• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ; ಇದುವರೆಗೂ 101 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಆಗಸ್ಟ್ 29: ಸದಾ ಕೊರೊನಾದಿಂದಾಗಿ ಸಾವು-ನೋವುಗಳನ್ನೇ ಕಾಣುತ್ತಿದ್ದ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಸಂಭ್ರಮದ ವಾತಾವರಣ ತುಂಬಿತ್ತು. ಕಾರಣ, ಇದುವರೆಗೆ 101 ಸೋಂಕಿತ ಗರ್ಭಿಣಿಯರಿಗೆ ಹೆರಿಗೆಯನ್ನು ಅತ್ಯಂತ ಸುಸೂತ್ರವಾಗಿ ಮಾಡಿಸಿದ ಗಳಿಗೆಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಾಕ್ಷಿಯಾದರು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಜಿಲ್ಲಾ ಕೋವಿಡ್ ಆಸ್ಪತ್ರೆಯ ಪ್ರಸವ ಮತ್ತು ಸ್ತ್ರೀರೋಗ ವಿಭಾಗದ ತಜ್ಞ ವೈದ್ಯರು, ವೈದ್ಯರು ಸಂತೋಷ-ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೊರೊನಾ ಸೋಂಕಿತರಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದ ಗರ್ಭಿಣಿಯರಿಗೆ ಒಂದೆಡೆ ಕೊರೊನಾ ಭಯ ಮತ್ತೊಂದೆಡೆ ಹೆರಿಗೆಯ ಸಂದರ್ಭದಲ್ಲಿನ ಸಂಕಟಗಳೆಲ್ಲವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿದ ಆಸ್ಪತ್ರೆಯ ತಜ್ಞ ವೈದ್ಯರು, ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಇದುವರೆಗೆ 101 ಗರ್ಭಿಣಿಯರ ಹೆರಿಗೆಯನ್ನು ಅತ್ಯಂತ ಸುಸೂತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಡಿನಾಡು ಬಳ್ಳಾರಿಯಲ್ಲಿ 20 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು ನಗರದ ನಂತರ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೊಂಕಿತರ ಹೆರಿಗೆಗಳನ್ನು ಮಾಡಿಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ. ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಜೂನ್ 25ರಂದು ಮೊದಲ ಸೋಂಕಿತ ಗರ್ಭಿಣಿಯ ಹೆರಿಗೆಯನ್ನು ಸುಸೂತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾದ ವೈದ್ಯರು ಆ.28ರ ಸಂಜೆಯವರೆಗೆ 101 ಹೆರಿಗೆ ಮಾಡಿಸಿದ್ದಾರೆ.

28 ಸಹಜ ಹೆರಿಗೆಗಳು ಮತ್ತು 72 ಶಸ್ತ್ರಚಿಕಿತ್ಸೆ ಹೆರಿಗೆಗಳನ್ನು ಪ್ರಸವ ಮತ್ತು ಸ್ತ್ರೀರೋಗ ವಿಭಾಗದ ತಜ್ಞ ವೈದ್ಯರು ಮಾಡಿಸಿದ್ದಾರೆ. 5 ಮಕ್ಕಳು ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗೆ 15528 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಬಿಜೆ ತಂಡ (ಪ್ರಸವ ಮತ್ತು ಸ್ತ್ರೀರೋಗ ವಿಭಾಗ) ದಲ್ಲಿ ಸುಯಗ್ನ ಜೋಶಿ, ಖಾಜಿ, ವಿಜಯಲಕ್ಷ್ಮೀ, ಜಯಪ್ರದಾ, ಶಾರದಾ, ವೀಣಾ, ಅಶ್ರಫ್, ಸ್ವಾತಿ, ಪೂರ್ಣಿಮಾ, ಸರಸ್ವತಿ, ಲಾವಣ್ಯ, ಸ್ನಾತಕೋತ್ತರ ವಿದ್ಯಾರ್ಥಿಗಳಾದ ಕಾವ್ಯ, ರುಕ್ಸಾ, ರಾಜೇಶ್ವರಿ ಸೇರಿದಂತೆ ಸ್ಟಾಫ್ ನರ್ಸ್‍ಗಳು, ಅರಿವಳಿಕೆ ತಜ್ಞರು, ಮಕ್ಕಳ ವೈದ್ಯರು ಈ ಯಶಸ್ಸಿಗೆ ಕಾರಣಿಕರ್ತರಾಗಿದ್ದಾರೆ.

English summary
So far 101 deliveries done in ballari covid hospital to corona virus infected pregnants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X