೀಗೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ವಿಶೇಷವೆಂದರೆ ಗೋಧಿ ಮತ್ತು ರಾಗಿಯನ್ನು ಸಹ ಬೆಳೆಯಲಾಗುತ್ತದೆ. ವಿವಿಧ ಸೊಪ್ಪುಗಳನ್ನು ಬೆಳೆಸಿದ್ದಾರೆ.

ಕೃಷಿಯನ್ನೇ ನಂಬಿದ್ದೇವೆ

ಕೃಷಿಯನ್ನೇ ನಂಬಿದ್ದೇವೆ

"ನಾವು ಮೊದಲಿನಿಂದಲೂ ಕೃಷಿ ಮಾಡಿಕೊಂಡು ಬಂದಿದ್ದೇವೆ, ತಮ್ಮಂದಿರೆಲ್ಲರು ಹೊಲದಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ನಾನು ಮನೆಯಲ್ಲಿ ದೊಡ್ಡವನು ಆಗಿದ್ದರಿಂದ ಹೊರಗಡೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದೆ. ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯದಲ್ಲಿ ತೊಡಗಿಸಿಕೊಂಡು ಹೊಲ, ಮನೆ ಕೆಲಸ ಮಾಡಿಕೊಂಡು ಇದ್ದೇನೆ" ಎಂದು ಕೃಷ್ಣ ನಾಯ್ಕ್ ಹೇಳುತ್ತಾರೆ.

English summary
S. Krishna Nayak from Vijayanagara district Hospet taluk Mariyammanahallitanda busy in politics and agriculture. His two brothers also helping Ksrishna Nayak in agriculture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X