ಜಮಖಂಡಿಗೆ ರಜೆ ಕಳೆಯಲು ಬಂದಿದ್ದ ಯೋಧ ಅಪಘಾತದಲ್ಲಿ ಸಾವು
ಜಮಖಂಡಿ, ಜುಲೈ 16: ರಜೆ ಕಳೆಯಲೆಂದು ಊರಿಗೆ ಬಂದಿದ್ದ ಯೋಧರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಕಾರು ಮತ್ತು ಬೈಕ್ ನಡುವೆ ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಯೋಧ ಸಾವನ್ನಪ್ಪಿದ್ದರೆ, ಯೋಧನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಬ್ಯುಲೆನ್ಸ್ಗೆ ಹೋಗೋಕೆ ಜಾಗ ಬಿಡಲ್ವಾ ಹಾಗಾದರೆ ದಂಡ ಕಟ್ಟಿ
ಜಮಖಂಡಿ ತಾಲ್ಲೂಕಿನ ಮಧರಕಂಡಿ ಗ್ರಾಮದ ಯೋಧ ನೀಲಕಂಠ ಘಟನಟ್ಟಿ (29) ಅಪಘಾತದಲ್ಲಿ ಮೃತಪಟ್ಟವರು. ನೀಲಕಂಠ ಮಧ್ಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ತಿಂಗಳ ಅವಧಿ ರಜೆ ದೊರೆತಿದ್ದು, ರಜೆ ಕಳೆಯಲು ಗ್ರಾಮಕ್ಕೆ ಬಂದಿದ್ದರು. ತನ್ನ ಹೆಂಡತಿಯೊಂದಿಗೆ ಆಕೆಯ ತವರು ಮನೆ ಮಹಾರಾಷ್ಟ್ರದ ಹುಲಜಂತಿಗೆ ಹೋಗಿ ಬರುವಾಗ ಅಪಘಾತ ನಡೆದಿದೆ.