10 ಸಾವಿರ ಕೊಟ್ಬಿಡಿ, ಬೇಕಾದ ಹಾಗೆ ಕಾಪಿ ಮಾಡ್ಕೊಳಿ...
ಬಾಗಲಕೋಟೆ, ನವೆಂಬರ್ 19: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಪುನರ್ ವಸತಿ ಕೇಂದ್ರದಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಪದವಿ ವಿದ್ಯಾರ್ಥಿಗಳು ಬಿಂದಾಸ್ ಆಗಿ ಸಾಮೂಹಿಕ ನಕಲು ಮಾಡಿರುವ ಘಟನೆ ನಡೆದಿದೆ.
ಕಾಪಿ ಹೊಡೆಯದಂತೆ ತಡೆಯಲು ವಿದ್ಯಾರ್ಥಿಗಳಿಗೆ 'ಪೆಟ್ಟಿಗೆ' ಹೆಲ್ಮೆಟ್!
ಢವಳೇಶ್ವರದ ಸರ್.ಎಂ ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ. ಕಾಲೇಜಿನ ಸಿಬ್ಬಂದಿಯೇ ನಕಲು ಮಾಡಲು ಕುಮ್ಮಕ್ಕು ನೀಡಿರುವ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿಗಳಿಗೆ ನಕಲು ಪೂರೈಕೆಗೆ ವಿಷಯವೊಂದಕ್ಕೆ 10 ಸಾವಿರ ಹಣವನ್ನು ಸಿಬ್ಬಂದಿ ವಸೂಲು ಮಾಡಿರುವುದಾಗಿ ತಿಳಿದುಬಂದಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಅಧೀನದಲ್ಲಿರುವ ಕಾಲೇಜು ಇದಾಗಿದೆ.