ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಊಟವಿಲ್ಲದೇ ಹಸಿವಿನಿಂದ ಪ್ರಾಣಬಿಟ್ಟ 60ರ ವೃದ್ಧ

|
Google Oneindia Kannada News

ಬಳ್ಳಾರಿ, ಆಗಸ್ಟ್.18: ಕೊರೊನಾವೈರಸ್ ಸೋಂಕಿನಿಂದ ಗೃಹ ದಿಗ್ಬಂಧನದಲ್ಲಿದ್ದ 60 ವರ್ಷದ ವೃದ್ಧರೊಬ್ಬರು ಊಟವಿಲ್ಲದೇ ಹಸಿವಿನಿಂದ ಮೃತಪಟ್ಟಿರುವ ಅಮಾನವೀಯ ಘಟನೆಯು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಬಳ್ಳಾರಿ ಜಿಲ್ಲೆ ಟಿ.ಬೆಳಗಲ್ಲು ಗ್ರಾಮದ ನಿವಾಸಿ 60 ವರ್ಷದ ವೃದ್ಧರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಈ ಹಿನ್ನೆಲೆ ಗೃಹ ದಿಗ್ಬಂಧನದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದ ವೃದ್ಧ ಮಂಗಳವಾರ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಇಂದು ಸೋಂಕಿತರಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚುಕರ್ನಾಟಕದಲ್ಲಿ ಇಂದು ಸೋಂಕಿತರಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

ಕೊವಿಡ್-19 ಸೋಂಕಿಗೆ ಗುರಿಯಾಗಿದ್ದ ವೃದ್ಧನ ಸಾವಿಗೆ ನಿಜವಾಗಿಯೂ ಕಾರಣವೇನು. 60ರ ವೃದ್ಧನ ಸಾವಿನ ಬಗ್ಗೆ ತಿಳಿದರೂ ವೈದ್ಯಕೀಯ ತಂಡವು ಸ್ಥಳಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತವು ಸೂಚನೆ ನೀಡಿದೆ.

60-Years Old Man Under Home Isolation In A Ballari Village Succumbed Allegedly Due To Hunger

ಹಸಿವಿನಿಂದ ವೃದ್ಧ ಮೃತಪಟ್ಟಿರುವ ಶಂಕೆ:

ಕಳೆದ ಎರಡು ದಿನಗಳಿಂದ ವೃದ್ಧನು ಹಸಿವಿನಿಂದ ಬಳಲುತ್ತಿದ್ದು ಆಹಾರಕ್ಕಾಗಿ ಭಿಕ್ಷೆ ಬೇಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ದಿನಕ್ಕೆ ಒಂದು ಬಾರಿಯಷ್ಟೇ ವೃದ್ಧನಿಗೆ ಆಹಾರವನ್ನು ನೀಡಲಾಗುತ್ತಿತ್ತು. ಹೀಗಾಗಿ ಊಟವಿಲ್ಲದೇ ವೃದ್ಧನು ಪ್ರಾಣ ಬಿಟ್ಟಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಈ ಆರೋಪ ಕೇಳಿ ಬರುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆಗಸ್ಟ್.15ರಂದು 60 ವರ್ಷದ ವೃದ್ಧನಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ಗ್ರಾಮದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ವಯಸ್ಸಾದ ರೋಗಿಗೆ ಆಹಾರವನ್ನು ನೀಡಲು ಕುಟುಂಬವು ಹಿಂಜರಿಯಿತು ಮತ್ತು ಸಾಯುವ ಕೆಲವೇ ಗಂಟೆಗಳ ಮೊದಲು, ಅವರು ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದರು.

ವೃದ್ಧನಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ಖಾತ್ರಿಯಾಗುತ್ತಿದ್ದಂತೆ ಸಂಬಂಧಿಕರೆಲ್ಲ ಆತನಿಂದ ದೂರ ಇರುವುದಕ್ಕೆ ಬಯಸಿದರು. ಸೋಮವಾರವೇ ಸೋಂಕಿತ ವೃದ್ಧ ಆರೋಗ್ಯವು ಹದಗೆಟ್ಟಿತ್ತು. ಯಾವ ಸಂದರ್ಭದಲ್ಲಿ ಹೀಗೆ ಆಗುತ್ತದೆ ಎನ್ನುವುದನ್ನು ಪ್ರಶ್ನಿಸಲು ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು ಎಂದು ಜಿಲ್ಲಾಡಳಿತವು ಸ್ಪಷ್ಟನೆ ನೀಡಿದೆ.

English summary
A 60-Years Old Man Under Home Isolation In A Ballari Village Succumbed Allegedly Due To Hunger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X